Basavanagudi Kadalekai Parishe 2022: ಬಸವನಗುಡಿ ಕಡಲೆಕಾಯಿ ಪರಿಷೆಗಿದೆ ಸಾವಿರಾರು ವರ್ಷಗಳ ಇತಿಹಾಸ – history behind bengaluru basavanagudi kadalekai parishe groundnut fair


ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುತ್ತದೆ. ಬಸವನಗುಡಿಯ ಇತಿಹಾಸ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ವಿಶೇಷಪೂಜೆ, ಹೂವಿನ ಅಲಂಕಾರವನ್ನು ಮಾಡಿ ಕಡಲೇಕಾಯಿಯಿಂದ ಅಭಿಷೇಕ ಮಾಡಲಾಗುತ್ತೆ.

Basavanagudi Kadalekai Parishe 2022: ಬಸವನಗುಡಿ ಕಡಲೆಕಾಯಿ ಪರಿಷೆಗಿದೆ ಸಾವಿರಾರು ವರ್ಷಗಳ ಇತಿಹಾಸ

ಬಸವನಗುಡಿ ಕಡಲೆಕಾಯಿ ಪರಿಷೆ

ಬೆಂಗಳೂರು: ರಸ್ತೆ ಉದ್ದಕ್ಕೂ ರಾಶಿ ರಾಶಿ ಕಡಲೆಕಾಯಿ, ಹುರದಿದ್ದು, ಎರಡು ಬೀಜ, ಮೂರು ಬೀಜ ಅಷ್ಟೆ ಅಲ್ಲಾ, ಹಸಿ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ. ಹೀಗೆ ಎಂದೆಂದೂ ಸವಿಯದ ನಾನಾ ರೀತಿಯ ಕಡಲೆಕಾಯಿ ತಿನ್ನಬೇಕಿದ್ರೆ ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ(Basavanagudi Kadlekai Parishe) ತಪ್ಪದೆ ಹಾಜರಾಗಬೇಕು. ಕಂಬಳಿ ಹೊದ್ದು ಮಲಗುವಂತಹ ಚುಮು ಚುಮು ಚಳಿಗೆ ಪರಿವಾರ, ಗೆಳೆಯರೊಂದಿಗೆ ಬಸವನಗುಡಿ ಸುತ್ತಾಡಿ ಬಡವರ ಬಾದಾಮಿ ಬಿಸಿ ಬಿಸಿ ಕಡಲೆಕಾಯಿ ಸವಿಯುವುದೇ ಒಂದು ಮರೆಯಲಾಗದ ಅದ್ಭುತ ಅನುಭವ. ಜೊತೆಗೆ ಸುತ್ತಲೂ ಬಣ್ಣ ಬಣ್ಣದ ಬಲೂನು, ಆಟಿಕೆ, ಬತಾಸು, ಸಿಹಿ ತಿನಿಸು, ಕಲಾಕೃತಿಗಳು, ಬೊಂಬೆಗಳು, ರಾಟೆ, ಉಯ್ಯಾಲೆಗಳು, ಜನಜಾತ್ರೆ ಎಲ್ಲವೂ ಹೊಸ ಪ್ರಪಂಚಕ್ಕೆ ಎಳೆದೊಯ್ಯುತ್ತವೆ.

ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುತ್ತದೆ. ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಬಸವನಗುಡಿಯ ಇತಿಹಾಸ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ವಿಶೇಷಪೂಜೆ, ಹೂವಿನ ಅಲಂಕಾರವನ್ನು ಮಾಡಿ ಕಡಲೇಕಾಯಿಯಿಂದ ಅಭಿಷೇಕ ಮಾಡಿ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತೆ. ಈ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಅದರದೇ ಆದ ಇತಿಹಾಸ, ಮಹತ್ವವಿದೆ.
Basavanagudi Kadlekai Parishe

TV9 Kannada


Leave a Reply

Your email address will not be published.