BBK9: ಬಿಗ್​ ಬಾಸ್​ನಲ್ಲಿ ಮತ್ತೆ ಪ್ರಶಾಂತ್​ ಸಂಬರಗಿ, ದೀಪಿಕಾ, ಅನುಪಮಾ ಗೌಡ; ಇದು ದೊಡ್ಮನೆಯ ದೊಡ್ಡ ಟ್ವಿಸ್ಟ್​​ | Bigg Boss Kannada Season 9 will have Prashanth Sambargi Deepika Das Anupama Gowda


Bigg Boss Kannada Season 9: ಸೆಪ್ಟೆಂಬರ್​ 24ರಿಂದ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಪ್ರಸಾರ ಆರಂಭಿಸಲಿದೆ. ಮಾಜಿ ಸ್ಪರ್ಧಿಗಳಿಗೂ ಈ ಬಾರಿ ಚಾನ್ಸ್​ ಸಿಗುತ್ತಿದೆ.

BBK9: ಬಿಗ್​ ಬಾಸ್​ನಲ್ಲಿ ಮತ್ತೆ ಪ್ರಶಾಂತ್​ ಸಂಬರಗಿ, ದೀಪಿಕಾ, ಅನುಪಮಾ ಗೌಡ; ಇದು ದೊಡ್ಮನೆಯ ದೊಡ್ಡ ಟ್ವಿಸ್ಟ್​​

ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್, ಅನುಪಮಾ ಗೌಡ

ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎಂದು ಕರೆಸಿಕೊಳ್ಳುವ ‘ಬಿಗ್​ ಬಾಸ್​’ ಎಂದರೆ ಅದರಲ್ಲಿ ಟ್ವಿಸ್ಟ್​ಗಳು ಸರ್ವೇ ಸಾಮಾನ್ಯ. ಅದೇ ರೀತಿ ಕನ್ನಡ ಬಿಗ್​ ಬಾಸ್​ (Bigg Boss Kannada) ಹೊಸ ಸೀಸನ್​ ಆರಂಭಕ್ಕೂ ಮುನ್ನವೇ ದೊಡ್ಡ ಸರ್ಪ್ರೈಸ್​ ಎದುರಾಗಿದೆ. ಸೆಪ್ಟೆಂಬರ್ 24ರಂದು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶುರುವಾಗಲಿದೆ. ಈ ಸೀಸನ್​ನಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಹೊಸದಾಗಿ ಬರುವ ಸ್ಪರ್ಧಿಗಳ ಜೊತೆಯಲ್ಲಿ ಮಾಜಿ ಸ್ಪರ್ಧಿಗಳು ಕೂಡ ಇರಲಿದ್ದಾರೆ ಎಂಬುದು ಖಚಿತವಾಗಿದೆ. ಈ ಬಗ್ಗೆ ‘ಕಲರ್ಸ್​ ಕನ್ನಡ’ (Colors Kannada) ವಾಹಿನಿ ಕಡೆಯಿಂದಲೇ ಮಾಹಿತಿ ಹೊರಬಿದ್ದಿದೆ. ಈ ಕುರಿತು ತಿಳಿಸಲು ಪ್ರೋಮೋ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಶಾಂತ್​ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್​ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಮೊದಲ ಸೀಸನ್​ ನಡೆಯುತ್ತಿದ್ದು, ಕೊನೇ ಹಂತಕ್ಕೆ ಬಂದಿದೆ. ಈ ವಾರ ಅದಕ್ಕೆ ತೆರೆ ಬೀಳಲಿದೆ. ನಂತರ ಉಳಿಯುವುದು ಒಂದು ವಾರ ಗ್ಯಾಪ್​ ಮಾತ್ರ. ಸೆಪ್ಟೆಂಬರ್​ 24ರಿಂದ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಪ್ರಸಾರ ಆರಂಭಿಸಲಿದೆ. ಎಂದಿನಂತೆ ಕಿಚ್ಚ ಸುದೀಪ್​ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ಪ್ರವೀಣರ ಜೊತೆ ನವೀನರು’ ಎಂಬ ಕ್ಯಾಪ್ಷನ್​ನೊಂದಿಗೆ 9ನೇ ಸೀಸನ್​ನ ಬಿಗ್​ ಬಾಸ್​ ಪ್ರೋಮೋ ಹಂಚಿಕೊಳ್ಳಲಾಗಿದೆ. ಮಾಜಿ ಸ್ಪರ್ಧಿಗಳಾದ ದೀಪಿಕಾ ದಾಸ್​, ಪ್ರಶಾಂತ್​ ಸಂಬರಗಿ, ಅನುಪಮಾ ಗೌಡ ಅವರು ಕದ್ದು-ಮುಚ್ಚಿ ತಮ್ಮ ಲಗೇಜ್​ ಪ್ಯಾಕ್​ ಮಾಡಿಕೊಂಡು ಬಿಗ್​ ಬಾಸ್​ಗೆ ಮನೆಗೆ ಓಡೋಡಿ ಬರುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ತಮ್ಮಿಷ್ಟದ ಹಳೇ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಯಲ್ಲಿ ನೋಡಲು ವೀಕ್ಷಕರು ಕಾದಿದ್ದಾರೆ. ಇನ್ನೂ ಯಾರೆಲ್ಲ ಈ ಬಾರಿ ಚಾನ್ಸ್​ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಸೆ.24ರ ಸಂಜೆ 6 ಗಂಟೆಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಗ್ರ್ಯಾಂಡ್​ ಪ್ರೀಮಿಯರ್​ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್​ ಬಾಸ್ ಕನ್ನಡ​ ಒಟಿಟಿ’ ಶೋನಲ್ಲಿ ಇರುವ ಕೆಲವು ಸ್ಪರ್ಧಿಗಳು ಕೂಡ ಟಿವಿ ಸೀಸನ್​ಗೆ ಎಂಟ್ರಿ ಪಡೆಯಲಿದ್ದಾರೆ. ಹಳಬರ ಜೊತೆ ಹೊಸಬರು ನಡೆಸುವ ಈ ಹಣಾಹಣಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು.

TV9 Kannada


Leave a Reply

Your email address will not be published.