B 1.617 ಆಯ್ತು.. ಇದೀಗ B.1.1.28.2.. ಹಿಂದಿನ ವೇರಿಯಂಟ್​ಗಿಂತಲೂ ಇದೆಷ್ಟು ಅಪಾಯಕಾರಿ..?

B 1.617 ಆಯ್ತು.. ಇದೀಗ B.1.1.28.2.. ಹಿಂದಿನ ವೇರಿಯಂಟ್​ಗಿಂತಲೂ ಇದೆಷ್ಟು ಅಪಾಯಕಾರಿ..?

ಭಾರತದಲ್ಲಿ ಎರಡನೇ ಅಲೆ ಅಬ್ಬರ ಕಡಿಮೆ ಆಗ್ತಾ ಇದ್ದಂತೆಯೇ ಮೂರನೇ ಅಲೆಯ ಸುಳಿವು ಸಿಕ್ತಾ ಇದ್ಯಾ? ಈಗ ಬರ್ತಾ ಇರುವ ಇನ್ ಫಾರ್ಮೇಷನ್ ನೋಡಿದ್ರೆ ಮೂರನೇ ಅಲೆಗೆ ಇದೇ ಕಾರಣವಾಗಿ ಬಿಡುತ್ತಾ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ.

ಕೊರೊನಾ ಮೂರನೇ ಅಲೆ ಭಾರತದಲ್ಲಿ ತಂದ ಆಘಾತ ಅಷ್ಟಿಷ್ಟಲ್ಲ. ನಿತ್ಯ ಬರ್ತಾ ಇದ್ದ ಕೇಸ್ ನಾಲ್ಕು ಲಕ್ಷದ ಗಡಿ ದಾಟಿ ಬಿಟ್ಟಿತ್ತು ಅಂದ್ರೆ ಅದೆಷ್ಟು ವೇಗವಾಗಿ ಹರಡಿಬಿಟ್ಟಿತ್ತು ನೋಡಿ. ವೇಗವಾಗಿ ಹರಡಿದ್ದೊಂದೇ ಅಲ್ಲ ಈ ಎರಡನೇ ಅಲೆ ಅಪಾಯಕಾರಿಯಾಗಿ, ಮಾರಣಾಂತಿಕವಾಗಿ ಬಿಟ್ಟಿದೆ. ಯುವಕರು, ಮಧ್ಯವಯಸ್ಕರು ಅನ್ನೋ ಬೇಧ ಭಾವ ಇಲ್ಲದೇ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು ಬಿಡ್ತಾ ಇದೆ ಎರಡನೇ ಅಲೆ. ಈ ಎರಡನೇ ಅಲೆಯಲ್ಲಿ ಆಕ್ಸಿಜನ್​​ಗಾಗಿ, ರೆಮ್ ಡೆಸಿವಿರ್​​ಗಾಗಿ, ಆಸ್ಪತ್ರೆಯಲ್ಲಿ ಬೆಡ್ ಗಾಗಿ ಜನ ಪರದಾಡಿದ್ದು ಅಷ್ಟಿಷ್ಟಲ್ಲ. ಅಂತು ಇಂತು ಎರಡನೇ ಅಲೆ ಜಯಿಸಿದೆವು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಆತಂಕ ಎದುರಾಗ್ತಾ ಇದೆ. ಅದೇ ಮೂರನೇ ಅಲೆ ಸುಳಿವು.

