Belagavi Murder: ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕುಡುಗೋಲಿನಿಂದ ಕೊಂದ ಮಗ | Second wife son killed father in belagavi


Belagavi Murder: ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕುಡುಗೋಲಿನಿಂದ ಕೊಂದ ಮಗ

ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕೊಂದ ಮಗ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಬೇಡರಹಟ್ಟಿಯಲ್ಲಿ ಅಪ್ಪನನ್ನೇ ಬರ್ಬರವಾಗಿ ಮಗ ಕೊಲೆ ಮಾಡಿದ ಘಟನೆ ನಡೆದಿದೆ. ಕುಡುಗೋಲಿನಿಂದ ಕೊಚ್ಚಿ ಕಲ್ಲಪ್ಪ ಪೂಜಾರಿ(51)ಯನ್ನು ಮಗ ಯಲ್ಲಪ್ಪ ಕೋಡೆನ್ನವರ್(35) ಕೊಲೆ ಮಾಡಿದ್ದಾನೆ.

ಯಲ್ಲಪ್ಪ ಕೋಡೆನ್ನವರ್ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ. ಇದನ್ನು ನೋಡಲಾಗದೆ ಜಗಳ ಬಿಡಿಸಲು ಕಲ್ಲಪ್ಪ ಪೂಜಾರಿ ಮುಂದಾಗಿದ್ದಾರೆ. ಮಗ-ಸೊಸೆ ನಡುವಿನ ಜಗಳ ಬಿಡಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಗಳ ಬಿಡಿಸಲು ಬಂದ ತಂದೆಯನ್ನ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಕಲ್ಲಪ್ಪ ಪೂಜಾರಿ ಎರಡು ಮದುವೆಯಾಗಿದ್ದು 2ನೇ ಹೆಂಡತಿಯ ಪುತ್ರ ಯಲ್ಲಪ್ಪನಿಂದ ತಂದೆ ಕಲ್ಲಪ್ಪ ಕೊಲೆ ನಡೆದಿದೆ.

TV9 Kannada


Leave a Reply

Your email address will not be published. Required fields are marked *