Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ | Azadi Ka Amrit Mahotsav Indian Cinema Before Independence and After Independence


ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.

Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ

ಸಾಂದರ್ಭಿಕ ಚಿತ್ರ

ಭಾರತೀಯರ ನಿತ್ಯ ಜೀವನದಲ್ಲಿ ಸಿನಿಮಾ (Cinema) ಎಂಬುದು ಹಾಸು ಹೊಕ್ಕಾಗಿದೆ. ಸ್ಟಾರ್ ನಟ/ನಟಿಯರನ್ನು ಆರಾಧಿಸುವ ಕಾರ್ಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಭಾರತಕ್ಕೆ ಸಿನಿಮಾ (Indian Cinema) ಕಾಲಿಟ್ಟು 100 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ತಂತ್ರಜ್ಞಾನ, ವೀಕ್ಷಕರ ವಲಯ ಹೀಗೆ ಪ್ರತಿ ವಿಚಾರದಲ್ಲೂ ಹಲವು ಬದಲಾವಣೆಗಳನ್ನು ಭಾರತದ ಚಿತ್ರರಂಗ ಕಂಡಿದೆ.

ಮೊದಲು ಬ್ಲ್ಯಾಕ್ ಆ್ಯಂಡ್ ವೈಟ್ ಸಿನಿಮಾಗಳು ಸಿದ್ಧಗೊಳ್ಳುತ್ತಿದ್ದವು. ಈಗ ಕಲರಿಂಗ್​ನಲ್ಲೇ ಮೋಡಿ ಮಾಡುವ ತಂತ್ರಜ್ಞಾನ ಬದಿದೆ. ಮೊದಲಿನ ಸಿನಿಮಾಗಳಿಗೆ ಜೀರೋ ಗ್ರಾಫಿಕ್ಸ್ ಇರುತ್ತಿತ್ತು. ಈಗ ಗ್ರಾಫಿಕ್ಸ್ ಬಳಕೆ ಮಾಡಿಕೊಂಡೇ ಸಂಪೂರ್ಣ ಸಿನಿಮಾ ಸಿದ್ಧಗೊಂಡ ಉದಾಹರಣೆ ಇದೆ. ಡಾರ್ವಿನ್ ಅವರ ವಿಕಸನಾ ವಾದ ಚಿತ್ರರಂಗಕ್ಕೆ ಉತ್ತಮ ರೀತಿಯಲ್ಲಿ ಅನ್ವಯ ಆಗುತ್ತದೆ.

ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ. ಇದು ಮೂಕಿ ಚಿತ್ರವಾಗಿತ್ತು. ಆದರೆ, ಈ ಚಿತ್ರ ಅನೇಕರ ಮೇಲೆ ಪ್ರಭಾವ ಬೀರಿತು. ಈ ಚಿತ್ರದಿಂದ ಸ್ಫೂರ್ತಿ ಪಡೆದು ಹಲವು ನಿರ್ದೇಶಕರು ಹುಟ್ಟಿಕೊಂಡರು. ಆ ಬಳಿಕ ಸುಮಾರು 20 ವರ್ಷಗಳ ಕಾಲ ತೆರೆಗೆ ಬಂದಿದ್ದ ಎಲ್ಲ ಚಿತ್ರಗಳು ಮೂಕಿಯೇ. 1931ರ ಮಾರ್ಚ್​ 14ರಂದು ‘ಆಲಂ ಆರ’ ಸಿನಿಮಾ ತೆರೆಗೆ ಬಂತು. ಇದು ಮೊದಲ ಸೌಂಡ್​ ಒಳಗೊಂಡ ಚಿತ್ರ.

ಬ್ರಿಟಿಷ್ ಆಳ್ವಿಕೆ ಕೊನೆಗೊಂಡ ಬಳಿಕದ ಸಮಯವನ್ನು ಸುವರ್ಣ ಯುಗ ಎಂದು ಸಿನಿ ಪಂಡಿತರು ಕರೆಯುತ್ತಾರೆ. 1940-60ರ ಸಮಯ ಭಾರತದ ಪಾಲಿಗೆ ವಿಶೇಷವಾಗಿತ್ತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಮೃಣಾಲ್ ಸೇನ್ ಮೊದಲಾದವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದರು. ಇದರ ಜತೆಗೆ ದಕ್ಷಿಣ ಭಾರತದ ಕೊಡುಗೆ ಕೂಡ ದೊಡ್ಡದಿದೆ.

ಸಿನಿಮಾದಲ್ಲಿ ಹಾಡುಗಳು, ಡ್ಯಾನ್ಸ್​, ಫೈಟ್ ಹಾಗೂ ಹೀರೋಯಿಸಂ ಚಿತ್ರಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದನ್ನು ಕಮರ್ಷಿಯಲ್ ಸಿನಿಮಾಗಳು ಎಂದು ಕರೆಯಲಾಗುತ್ತದೆ. ಲಾಭದ ದೃಷ್ಟಿಯಲ್ಲಿ ಈ ರೀತಿಯ ಸಿನಿಮಾಗಳನ್ನು ತಯಾರಿಸಲಾಗುತ್ತದೆ. ರಾಜ್​ಕುಮಾರ್, ರಜನಿಕಾಂತ್, ಅಮಿತಾಭ್​ ಬಚ್ಚನ್, ಎನ್​ಟಿಆರ್​ ಮೊದಲಾದ ಸ್ಟಾರ್ ನಟರು ಭಾರತ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

TV9 Kannada


Leave a Reply

Your email address will not be published. Required fields are marked *