ಬಿಡಿಎ ಅಧಿಕಾರಿಗಳು ಹೇಗೆ ಅಂದ್ರೆ, ಒಂದು ರೀತಿಯಲ್ಲಿ ಆನೆ ನಡೆದದ್ದೇ ದಾರಿ ಅಂತಾರಲ್ಲ ಹಾಗೆ. ಯಾರಿಗೂ ಕೇರ್ ಮಾಡದ ಜಾಯಮಾನ. ಆದರೆ, ಒಂದಲ್ಲ ಒಂದು ಸಾರಿ ಗ್ರಹಣ ಹಿಡಿಲೇಬೇಕಲ್ವಾ? ಇವತ್ತು ಚಂದ್ರಗ್ರಹಣ. ಆದರೆ, ಬಿಡಿಎ ಅಧಿಕಾರಿಗಳಿಗೆ ಎಸಿಬಿ ದಾಳಿಯ ಗ್ರಹಣ ಹಿಡಿದಿತ್ತು. ಮೊಬೈಲ್ಗಳು ಸ್ವಿಚ್ಆಫ್, ನೌಕರರು ಸೈಲೆಂಟ್. ಬೀರುನಲ್ಲಿರೋ ದಾಖಲೆಗಳು, ನಗದು ಹೊರಗೆ. ಕಂಪ್ಯೂಟರ್ನಲ್ಲಿರೋ ಒಂದಿಂಚು ದಾಖಲೆಗಳನ್ನು ಬಿಡದೇ ಪರಿಶೀಲಿಸುತ್ತಿರೋ ಅಧಿಕಾರಿಗಳು. ಎಲ್ಲಿ ಏನು ಸಿಕ್ಕಿ ಬಿಡುತ್ತೋ ಅಂತ ಆತಂಕದಲ್ಲಿಯೇ ಮುಖ ಮುಖ ನೋಡ್ತಾ, ಕೈ ಕಟ್ಟಿ ನಿಂತಿರೋ ನೌಕರರು. ಅಕ್ಷರಶಃ ಬಿಡಿಎ ಕಚೇರಿ ಇವತ್ತು ನಲುಗಿ ಹೋಗಿತ್ತು. ದಿಢೀರ್ ಅಂತ ಲಗ್ಗೆ ಇಟ್ಟ ಎಸಿಬಿ ಅಧಿಕಾರಿಗಳ ದಾಳಿಗೆ ಬಿಡಿಎ ಅಧಿಕಾರಿಗಳು ಮತ್ತು ನೌಕರರು ಬೆಚ್ಚಿ ಬಿದ್ದಿದ್ರು..
ಯೆಸ್, ಜಮೀನಿಗೆ ಪರಿಹಾರ ನೀಡುವ ವಿಚಾರದಲ್ಲಿ ಬಿಡಿಎ ಮಾಜಿ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು, ರೈತರಿಗೆ ಕೋಟಿ ಕೋಟಿ ವಂಚಿಸಿದ್ದ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. ಇದಷ್ಟೇ ಅಲ್ಲ, ಇಂತಹದ್ದೇ ಹಲವಾರು ಭ್ರಷ್ಟಾಚಾರ ಪ್ರಕರಣಗಳು ಬಿಡಿಎನಲ್ಲಿ ಸದ್ದು ಮಾಡಿದ್ವು. ಈ ಹಿನ್ನೆಲೆ ಇವತ್ತು ಚಾರ್ಜ್ಗೆ ತೆಗೆದುಕೊಂಡ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಭೂ ಸ್ವಾಧೀನ ಇಲಾಖೆಯ ಡಿಸಿ, ಎಸಿಗಳ ಕಚೇರಿ, ಕಾರ್ಯದರ್ಶಿ ಕಚೇರಿ ಮೇಲೂ, ನಾಲ್ಕು ತಂಡಗಳಾಗಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಡಿಎ ಡೆಪ್ಯೂಟಿ ಸೆಕ್ರೆಟರಿ ನವೀನ್ ಜೋಸೆಫ್ ಕಚೇರಿಯಲ್ಲಿ ಬಿಡಿಎ ಅಧಿಕಾರಿಗಳು ಹಣ ಜಪ್ತಿ ಮಾಡಿದ್ದಾರೆ. ಐವರು ಎಸಿಬಿ ಅಧಿಕಾರಿಗಳು, ಐವರು ಡಿವೈಎಸ್ಪಿ, 12 ಜನ ಇನ್ಸ್ ಪೆಕ್ಟರ್ ಸೇರಿ 50ಕ್ಕೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ.. ಕಾರಿನ ಮೇಲೆ ಕಾರು ಬಿದ್ದು ಮೂವರು ಸ್ಥಳದಲ್ಲೇ ಸಾವು
ಇನ್ನು, ಬಿಡಿಎ ಕಚೇರಿಗೆ ಬಂದಿದ್ದ ಪ್ರತಿಯೊಬ್ಬ ಗ್ರಾಹಕರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಅದಲ್ದೇ, ಕಚೇರಿಗೆ ಬಂದು ಹೋಗುವ ಪ್ರತಿಯೊಂದು ಕಾರನ್ನು ಬಿಡದೇ ತಪಾಸಣೆ ಮಾಡಲಾಗ್ತಿದೆ. ಯಾವೊಬ್ಬ ಅಧಿಕಾರಿಯೂ ಕಚೇರಿಯಿಂದ ಹೊರ ಹೋಗದಂತೆ ಗೇಟ್ ಹಾಕಿ ಬಿಗಿ ಬಂದೋಬಸ್ತ್ ಮಾಡಿ ದಾಳಿ ನಡೆಸಲಾಗಿದೆ.
ಜಮೀನಿನ ಪರಿಹಾರದ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರೋದು. ಸೈಟುಗಳ ಹಂಚಿಕೆ ವಿಚಾರದಲ್ಲಿ ನಡೆದಿರೋ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಬಿಡಿಎ ಕಚೇರಿ ಮೇಲೆ ಬಿಗ್ ರೇಡ್ ನಡೆದಿದೆ. ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿರೋ ಎಸಿಬಿ ಅಧಿಕಾರಿಗಳು, ಸದ್ಯದಲ್ಲೇ ಬಿಡಿಎನಲ್ಲಿರೋ ಹಣಬಾಕರ ಕರಾಳ ಮುಖವನ್ನ ಅನಾವರಣಗೊಳಿಸಲಿದ್ದಾರೆ.