ಕೊರೊನಾ ಎರಡನೇ ಅಲೆಯ ಅಬ್ಬರ ದೇಶದಲ್ಲಿ ತಗ್ತಾ ಇದೆ. ಕಳೆದ ಎರಡು ತಿಂಗಳಿನಲ್ಲೇ ಕನಿಷ್ಠ ಕೇಸ್ ಗಳು ದಾಖಲಾಗ್ತಾ ಇವೆ. ಮೊನ್ನೆ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 86 ಸಾವಿರ ಇತ್ತು. ಕಳೆದ 24 ಗಂಟೆಯಲ್ಲಿ 92 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಹೊಸ ಪ್ರಕರಣಗಳಿಗಿಂತ ಡಿಸ್ಟಾರ್ಜ್ ಆಗ್ತಾ ಇರೋರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸಕ್ರಿಯ ಪ್ರಕರಣಗಳು ಕೂಡ ಇಳಿಕೆಯಾಗ್ತಾ ಇದ್ದಾವೆ. ದೇಶದಲ್ಲಿ ಹಾಲಿ 12 ಲಕ್ಷ ಸಕ್ರಿಯ ಪ್ರಕರಣಗಳಿವೆ. ಬಹುಶಃ ಇನ್ನೊಂದು ವಾರದಲ್ಲಿ ಕೊರೊನಾ ತಗ್ಗುವ ಸಾಧ್ಯತೆ ಕಾಣಿಸುತ್ತಿದೆ. ದೈನಂದಿನ ಪಾಸಿಟಿವಿಟಿ ದರ ಕೂಡ ಶೇಕಡಾ 4.62ಕ್ಕೆ ಕುಸಿದಿದ್ದು ಸಮಾಧಾನ ತರ್ತಾ ಇದೆ. ಎರಡನೇ ಅಲೆ ಅದೆಷ್ಟು ಗಂಡಾಂತರ ತಂದು ಬಿಡ್ತು ಅಂದ್ರೆ ಅದನ್ನು ಮರೆಯೋಕೇ ಆಗಲ್ಲ. ಹೇಗೋ ಎರಡನೇ ಅಲೆಯಿಂದ ಪಾರಾದ್ವಿ ಅಂದುಕೊಳ್ಳುವಷ್ಟರಲ್ಲಿ ಮೂರನೇ ಅಲೆಯ ಸುಳಿವು ಸಿಗ್ತಾ ಇದೆ.

ಮತ್ತೊಂದು ಅಪಾಯಕಾರಿ ರೂಪಾಂತರಿ ತಳಿ ಕೊರೊನಾ ಪತ್ತೆ
ಎರಡನೇ ಅಲೆಯ ತಳಿಗಿಂತಲು ಈ ತಳಿ ಇನ್ನಷ್ಟು ಅಪಾಯಕಾರಿ
2ನೇ ಅಲೆ ತಗ್ಗುತ್ತಿರುವ ಮಧ್ಯೆ ಮತ್ತೊಂದು ಆಘಾತಕಾರಿ ಮಾಹಿತಿ

ಹೇಗೋ ಎರಡನೇ ಅಲೆಯಿಂದ ಪಾರಾಗಿ ಬಿಟ್ವಿ ಅಂತ ನಿರಾಳರಾಗ್ತಾ ಇದ್ರೆ ಮೂರನೇ ಅಲೆಗೆ ಆಗಲೇ ಕೊರೊನಾ ಸಿದ್ಧತೆ ನಡೆಸ್ತಾ ಇರುವಂತೆ ಕಾಣಸ್ತಾ ಇದೆ. ಇಂತದ್ದೊಂದು ಶಂಕೆಯನ್ನು ತಜ್ಞರೇ ವ್ಯಕ್ತಪಡಿಸ್ತಾ ಇದಾರೆ. ಎರಡನೇ ಅಲೆಗೆ ಅದೊಂದು ರೂಪಾಂತರಿ ತಳಿಯೇ ಕಾರಣವಾಗಿ ಬಿಡ್ತು ಅನ್ನೋದು ಅಧ್ಯಯನದ ಹಂತದಲ್ಲಿದೆ. ಆದ್ರೆ ಈಗ ಮತ್ತೊಂದು ರೂಪಾಂತರಿ ಕೊರೊನಾ ತಳಿ ಪತ್ತೆಯಾಗಿದೆ. ಎರಡನೇ ಅಲೆಗೆ ಕಾರಣ ಎನ್ನಲಾಗಿರುವ ರೂಪಾಂತರಿ ಬಿ 1 617.. ಈಗ ಪತ್ತೆಯಾಗಿರುವ ರೂಪಾಂತರಿ ವೈರಸ್ ಗೆ ಹೆಸರಿಸಲಾಗಿರೋದು ಬಿ 1 1 28.2..ಇದು ಇನ್ನಷ್ಟು ಅಪಾಯಕಾರಿ ಅಂತಾನೇ ಪ್ರಾಥಮಿಕ ಮಾಹಿತಿಗಳಿಂದ ಗೊತ್ತಾಗ್ತಾ ಇದೆ. ಬಹುಷಃ ಇದು ಈಗ ಬಂದಿರೋ ಕೊರೊನಾ ರೂಪಾಂತರಿಗಿಂತ ಹೆಚ್ಚು ಡೇಂಜರಸ್ ಆಗಬಹುದು. ಇದರ ಹರಡುವಿಕೆಯ ವೇಗ ಮತ್ತು ಇದು ತರುವ ಅಪಾಯದ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ. ಆದ್ರೆ ಇದು ಪತ್ತೆಯಾಗಿರೋದಂತೂ ನಿಜ. ಇದನ್ನು ಪುಣೆಯ ರಾಷ್ಟ್ರೀಯ ವೈರಾಣು ವಿಜ್ಞಾನ ಅಧ್ಯಯನ ಕೇಂದ್ರದ ವಿಜ್ಞಾನಿಗಳೇ ಖಚಿತ ಪಡಿಸಿದ್ದಾರೆ.

