Bank Holidays in November 2021: ನವೆಂಬರ್​ನಲ್ಲಿ ಬಾಕಿ ಉಳಿದ 15 ದಿನದ ಪೈಕಿ 6 ದಿನ ಬ್ಯಾಂಕ್ ರಜಾ | 6 Out Of Remaining November Month 15 Days Holidays For Countries Various Parts Banks Here Is The List


Bank Holidays in November 2021: ನವೆಂಬರ್​ನಲ್ಲಿ ಬಾಕಿ ಉಳಿದ 15 ದಿನದ ಪೈಕಿ 6 ದಿನ ಬ್ಯಾಂಕ್ ರಜಾ

ಸಾಂದರ್ಭಿಕ ಚಿತ್ರ

ನವೆಂಬರ್ ತಿಂಗಳಲ್ಲಿ ಈ ಹದಿನೈದು ದಿನದಲ್ಲೇ ದೇಶದಾದ್ಯಂತ ಇರುವ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳು 11 ದಿನ ರಜಾ ಪಡೆದಿವೆ. ದೀಪಾವಳು, ಭಾಯ್ ದೂಜ್ ಸೇರಿದಂತೆ ವಿವಿಧ ಹಬ್ಬಗಳ ಪ್ರಯುಕ್ತ ಸಾಕಷ್ಟು ರಜಾ ದಿನಗಳನ್ನು ಪಡೆದಿದ್ದು, ಇದೀಗ ನವೆಂಬರ್ ತಿಂಗಳ ಉಳಿಕೆ 15 ದಿನದಲ್ಲಿಯೂ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್​ಗಳಿಗೆ ಆರು ದಿನ ರಜಾ ಇದೆ. ಹಬ್ಬಗಳ ಸಾಲುಗಳೇನೋ ಮುಗಿದಿದೆ. ಮೊದಲ ಪಾಕ್ಷಿಕದಷ್ಟು ದೀರ್ಘವಾದ ಹಾಗೂ ಅಷ್ಟು ಸಂಖ್ಯೆಯಲ್ಲಿ ರಜಾ ದೊರೆಯುವ ಹಬ್ಬಗಳೂ ಇಲ್ಲ. ಈಗಿರುವುದು ವಾರಾಂತ್ಯದ ಹಾಗೂ ಆಯಾ ರಾಜ್ಯವಾರು ನಿರ್ದಿಷ್ಟ ರಜಾ ದಿನಗಳು. ಈ ಲೇಖನದಲ್ಲಿ ಬ್ಯಾಂಕ್ ರಜಾ ದಿನಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಶಾಖೆಗೇ ತೆರಳಿ ಮುಗಿಸಿಕೊಳ್ಳಬೇಕಾದ ವ್ಯವಹಾರಗಳು ಏನಾದರೂ ಇದ್ದಲ್ಲಿ ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಒಳ್ಳೆಯದು.

ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಕೆಲವು ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡುವ ಅಧಿಕೃತ ಪಟ್ಟಿಯ ಪ್ರಕಾರ ಬ್ಯಾಂಕ್ ರಜಾ ದಿನಗಳು ಘೋಷಣೆ ಆಗುತ್ತವೆ. ಹಾಗೆ ಬ್ಯಾಂಕ್​ಗಳಿಗೆ ನಿಗದಿ ಆಗಿರುವುದು 11 ರಜಾ ದಿನಗಳು. ಬಾಕಿ ವಾರಾಂತ್ಯದ ರಜಾ ದಿನಗಳು. ಇದರಲ್ಲಿ ತಿಂಗಳ ಎಲ್ಲ ಭಾನುವಾರವೂ ಎರಡು ಮತ್ತು ನಾಲ್ಕು ಶನಿವಾರವೂ ಸೇರಿಕೊಂಡಿದೆ. ಬ್ಯಾಂಕ್​ಗಳು ಮೊದಲ ಹಾಗೂ ಮೂರನೇ ಶನಿವಾರ ತೆರೆದಿರುತ್ತದೆ. ಅಂದಹಾಗೆ, ಆರ್​ಬಿಐ ರಜಾ ದಿನಗಳು ಮೂರು ವರ್ಗದಲ್ಲಿ ಬೀಳುತ್ತದೆ. ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾ ದಿನಗಳು ಮತ್ತು ಹಬ್ಬಗಳ ಆಚರಣೆಗಳು.

ಮೂರು ಬ್ರಾಕೆಟ್​ನಲ್ಲಿ ಆರ್​ಬಿಐ ರಜಾ ದಿನಗಳ ಅಧಿಸೂಚನೆ ಹೊರಡಿಸಲಾಗುತ್ತದೆ. “ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿನ ರಜಾ ದಿನಗಳು”, “ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲ್​ಮೆಂಟ್​ ರಜಾ ದಿನಗಳು” ಮತ್ತು “ಬ್ಯಾಂಕ್​ಗಳ ಲೆಕ್ಕಾಚಾರ ಚುಕ್ತಾ ಮಾಡುವುದು”. ಈ ಅಧಿಸೂಚಿತ ರಜಾ ದಿನಗಳಲ್ಲಿ ಎಲ್ಲ ಬ್ಯಾಂಕ್​ಗಳು, ಸಾರ್ವಜನಿಕ, ಖಾಸಗಿ, ವಿದೇಶೀ, ಕೋ ಆಪರೇಟಿವ್ ಬ್ಯಾಂಕ್​ಗಳು ಮತ್ತು ಪ್ರಾದೇಶಿಕ ಬ್ಯಾಂಕ್​ಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ.

ನವೆಂಬರ್​ 15ರ ನಂತರ ದೇಶದ ವಿವಿಧೆಡೆ ಯಾವ ದಿನದಂದು ರಜಾ ಇದೆ ಎಂಬುದರ ವಿವರ ಹೀಗಿದೆ:
ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತೀಕ ಪೌರ್ಣಮಿ
ಐಜ್​ವಾಲ್, ಬೆಲಾಪುರ್, ಭೋಪಾಲ್, ಚಂಢೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್​ಪುರ್, ರಾಂಚಿ, ಶಿಮ್ಲಾ, ಶ್ರೀನಗರ್.

ನವೆಂಬರ್ 22: ಕನಕದಾಸ ಜಯಂತಿ
ಬೆಂಗಳೂರು

ನವೆಂಬರ್ 23: ಸೆಂಗ್ ಕುಟ್ಸೆನಮ್
ಶಿಲ್ಲಾಂಗ್

ನವೆಂಬರ್ 21: ಭಾನುವಾರ

ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ

ನವೆಂಬರ್ 28: ಭಾನುವಾರ

ಇದನ್ನೂ ಓದಿ: Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್​ಗಳಿವು

TV9 Kannada


Leave a Reply

Your email address will not be published. Required fields are marked *