Dr Vishnuvardhan House: ವಿಷ್ಣುವರ್ಧನ್ ಅವರ ಹೊಸ ಮನೆಗೆ ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ. ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ ಆಗಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ವಿಷ್ಣುವರ್ಧನ್ (Dr Vishnuvardhan) ಅವರ ಹೊಸ ಮನೆ ನಿರ್ಮಾಣ ಮಾಡಲಾಗಿದೆ. ಇಂದು (ನ.27) ಗೃಹಪ್ರವೇಶ ಸಮಾರಂಭ ನೆರವೇರಿಸಲಾಗಿದೆ. ಈ ಶುಭ ಗಳಿಗೆಗೆ ಅನೇಕ ಗಣ್ಯರು ಸಾಕ್ಷಿ ಆಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (CM Basavaraj Bommai) ಕೂಡ ಆಗಮಿಸಿ ಗೃಹಪ್ರವೇಶದಲ್ಲಿ ಪಾಲ್ಗೊಂಡರು. ರಾಜಕೀಯದ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಬಂದ ಅವರನ್ನು ನಟ ಅನಿರುದ್ಧ್ (Aniruddha Jatkar) ಆತ್ಮೀಯವಾಗಿ ಬರಮಾಡಿಕೊಂಡರು. ಈ ಹೊಸ ಮನೆಗೆ ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.