Bellandur police arrest pakistan women for staying illegally in india | ಗೇಮ್ ಆ್ಯಪ್ ಮೂಲಕ ಪ್ರೀತಿ, ಮದುವೆ; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ


ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿದೆ. ಬಳಿಕ ಒಬ್ಬರ ನಡುವೆ ಪ್ರೀತಿ ಶುರುವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆಗ ಇಕ್ರಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು.

ಗೇಮ್ ಆ್ಯಪ್ ಮೂಲಕ ಪ್ರೀತಿ, ಮದುವೆ; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ

ಇಕ್ರಾ ಜೀವನಿ-ಮುಲಾಯಂ ಸಿಂಗ್

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ​​ ಇಕ್ರಾ ಜೀವನಿ(19) ಎಂಬ ಮಹಿಳೆಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಯುಪಿ ನಿವಾಸಿ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದ ಇಕ್ರಾ, ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದರು. ಸದ್ಯ ಪೊಲೀಸರು ಪಾಕ್ ಮಹಿಳೆ ಇಕ್ರಾ ಜೀವನಿ, ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.

ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದ ಪಾಕ್​ನ ಇಕ್ರಾ, ಡೇಟಿಂಗ್ ಌಪ್​ ಮೂಲಕ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದಳು. ನಂತರ ಬೆಂಗಳೂರಿನ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದಳು. ಈ ನಡುವೆ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದ ಇಕ್ರಾ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು. ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ, ಮುಲಾಯಂನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾವಾ ಯಾದವ್​ ಎಂದು ಹೆಸರು ಬದಲಿಸಿ ಪಾಸ್​​ಪೋರ್ಟ್​ಗೆ ಅರ್ಜಿ ಹಾಕಿರುವ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರು ಎಫ್​ಆರ್​​ಆರ್​ಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಕ್ರಾಳನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *