ತುಟಿಗಳ ಮೇಲಿನ ಸತ್ತ ಚರ್ಮವನ್ನು ತೆಗೆದುಹಾಕಲು ಜೇನುತುಪ್ಪ ಮತ್ತು ಬಾದಾಮಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಪ್ರಾತಿನಿಧಿಕ ಚಿತ್ರ
ಲಿಪ್ಸ್ಟಿಕ್ ಹಚ್ಚುವುದರಿಂದ ತುಟಿಗಳು (Lips) ಕಪ್ಪಾಗುವುದರೊಂದಿಗೆ ಸುಂದರವಾಗಿ ಕಾಣುವುದಿಲ್ಲ. ಸರಿಯಾದ ಕ್ರಮವಿಲ್ಲದೆ ಲಿಪ್ಸ್ಟಿಕ್ನ್ನು ಅತಿಯಾಗಿ ಬಳಸುವುದರಿಂದ ತುಟಿಗಳ ಬಣ್ಣವನ್ನು ಕಪ್ಪಾಗಿಸಬಹುದು. ಲಿಪ್ಸ್ಟಿಕ್ನಿಂದಾಗಿ ಮಾತ್ರವಲ್ಲದೆ ಸಾಮಾನ್ಯವಾಗಿ ಅನೇಕ ಜನರು ತಮ್ಮ ತುಟಿಗಳ ಸುತ್ತಲೂ ಕಪ್ಪು ಅಥವಾ ತಿಳಿ ಕಪ್ಪು ವೃತ್ತಾಕಾರವನ್ನು ಹೊಂದಿರುತ್ತಾರೆ. ನಮ್ಮ ಜೀವನಶೈಲಿಯ ಕೆಲ ಅಭ್ಯಾಸಗಳು ಮತ್ತು ರೋಗಗಳು ಸಹ ಇದಕ್ಕೆ ಕಾರಣವಾಗಬಹುದು. ಅಲ್ಲದೆ ಧೂಮಪಾನ, ಔಷಧಿಗಳ ಅಡ್ಡಪರಿಣಾಮಗಳು, ಅಲರ್ಜಿಗಳು, ಶೀತ, ವಿಟಮಿನ್ ಕೊರತೆ, ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟ ಇತ್ಯಾದಿಗಳಂತಹ ಇತರ ಕಾರಣಗಳಿಂದ ಈ ಸಮಸ್ಯೆ ಉದ್ಭವಿಸಬಹುದು. ನೈಸರ್ಗಿಕವಾಗಿ ಕೆಂಪು ತುಟಿಗಳನ್ನು ಪಡೆಯಲು ಏನು ಮಾಡಬೇಕು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.