ಇದು ಬಿ 1.617ಗಿಂತಲೂ ಹೆಚ್ಚು ಗಂಡಾಂತರ ತಂದು ಬಿಡುತ್ತಾ?
2ನೇ ಅಲೆಗಿಂತ ಮೂರನೇ ಅಲೆ ಇನ್ನಷ್ಟು ಭೀಕರವಾಗಿರುತ್ತಾ?

ಎಲ್ಲಿಂದ ಬಂತು ಈ ಬಿ 1.1.28.2 ಹೆಸರಿನ ರೂಪಾಂತರಿ ತಳಿ ಅಂತ ನೋಡಿದ್ರೆ ಇದು ಪುನಃ ಬಂದಿದ್ದು ವಿದೇಶದಿಂದಲೇ. ಈ ಹಿಂದೆ ಬ್ರಿಟನ್ ವೈರಸ್, ಬ್ರೆಜಿಲ್ ವೈರಸ್, ದಕ್ಷಿಣ ಆಫ್ರಿಕಾ ವೈರಸ್ ಅಂತೆಲ್ಲ ಬರ್ತಾ ಇತ್ತು. ಬಳಿಕ ಭಾರತದಲ್ಲೇ ಕೊರೊನಾ ರೂಪಾಂತರಿಯಾಗಿದೆ ಅಂತ ಹೇಳಲಾಗಿತ್ತು. ಈಗ ಪತ್ತೆಯಾಗಿರುವ ಈ ಬಿ 1.1.28.2 ಹೆಸರಿನ ರೂಪಾಂತರಿ ತಳಿ ವಿದೇಶದಿಂದ ಬಂದವರಲ್ಲೇ ಪತ್ತೆಯಾಗಿದೆ. ಬ್ರೆಜಿಲ್ ಮತ್ತು ಬ್ರಿಟನ್ ನಿಂದ ಭಾರತಕ್ಕೆ ಬಂದಿರುವವರ ರಕ್ತದ ಮಾದರಿಯಲ್ಲಿ ಇದು ಪತ್ತೆಯಾಗಿದೆ ಅಂತ ರಿಪೋರ್ಟ್ ಬಂದಿದೆ. ಈ ರೂಪಾಂತರಿ ತಳಿಯ ಕೊರೊನಾ ವೈರಸ್ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿದೆ ಅಂತ ಪ್ರಾಥಮಿಕ ಅಧ್ಯಯನಗಳಿಂದ ತಿಳಿದು ಬಂದಿದೆ. ರೋಗ ಲಕ್ಷಣಗಳೇ ಹೆಚ್ಚಿರುವಾಗ ಇನ್ನು ಅಪಾಯ ಎಷ್ಟಿರಬಹುದು ಅನ್ನೋ ಆತಂಕವೂ ಶುರುವಾಗಿದೆ. ಸದ್ಯಕ್ಕೆ ಈ ರೂಪಾಂತರಿ ವೈರಸ್ ಪತ್ತೆಯಾಗಿರುವವರಿಗೆ ಚಿಕಿತ್ಸೆ ಕೊಡಲಾಗ್ತಾ ಇದೆ. ಆದ್ರೆ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಈಗ ಮತ್ತಷ್ಟು ಭೀತಿ ತರ್ತಾ ಇರೋ ವಿಚಾರ ಅಂದ್ರೆ ಈ ರೂಪಾಂತರಿ ತಳಿಯೇ ಮೂರನೇ ಅಲೆಗೆ ಚಾಲನೆ ಕೊಟ್ಟು ಬಿಡುತ್ತಾ ಅನ್ನೋದು. ಹೀಗಾದರೆ 2ನೇ ಅಲೆಗಿಂತಲೂ ಈ ರೂಪಾಂತರಿ ತಳಿಯಿಂದ ಶುರುವಾಗಬಹುದಾದ ಮೂರನೇ ಅಲೆ ಮತ್ತಷ್ಟು ಭೀಕರವಾಗಿರುತ್ತಾ ಅನ್ನೋದೇ ಕಳವಳಕ್ಕೆ ಕಾರಣವಾಗ್ತಾ ಇದೆ.

ಇನ್ನೆಷ್ಟು ರೂಪಾಂತರಿ ತಳಿಯನ್ನು ಸೃಷ್ಟಿಸಿಕೊಳ್ಳುತ್ತೆ ಕೊರೊನಾ?
ರೂಪಾಂತರವಾದಷ್ಟು ಹೆಚ್ಚು ಅಪಾಯಕಾರಿಯಾಗ್ತಾ ಹೋಗತ್ತಾ?
ಮುಂದೆ ಕೊರೊನಾ ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸಿ ಬಿಡುತ್ತಾ?

ಕೊರೊನಾ ವೈರಸ್ ಬಂದಾಗಿನಿಂದಲೂ ರೂಪಾಂತರಿ ತಳಿಯ ಬಗ್ಗೆ ಆಗಾಗ ವರದಿಗಳು ಬರ್ತಾನೇ ಇದ್ದಾವೆ. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಎಲ್ಲಾ ದೇಶಗಳಲ್ಲೂ ಬಹುತೇಕ ಕಡೆ ರೂಪಾಂತರಿ ವೈರಸ್ ಪತ್ತೆಯಾಗ್ತಾನೇ ಇದೆ. ನಿತ್ಯ ಒಂದೊಂದು ಕಡೆಯಿಂದ ಒಂದೊಂದು ರೀತಿಯ ಮಾಹಿತಿಗಳು ಬರ್ತಾನೇ ಇದ್ದಾವೆ. ಅದೆಷ್ಟು ರೂಪಾಂತರವಾಗಿದ್ಯೋ ನಿಖರವಾಗಿ ಹೇಳಲು ಸಾಧ್ಯವಾಗದಷ್ಟು ಕೊರೊನಾ ವೈರಸ್ ರೂಪಾಂತರವಾಗ್ತಾ ಇದೆ. ಇದು ಮುಂದೆ ಇನ್ನೆಷ್ಟು ಅನಾಹುತ ತರುತ್ತೋ ಅನ್ನೋದೇ ಆತಂಕ ತರುವ ವಿಚಾರ. ಈಗ ಗೊತ್ತಾಗ್ತಾ ಇರುವ ವಿಚಾರ ಏನು ಅಂದ್ರೆ ಯಾವುದೇ ವೈರಸ್ ರೂಪಾಂತರವಾದಷ್ಟು ಅದು ಇನ್ನಷ್ಟು ಸ್ಟ್ರಾಂಗ್ ಆಗುತ್ತ ಹೋಗುತ್ತೆ. ಹೀಗಾಗಿ ಈ ರೂಪಾಂತರಿ ತಳಿಗಳು ಇನ್ನಷ್ಟು ಅನಾಹುತಗಳನ್ನು ಮುಂದಿನ ದಿನಗಳಲ್ಲಿ ಸೃಷ್ಟಿಸಿ ಬಿಡುತ್ತವಾ ಅನ್ನೋ ಭೀತಿ ಶುರುವಾಗಿದೆ.

ಕೊರೊನಾ ಚಿಕಿತ್ಸಾ ವಿಧಾನವನ್ನು ಮತ್ತಷ್ಟು ಬದಲಿಸಬೇಕಾ?
ರೂಪಾಂತರಿ ತಳಿಯ ಸೋಂಕು ತಗುಲಿದ್ರೆ ಹೆಚ್ಚಿನ ಚಿಕಿತ್ಸೆ ಬೇಕಾ?
2ನೇ ಅಲೆ ಕೊಟ್ಟ ಶಾಕ್ ಮತ್ತೆ ಆಗದಂತೆ ತಡೆಯೋದು ಹೇಗೆ?

ಕಳೆದ ಒಂದೂವರೆ ವರ್ಷದಿಂದ ವೈದ್ಯಕೀಯ ವಲಯದಲ್ಲಿ, ವಿಜ್ಞಾನಿಗಳ ವಲಯದಲ್ಲಿ ನಿತ್ಯ ನಿರಂತರವಾಗಿ ಅಧ್ಯಯನಗಳು,ಸಂಶೋಧನೆಗಳು ನಡೆಯುತ್ತಲೇ ಇವೆ. ಒಂದು ಕಡೆ ಈ ಕೊರೊನಾ ಕಂಟ್ರೋಲ್ ಮಾಡೋದಕ್ಕೆ ವ್ಯಾಕ್ಸಿನ್ ಕಂಡು ಕೊಳ್ಳಲಾಯಿತು. ಈಗ ಈ ಕೊರೊನಾಗೆ ನಿಖರವಾದ ಒಂದು ಮೆಡಿಸಿನ್ ಕೂಡ ಕಂಡು ಕೊಳ್ಳುವ ಹಾದಿಯಲ್ಲಿ ಸಂಶೋಧಕರು ಈಗಾಗಲೇ ಬಹುದೂರ ಕ್ರಮಿಸಿದ್ದಾರೆ. ಆದ್ರೆ ಈ ರೂಪಾಂತರಿಯಿಂದ ಸಂಶೋಧನೆಗೂ ಪದೇ ಪದೇ ಸವಾಲು ಎದುರಾಗ್ತಾ ಇದೆ. ಹಾಲಿ ಪತ್ತೆಯಾಗಿರುವ ವೈರಸ್ ಗೆ ಮದ್ದು ಕಂಡು ಕೊಳ್ಳೋದ್ರೊಳಗೆ ಇನ್ನೊಂದು ರೂಪಾಂತರಿ ಪ್ರತ್ಯಕ್ಷವಾಗಿ ಬಿಡುತ್ತೆ. ಹೀಗಾಗಿ ಈಗಿರುವ ವ್ಯಾಕ್ಸಿನ್, ಈಗ ಕೊಡಲಾಗ್ತಾ ಇರೋ ಮೆಡಿಸಿನ್ ಮುಂದಿನ ದಿನಗಳಲ್ಲೂ ಇಷ್ಟೇ ಪರಿಣಾಮ ಬೀರುತ್ತೆ, ಗುಣಮುಖರನ್ನಾಗಿಸುತ್ತೆ ಅಂತ ಹೇಳಲು ನಿಖರವಾಗಿ ಹೇಳಲು ಆಗ್ತಾನೇ ಇಲ್ಲ. ಮುಂದೆ ಮತ್ತೊಂದಿಷ್ಟು ರೂಪಾಂತರಿ ತಳಿಯ ವೈರಸ್ ಗಳು ಹರಡತೊಡಗಿದ್ರೆ ಕೊರೊನಾ ಚಿಕಿತ್ಸಾ ವಿಧಾನವನ್ನೇ ಬದಲಿಸಿಕೊಳ್ಳಬೇಕಾಬಹುದು. ಈಗ ಚರ್ಚೆಯಾಗ್ತಾ ಇರೋದು ಇದೇ ವಿಚಾರ. 2ನೇ ಅಲೆ ಕೊಟ್ಟ ಶಾಕ್ ಮತ್ತೆ ಆಗದಂತೆ ತಡೆಯೋದು ಹೇಗೆ. ಮತ್ಯಾವ ರೂಪದಲ್ಲಿ ಅಟ್ಟಹಾಸ ಮೆರೆದು ಬಿಡುತ್ತೆ ಕೊರೊನಾ ಅಂತಾನೇ ಈಗ ತಜ್ಞರು ಕೂಡ ಚರ್ಚೆ ಮಾಡ್ತಾ ಇದ್ದಾರೆ.

