Babar Azam beats Virat Kohli, Chris Gayle’s Record | T20 Records: ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ಬಾಬರ್ ಆಝಂ

TV9 Digital Desk

| Edited By: Zahir Yusuf

Updated on: Mar 18, 2023 | 10:08 PM

Babar Azam Records: ಈ ಬಾರಿಯ ಪಿಎಸ್​ಎಲ್​ನಲ್ಲಿ ಪೇಶಾವರ್ ಝಲ್ಮಿ ಪರ ಆಡುತ್ತಿರುವ ಬಾಬರ್ ಆಝಂ 11 ಇನಿಂಗ್ಸ್​ ಮೂಲಕ ಒಟ್ಟು 522 ರನ್​ ಕಲೆಹಾಕಿದ್ದಾರೆ.

Mar 18, 2023 | 10:08 PM

ಈ ಬಾರಿಯ ಪಾಕಿಸ್ತಾನ್ ಸೂಪರ್​ ಲೀಗ್​ನಲ್ಲಿ 5 ಅರ್ಧಶತಕ ಹಾಗೂ 1 ಶತಕ ಬಾರಿಸುವ ಮೂಲಕ ಪಾಕ್ ತಂಡದ ನಾಯಕ ಬಾಬರ್ ಆಝಂ ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಿದ್ದಾರೆ. ಇದರೊಂದಿಗೆ ಚುಟುಕು ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 9 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ಪಾಕ್ ತಂಡದ ನಾಯಕನ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ವೆಸ್ಟ್ ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಒಟ್ಟು 249 ಇನಿಂಗ್ಸ್​ಗಳಲ್ಲಿ 9 ಸಾವಿರ ರನ್ ಪೂರೈಸಿದ್ದರು.

ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 271 ಟಿ20 ಇನಿಂಗ್ಸ್​ಗಳಲ್ಲಿ (ಭಾರತ+ಆರ್​ಸಿಬಿ) ಈ ಸಾಧನೆ ಮಾಡಿದ್ದರು. ಇದೀಗ ಇವರಿಬ್ಬರನ್ನು ಹಿಂದಿಕ್ಕಿ ಬಾಬರ್ ಆಝಂ ಹೊಸ ದಾಖಲೆ ನಿರ್ಮಿಸಿರುವುದು ವಿಶೇಷ.

ಬಾಬರ್ ಆಝಂ ಕೇವಲ 245 ಟಿ20 ಇನಿಂಗ್ಸ್​ಗಳ ಮೂಲಕ 9 ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ್ದಾರೆ. ಈ ಮೂಲಕ ಈ ಹಿಂದೆ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಪಾಕ್ ತಂಡದ ನಾಯಕ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇನ್ನು ಈ ಬಾರಿಯ ಪಿಎಸ್​ಎಲ್​ನಲ್ಲಿ ಪೇಶಾವರ್ ಝಲ್ಮಿ ಪರ ಆಡುತ್ತಿರುವ ಬಾಬರ್ ಆಝಂ 11 ಇನಿಂಗ್ಸ್​ ಮೂಲಕ ಒಟ್ಟು 522 ರನ್​ ಕಲೆಹಾಕಿದ್ದಾರೆ. ಇದಾಗ್ಯೂ ತಂಡವನ್ನು ಫೈನಲ್​ಗೆ ಕೊಂಡೊಯ್ಯುವಲ್ಲಿ ವಿಫಲರಾದರು.

ತಾಜಾ ಸುದ್ದಿ

Most Read Stories

TV9 Kannada

Leave a Reply

Your email address will not be published. Required fields are marked *