BBMP Election: ಅಂತಿಮ ಮತದಾರರ ಪಟ್ಟಿ ಪ್ರಕಟ, ಒಟ್ಟು 79,19,563 ವೋಟರ್ಸ್ | Bbmp Poll 2022 final voter list released By election commission


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಇದೀಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

ಬೆಂಗಳೂರು: ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಚುನಾವಣೆಗಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಬಿಬಿಎಂಪಿ ಚುನಾವಣೆ ಮೀಸಲಾತಿ ಪ್ರಕರಣಗಳು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ಇಂದು(ಸೆಪ್ಟೆಂಬರ್ 28) ಚುನಾವಣೆ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

ಚುನಾವಣೆ ಆಯೋಗದ ಪ್ರಕಟಿಸಿದ ಮತದಾರರ ಪಟ್ಟಿ ಪ್ರಕಾರ 243 ವಾರ್ಡ್​ಗಳಲ್ಲಿ ಒಟ್ಟು 79,19,563 ಮತದಾರರು ಇದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1433 ಇತರೆ ಮತದಾರರು ಇದ್ದಾರೆ.

ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ವೆಬ್​ಸೈಟ್ bbmp.gov.in ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಪ್ ಆದ Voter Helpline App ಮತ್ತು NVSP Portal ವೆಬ್‌ಸೈಟ್ ಮುಖೇನಾ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

 

TV9 Kannada


Leave a Reply

Your email address will not be published.