ಅನಿರೀಕ್ಷಿತ ಆಘಾತ ತಂದುಬಿಡುತ್ತೆ ಈ ಡೆಡ್ಲಿ ಕೊರೊನಾ ವೈರಸ್
ಮೊದಲ ಅಲೆಯಲ್ಲಿ ಕಾಣದ ಭೀಕರತೆ 2ನೇ ಅಲೆಯಲ್ಲಿ ಅನಾವರಣ
2ನೇ ಅಲೆಗಿಂತಲೂ ಭಯಂಕರವಾಗಿರುತ್ತಾ ಮುಂದಿನ 3ನೆಯ ಅಲೆ?

ಡೆಡ್ಲಿ ಕೊರೊನಾ ವೈರಸ್ ಅನಿರೀಕ್ಷಿತ ಆಘಾತ ತಂದು ಬಿಡ್ತಾ ಇದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಇದರ ಭೀಕರತೆ ಅನಾವರಣವಾಗಿ ಬಿಟ್ಟಿದೆ. ಮೊದಲನೇ ಅಲೆಯಲ್ಲಿ ಕಾಣಿಸದೇ ಇದ್ದ ಹೊಸ ಹೊಸ ಸಮಸ್ಯೆಗಳು ಎರಡನೇ ಅಲೆಯಲ್ಲಿ ಕಾಣಿಸಿಕೊಂಡು ಹೆಚ್ಚು ಮಾರಣಾಂತಿಕವಾಗಿ ಬಿಟ್ಟಿದೆ ಕೊರೊನಾ. ಈಗ ಮೂರನೇ ಅಲೆ ಬಗ್ಗೆ ತಜ್ಞರು ಆಗಲೇ ಎಚ್ಚರಿಕೆ ಕೊಡ್ತಾನೇ ಇದ್ದಾರೆ. ಈಗ ನೋಡಿದ್ರೆ ಮತ್ತಷ್ಟು ರೂಪಾಂತರಿಯಾಗ್ತಾನೇ ಬರ್ತಾ ಇರುವ ಈ ಕೊರೊನಾ ಮೂರನೇ ಅಲೆಯಲ್ಲಿ ಭಯಂಕರವಾಗಿ ಕಾಡಿ ಬಿಡುತ್ತಾ ಅನ್ನೋ ಆತಂಕ ಸಹಜವಾಗಿ ಕಾಡ್ತಾ ಇದೆ.

ಈ ಕೊರೊನಾ ವೈರಸ್ ಅದೆಷ್ಟು ರೂಪಾಂತರವಾಗುತ್ತೋ, ಮುಂದೆ ಮತ್ತೆಷ್ಟು ಅಪಾಯ ತರುತ್ತೋ, ನಿಖರವಾಗಿ ಹೇಳಲು ಸಾಧ್ಯವಾಗ್ತಾ ಇಲ್ಲ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಕಾಡ್ತಾ ಇರುವ ಕೊರೊನಾ ವೈರಸ್ ಮಣಿಸೋದು ಮನುಕುಲಕ್ಕೇ ಒಂದು ಸವಾಲಾಗಿ ಹೋಗಿದೆ.

The post B 1.617 ಆಯ್ತು.. ಇದೀಗ B.1.1.28.2.. ಹಿಂದಿನ ವೇರಿಯಂಟ್​ಗಿಂತಲೂ ಇದೆಷ್ಟು ಅಪಾಯಕಾರಿ..? appeared first on News First Kannada.

Source: newsfirstlive.com

Source link