Bangla Murder: ಬಾಂಗ್ಲಾದಲ್ಲೂ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಕೊಲೆ, ಶ್ರದ್ಧಾ ಕೊಲೆ ಆರೋಪಿ ಕೂಡ ಬಾಂಗ್ಲಾದವನೇ – Bangladesh Murder: Muslim man beheads Hindu girlfriend after she got to know he was married, Shraddha Walker Murderer Aftab also from Bangladesh


ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತಿದೆ. ಇದೀಗ ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ.

Bangla Murder: ಬಾಂಗ್ಲಾದಲ್ಲೂ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಕೊಲೆ, ಶ್ರದ್ಧಾ ಕೊಲೆ ಆರೋಪಿ ಕೂಡ ಬಾಂಗ್ಲಾದವನೇ

Abu Bakar

Image Credit source: First Spot

ಶ್ರದ್ಧಾ ವಾಕರ್ (Shraddha Walker) ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತಿದೆ. ಇದೀಗ ಆರೋಪಿ ವಿಚಾರಣೆ ವೇಳೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ಬಾಂಗ್ಲಾದೇಶದವನು ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಇದರ ಬೆನ್ನಲ್ಲೇ ಶ್ರದ್ಧಾ ಹತ್ಯೆ ಮಾದರಿಯ ಮತ್ತೊಂದು ಕೊಲೆ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದಲ್ಲಿ ಮುಸ್ಲಿಂ ಯುವಕ ಅಬೂಬಕರ್ ಎಂಬಾತ ಹಿಂದೂ ಯುವತಿಯ ಶಿರಚ್ಛೇದ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ನವೆಂಬರ್ 7 ರಂದು ಬಾಂಗ್ಲಾದೇಶದ ಸೋನದಂಗಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ, ಅಬೂಬಕರ್ ಕವಿತಾ ರಾಣಿ ಎಂಬಾಕೆಯನ್ನು ಹತ್ಯೆ ಮಾಡಿದ್ದ, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು.

ವಾಯ್ಸ್​ ಆಫ್ ಬಾಂಗ್ಲಾದೇಶ್ ಹಾಕಿರುವ ಪೋಸ್ಟ್​ ಪ್ರಕಾರ, ಅಬೂಬಕರ್​ಗೆ ಈಗಾಗಲೇ ಮದುವೆಯಾಗಿದೆ ಎನ್ನುವ ವಿಷಯ ತಿಳಿದ ಬಳಿಕ ಕವಿತಾ ರಾಣಿ ಹಾಗೂ ಆತನ ಮಧ್ಯೆ ಜಗಳ ಶುರುವಾಗಿತ್ತು. ಆ ಜಗಳ ಕೊನೆಗೆ ಕವಿತಾ ಹತ್ಯೆಯಲ್ಲಿ ಅಂತ್ಯಗೊಂಡಿತ್ತು ಆತ ಆಕೆಯ ಶಿರಚ್ಛೇದ ಮಾಡಿ, ಆಕೆಯ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ, ಕವರ್​ನಲ್ಲಿ ತುಂಬಿ ಚರಂಡಿಗೆ ಎಸೆದಿದ್ದ.

ಇದು ದೆಹಲಿಯ ಶ್ರದ್ಧಾ ವಾಕರ್ ಹತ್ಯೆಗಿಂತ ತುಂಬಾ ಭಿನ್ನವಾಗಿಲ್ಲ
ಅಫ್ತಾಬ್ ಪೂನಾವಾಲಾ ಎಂಬಾತ ಶ್ರದ್ಧಾ ವಾಕರ್ ಎಂಬಾಕೆಯ ಜತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ, ಆಕೆ ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸಿದಾಗ ಅವರ ಮಧ್ಯೆ ಕಲಹ ಉಂಟಾಗಿತ್ತು. ಆ ಸಮಯದಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿ ಬಳಿಕ 35 ತುಂಡುಗಳಾಗಿ ದೇಹವನ್ನು ಕತ್ತರಿಸಿ ನಗರದ ವಿವಿಧೆಡೆ ದೇಹದ ಭಾಗಗಳನ್ನು ಎಸೆದಿದ್ದ. ಹಾಗೆಯೇ ದೇಹವನ್ನು ಕತ್ತರಿಸಲು ಎಂತಹ ಚಾಕುವನ್ನು ಬಳಕೆ ಮಾಡುತ್ತಾರೆ ಎಂಬುದರ ಬಗ್ಗೆಯೂ ಆತ ಇಂಟರ್​ನೆಟ್​ನಲ್ಲಿ ಸರ್ಚ್​ ಮಾಡಿ ಖರೀದಿಸಿದ್ದ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.