Bengaluru: ಹೊಸ ವರ್ಷ ಆಚರಣೆ ವೇಳೆ ಎಣ್ಣೆ ಕಿಕ್​; ಬೆಂಗಳೂರಲ್ಲಿ 78 ಡ್ರಂಕ್​ ಆಂಡ್​ ಡ್ರೈವ್​ ಕೇಸ್​ ಬುಕ್​​ – New Year: 78 cases booked for drunk and driving case in Bengaluru


ತಡರಾತ್ರಿ ಹೊಸ ವರ್ಷ ಆಚರಣೆ ವೇಳೆ ಬೆಂಗಳೂರಲ್ಲಿ ಮಧ್ಯಪಾನ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ 78 ಜನರಿಗೆ ಪೊಲೀಸರು ದಂಡ ವಿಧಿಸಿದ್ದಾರೆ

Bengaluru: ಹೊಸ ವರ್ಷ ಆಚರಣೆ ವೇಳೆ ಎಣ್ಣೆ ಕಿಕ್​; ಬೆಂಗಳೂರಲ್ಲಿ 78 ಡ್ರಂಕ್​ ಆಂಡ್​ ಡ್ರೈವ್​ ಕೇಸ್​ ಬುಕ್​​

ಸಾಂಧರ್ಬಿಕ ಚಿತ್ರ

Image Credit source: Times Now

ಬೆಂಗಳೂರು: ತಡರಾತ್ರಿ ಬೆಂಗಳೂರಲ್ಲಿ (Bengaluru) ಹೊಸ ವರ್ಷಾಚರಣೆ (New Year) ಜೋರಾಗಿಯೇ ನಡೆಯಿತು. ಎಂ.ಜಿ ರೋಡ್​ (MG Road) , ಬ್ರಿಗೇಡ್​​ ರೋಡ್ (Brigade Road)​​ ಜನಜಂಗುಳಿಯಿಂದ ಕೂಡಿತ್ತು. 2023 ಹೊಸ ವರ್ಷವನ್ನು ಜನರು ಜೋರಾಗಿಯೇ ಸ್ವಾಗತಿಸಿದರು. ಇನ್ನೂ ಹೊಸ ವರ್ಷಕ್ಕೆ ಸಿಲಿಕಾನ್​ ಸಿಟಿಯಲ್ಲಿ ಮಧ್ಯಾಹ್ನದಿಂದಲೇ ಪಾರ್ಟಿಗಳು ಶುರುವಾಗಿದ್ದವು. ಪಾರ್ಟಿಯಲ್ಲಿ ಕೆಲವರು ಎಣ್ಣೆ ಬೇಕು ಅಣ್ಣ ಎಂದು ಕುಡಿದಿದ್ದೇ ಕುಡಿದಿದ್ದು. ಹೀಗೆ ಎಣ್ಣೆ ಮತ್ತಿನಲ್ಲಿ ಬೈಕ್​ ಹತ್ತಿ ಹೊರಟವರು ಪೊಲೀಸರ ಕೈಗೆ ಸಿಕ್ಕು ದಂಡ ಕಟ್ಟಿದ್ದಾರೆ. ಹೌದು ಪೊಲೀಸರು, ತಡರಾತ್ರಿ ಕುಡಿದು ವಾಹನ ಚಲಾಯಿಸುತ್ತಿದ್ದ (Drunk and Drive) 78 ಜನರಿಗೆ ದಂಡ ವಿಧಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *