BBMP: ಮೂವರು ವಲಯ ಜಂಟಿ ಆಯುಕ್ತರ ವರ್ಗಾವಣೆ | BBMP Transfers three joint commissioners Bengaluru details here


BBMP: ಮೂವರು ವಲಯ ಜಂಟಿ ಆಯುಕ್ತರ ವರ್ಗಾವಣೆ

ಬಿಬಿಎಂಪಿ (ಪ್ರಾತತಿನಿಧಿಕ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮೂವರು ವಲಯ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಮೂವರು ವಲಯ ಜಂಟಿ ಆಯುಕ್ತರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ, ಯಲಹಂಕ ವಲಯ ಜಂಟಿ ಆಯುಕ್ತ ಡಾ.ಡಿ. ಆರ್​​ ಅಶೋಕ್, ಪೂರ್ವ ವಲಯ ಜಂಟಿ ಆಯುಕ್ತೆ ಕೆ.ಆರ್​​. ಪಲ್ಲವಿ, ದಕ್ಷಿಣ ವಲಯ ಜಂಟಿ‌ ಆಯುಕ್ತ ವೀರಭದ್ರಸ್ವಾಮಿ ವರ್ಗಾವಣೆ ಮಾಡಲಾಗಿದೆ.

ಕೆ.ಆರ್​​. ಪಲ್ಲವಿ, ವೀರಭದ್ರಸ್ವಾಮಿ ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಪೌರಾಡಳಿತ ಇಲಾಖೆಗೆ ಕೆ.ಆರ್​​. ಪಲ್ಲವಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವೀರಭದ್ರಸ್ವಾಮಿ ವಾಪಸ್ ಆಗಿದ್ದಾರೆ. ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರಾಗಿ ಆರ್. ಶಿಲ್ಪಾ, ಯಲಹಂಕ ವಲಯ ಜಂಟಿ ಆಯುಕ್ತರಾಗಿ ಪಿ.ವಿ. ಪೂರ್ಣಿಮಾ, ದಕ್ಷಿಣ ವಲಯ ಜಂಟಿ ಆಯುಕ್ತರಾಗಿ ಡಾ. ಜಗದೀಶ್ ನಾಯಕ್ ನೇಮಕಗೊಂಡಿದ್ದಾರೆ.

ಕುಂಟುತ್ತಾ ಸಾಗಿದೆ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ಕಾಮಗಾರಿ
ಸುಮಾರು 206 ಕೋಟಿ ರೂ. ವೆಚ್ಚದ ಸೋನಿ ವರ್ಲ್ಡ್ ಸಿಗ್ನಲ್ ಬಳಿಯ ಫ್ಲೈಓವರ್ ನಿರ್ಮಾಣ ಕಾಮಗಾರಿ ಎಂದಿನಂತೆ ಕುಂಟುತ್ತಾ ಸಾಗಿದೆ. ಇದಕ್ಕೆ ಕಾರಣವಾಗಿರುವುದು ಎಂದಿನಂತೆ BBMP ಯಡವಟ್ಟು. ಅರ್ಹತೆ ಇಲ್ಲದ ಕಂಪನಿಗೆ ಫ್ಲೈಓವರ್ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ನೀಡಿರುವ ಬಿಬಿಎಂಪಿ ಈಗ ತಲೆಯ ಮೇಲೆ ಕೈಹೊತ್ತು ಕುಳಿತಿದೆ. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕಂಪನಿಯು ಹಣ ಇಲ್ಲವೆಂದು ಫ್ಲೈಓವರ್ ಕಾಮಗಾರಿ ಕೈಬಿಟ್ಟಿದೆ.

ಇದನ್ನೂ ಓದಿ: ಕುಂಟುತ್ತಾ ಸಾಗಿದೆ ಸೋನಿ ವರ್ಲ್ಡ್ ಸಿಗ್ನಲ್ ಬಳಿ ಫ್ಲೈಓವರ್ ಕಾಮಗಾರಿ, ತಲೆಯ ಮೇಲೆ ಕೈಹೊತ್ತು ಕುಳಿತಿದೆ ಬಿಬಿಎಂಪಿ!

ಇದನ್ನೂ ಓದಿ: ಕೊನೆಗೂ ಮಂಡ್ಯಕ್ಕೆ ಹೊಸ ಎಸ್​ಪಿ ನೇಮಕ; ಸುಮನ್ ಪನ್ನೇಕರ್ ಸೇರಿ 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ

TV9 Kannada


Leave a Reply

Your email address will not be published. Required fields are marked *