BBK 9 Winner Prize: ಬಿಗ್ ಬಾಸ್ ವಿಜೇತರಿಗೆ ಸಿಗ್ತಿರೋ ಹಣ 50 ಲಕ್ಷ ರೂಪಾಯಿ ಅಲ್ಲ, ಅದಕ್ಕೂ ಹೆಚ್ಚು – BBK 9 Winner Prize here is the winning amount and tax deduction details


‘ಕನ್ನಡ ಬಿಗ್ ಬಾಸ್’ ಗೆದ್ದ ಸ್ಪರ್ಧಿ ಹಣ ಹಾಗೂ ಆಕರ್ಷಕ ಟ್ರೋಫಿನ ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ.

BBK 9 Winner Prize: ಬಿಗ್ ಬಾಸ್ ವಿಜೇತರಿಗೆ ಸಿಗ್ತಿರೋ ಹಣ 50 ಲಕ್ಷ ರೂಪಾಯಿ ಅಲ್ಲ, ಅದಕ್ಕೂ ಹೆಚ್ಚು

ಬಿಗ್ ಬಾಸ್

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಇಂದು (ಡಿಸೆಂಬರ್ 31) ಪೂರ್ಣಗೊಳ್ಳಲಿದೆ. ಪ್ರತಿ ಬಾರಿ ಬಿಗ್ ಬಾಸ್​​ ಫಿನಾಲೆ ಶನಿವಾರ ಹಾಗೂ ಭಾನುವಾರ ನಡೆಯುತ್ತಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಫಿನಾಲೆ ಶುಕ್ರವಾರ ಹಾಗೂ ಶನಿವಾರ ನಡೆಯುತ್ತಿದೆ. ‘ಕನ್ನಡ ಬಿಗ್ ಬಾಸ್’ ಗೆದ್ದ ಸ್ಪರ್ಧಿ 50 ಲಕ್ಷ ರೂಪಾಯಿ ಬಹುಮಾನ ಹಣ ಹಾಗೂ ಆಕರ್ಷಕ ಟ್ರೋಫಿನ ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ. ಈ ಬಾರಿ ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ಸಿಗಲಿದೆ. ಅಂದರೆ ಗೆಲ್ಲುವ ಸ್ಪರ್ಧಿಗೆ 60 ಲಕ್ಷ ರೂಪಾಯಿ ಹಣ ಸಿಗಲಿದೆ.

ಬಿಗ್ ಬಾಸ್​ ಫಿನಾಲೆಗೆ ಐವರು ತಲುಪಿದ್ದರು. ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ದೀಪಿಕಾ ದಾಸ್​, ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದರು. ಶನಿವಾರದ (ಡಿಸೆಂಬರ್ 30) ಎಪಿಸೋಡ್​ನಲ್ಲಿ ದಿವ್ಯಾ ಔಟ್ ಆಗಿದ್ದಾರೆ. ಉಳಿದ ನಾಲ್ವರಲ್ಲಿ ಒಬ್ಬರು ವಿನ್​ ಆಗಲಿದ್ದಾರೆ. ಭಾನುವಾರ (ಡಿಸೆಂಬರ್ 31) ಈ ಬಗ್ಗೆ ಘೋಷಣೆ ಆಗಲಿದೆ.

ಈ ಬಾರಿ ‘ಬಿಗ್ ಬಾಸ್​​ ಕನ್ನಡ’ ಗೆದ್ದ ಸ್ಪರ್ಧಿಗೆ 60 ಲಕ್ಷ ರೂಪಾಯಿ ಸಿಗಲಿದೆ. ಈ ಬಹುಮಾನದ ಮೊತ್ತಕ್ಕೆ ಶೇ.30 ಟ್ಯಾಕ್ಸ್ ಬೀಳಲಿದೆ. 60 ಲಕ್ಷ ರೂಪಾಯಿಯಲ್ಲಿ 18 ಲಕ್ಷ ರೂ.  ಕಟ್ ಆಗಲಿದೆ. ಅಂದರೆ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 42  ಲಕ್ಷ ರೂಪಾಯಿ ಸಿಗಲಿದೆ. ಹತ್ತು ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಹಣ ಗೆದ್ದ ಸ್ಪರ್ಧಿಗೆ ಮಾತ್ರ ಈ ತೆರಿಗೆ ಅನ್ವಯ ಆಗಲಿದೆ. ಕೌನ್ ಬನೇಗಾ ಕರೋಡ್ಪತಿ ಸೇರಿ ಮನರಂಜನೆಗೆ ಸಂಬಂಧಿಸಿದ ಎಲ್ಲಾ ಶೋಗೆ ಈ ತೆರಿಗೆ ಸ್ಲ್ಯಾಬ್ ಅನ್ವಯ ಆಗಲಿದೆ.

ಶನಿವಾರದ ಎಲಿಮಿನೇಷನ್ ವಿವರ: 

ದಿವ್ಯಾ ಉರುಡುಗ ಅವರು ಶನಿವಾರದ ಎಪಿಸೋಡ್​ನಲ್ಲಿ ಔಟ್ ಆಗಿದ್ದಾರೆ. ಶನಿವಾರ ಔಟ್ ಆದ ಏಕೈಕ ಸ್ಪರ್ಧಿ ಎಂದರೆ ಅದು ದಿವ್ಯಾ ಉರುಡುಗ ಮಾತ್ರ.

TV9 Kannada


Leave a Reply

Your email address will not be published. Required fields are marked *