ಬಳ್ಳಾರಿ ಸ್ಮಶಾನದಲ್ಲಿ ಸಚಿವ ಶ್ರೀರಾಮುಲು ಸ್ವಚ್ಛತಾ ಕಾರ್ಯ, 30 ಸ್ಮಶಾನಗಳ ಅಭಿವೃದ್ಧಿಗೆ ಸಂಕಲ್ಪ
ಬಳ್ಳಾರಿ: ಸಾರಿಗೆ ಸಚಿವ ಬಿ. ಶ್ರೀರಾಮುಲು ಇಂದು ತಮ್ಮ ಊರಾದ ಬಳ್ಳಾರಿಯಲ್ಲಿ ನಸುಕಿನ ಜಾವವೇ ಸಶ್ಮಾನಕ್ಕೆ (graveyard) ಭೇಟಿ ಕೊಟ್ಟಿದ್ದಾರೆ. ಬಳ್ಳಾರಿಯ ತಾಳೂರ ರಸ್ತೆಯ ಸಶ್ಮಾನದಲ್ಲಿ ಸ್ವಚ್ಚತಾ ಕಾರ್ಯದಲ್ಲಿ (Swachhta) ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಶ್ಮಾನದಲ್ಲಿ ಸ್ವತಃ ಜೆಸಿಬಿ ವಾಹನ ಡ್ರೈವಿಂಗ್ ಮಾಡಿಕೊಂಡು, ಸ್ವಚ್ಛತೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವ ಶ್ರೀರಾಮುಲು (B Sriramulu) ಬಳ್ಳಾರಿಯ (bellary) 30 ಸಶ್ಮಾನಗಳ ಅಭಿವೃದ್ಧಿ ಕ್ರಮ ಕೈಗೊಂಡಿರುವೆ. ಸಶ್ಮಾನಗಳ ಅಭಿವೃದ್ಧಿಗೆ ಕಾಯಕಲ್ಪ ಕಲ್ಪಿಸುವೆ. ಸಶ್ಮಾನದಲ್ಲಿ ಅಂತ್ಯಕ್ರಿಯೆ ಆಗಮಿಸುವವರಿಗೆ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲು ಪಾಲಿಕೆ ಆಯುಕ್ತರಿಗೆ ತಿಳಿಸಿರುವೆ ಎಂದು ಹೇಳಿದರು.
ಈ ಮಧ್ಯೆ, ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು ಅವರು ಸೋಮಶೇಖರ ರೆಡ್ಡಿ ಬಿಜೆಪಿ ಬಿಟ್ಟು ಹೋಗಲ್ಲ ಎಂದು ನಗುತ್ತಾ ತಿಳಿಸಿದರು. ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರವಾಗಿ ಮಾತನಾಡಿದ ರಾಮುಲು ವಿಧಾನಸಭೆಯಲ್ಲಿ ನಾಯಕರ ಜೊತೆ ಮಾತನಾಡುವ ವೇಳೆ ಸೀರಿಯಸ್ ಆಗಿ ಮಾತನಾಡಿಲ್ಲ. ಕಾಂಗ್ರೆಸ್ ಶಾಸಕರು ಸಹ ನನ್ನ ಜೊತೆಗೆ ಇರುತೀವಿ ಅಂತಾರೆ. ಸಿದ್ದರಾಮಯ್ಯ ಸಹ ಅನೇಕ ಬಾರಿ ಹೇಳಿದ್ದಾರೆ. ನಮಗೂ ಅವಕಾಶ ಕೊಡಿ. ನಿಮ್ಮ ಜೊತೆ ಬರತೇವಿ ಅಂತಾರೆ! ಸೋಮಶೇಖರ್ ರೆಡ್ಡಿ ಈ ಭಾಗದಲ್ಲಿ ಬಿಜೆಪಿ ಪಕ್ಷದ ಶಕ್ತಿಯಾಗಿದ್ದಾರೆ. ಸೋಮಶೇಖರ್ ರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಬರಲ್ಲ ಎಂದು ಸ್ಪಷ್ಟಪಡಿಸಿದರು.
ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ವೈದ್ಯರು, ಸಿಬ್ಬಂದಿಗಳ ನಿರ್ಲ್ಯಕ್ಷದಿಂದ ರೋಗಿ ಸಾವು ವಿಚಾರವಾಗಿ ಮಾತನಾಡಿದ ಸಚಿವ ಶ್ರೀರಾಮುಲು ಕಳೆದ ರಾತ್ರಿ ಹೃದಯಾಘಾತದಿಂದ ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ಸಿಗದೇ ರೈತ ಸಾವು ಪ್ರಕರಣದಲ್ಲಿ ಚಿಕಿತ್ಸೆ ಸಿಗದೇ ರೈತ ಸಾವನಪ್ಪಿರುವ ಬಗ್ಗೆ ವರದಿ ತರಿಸಿಕೊಳ್ಳುವೆ. ಆಸ್ಪತ್ರೆಯಲ್ಲಿ ಬಡವರಿಗೆ 24 ಗಂಟೆಯೂ ಸೂಕ್ತ ಚಿಕಿತ್ಸೆ ನೀಡಬೇಕು. ಈ ಕುರಿತು ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವೆ. ಪ್ರಾಥಮಿಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕುರಿತು ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸುವೆ ಎಂದರು.
Also Read:
Devaloka Apsara Rambha: ದೇವ ನರ್ತಕಿ ರಂಭೆ ಭೂಲೋಕದಲ್ಲಿ ಬಾಳೆಗಿಡವಾಗಿ ಜನಿಸಿದ್ದು ಹೇಗೆ ಮತ್ತು ಏಕೆ?