Bengaluru Airport: ಬೆಂಗಳೂರು ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಹೊಸ ಅಂತಾರಾಷ್ಟ್ರೀಯ ಮಾರ್ಗಗಳು ಆರಂಭ | Bangalore Airport Bengaluru Kempegowda International airport will soon be connected to new international routes


Bengaluru Airport: ಬೆಂಗಳೂರು ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಹೊಸ ಅಂತಾರಾಷ್ಟ್ರೀಯ ಮಾರ್ಗಗಳು ಆರಂಭ

ಬೆಂಗಳೂರು ವಿಮಾನ ನಿಲ್ದಾಣ

Image Credit source: Indian Express

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸ ಮಾರ್ಗವಾದ ಸಿಡ್ನಿ, ಸ್ಯಾನ್ ಫ್ರಾನ್ಸಿಸ್ಕೋ, ಟೆಲ್ ಅವಿವ್, ಸಿಯಾಟಲ್ ಮತ್ತು ವಿಶ್ವದ ಇತರ ಭಾಗಗಳಿಗೆ ವಿಮಾನಗಳು ಸಂಚರಿಸಲಿವೆ.

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (Kempegowda International Airport) ಈ ವರ್ಷ ಹೊಸ ಅಂತಾರಾಷ್ಟ್ರೀಯ ಮಾರ್ಗಗಳನ್ನು ಆರಂಭಿಸಲಿದೆ. ಬೆಂಗಳೂರು ಏರ್​ಪೋರ್ಟ್​ನಿಂದ (Bangalore Airport) ಸಿಡ್ನಿ, ಸ್ಯಾನ್ ಫ್ರಾನ್ಸಿಸ್ಕೋ, ಟೆಲ್ ಅವಿವ್, ಸಿಯಾಟಲ್ ಮತ್ತು ವಿಶ್ವದ ಇತರ ಭಾಗಗಳಿಗೆ ವಿಮಾನಗಳು ಸಂಚರಿಸಲಿವೆ ಎಂದು ಬೆಂಗಳೂರು ಇಂಟರ್​ನ್ಯಾಷನಲ್ ಏರ್​ಪೋರ್ಟ್ ಲಿಮಿಟೆಡ್ (BIAL) ಮಾಹಿತಿ ನೀಡಿದೆ.

ಪ್ರಸ್ತುತ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳು FY23ರ ಎರಡನೇ ತ್ರೈಮಾಸಿಕದ ವೇಳೆಗೆ ತಮ್ಮ ಅಂತಾರಾಷ್ಟ್ರೀಯ ನಾನ್​ಸ್ಟಾಪ್ ಡೆಸ್ಟಿನೇಷನ್ ಅನ್ನು ಪುನರಾರಂಭಿಸುವ ನಿರೀಕ್ಷೆಯಿದೆ ಎಂದು BIAL ವಕ್ತಾರರು ತಿಳಿಸಿದ್ದಾರೆ. (Source)

ಕ್ವಾಂಟಾಸ್​ನ ನಾಲ್ಕು ವೀಕ್ಲಿ ವಿಮಾನಗಳು ಈ ವರ್ಷದ ಸೆಪ್ಟೆಂಬರ್ 14ರಿಂದ ಸಿಡ್ನಿಗೆ ಹಾರಾಟ ಪ್ರಾರಂಭಿಸಲಿದೆ. ಯುನೈಟೆಡ್ ಏರ್‌ಲೈನ್ಸ್ ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸ್ಯಾನ್ ಫ್ರಾನ್ಸಿಸ್ಕೋಗೆ ತನ್ನ ದೈನಂದಿನ ವಿಮಾನಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದಲ್ಲದೆ, ಏರ್ ಇಂಡಿಯಾದಿಂದ ಟೆಲ್ ಅವೀವ್‌ಗೆ ವಾರಕ್ಕೊಮ್ಮೆ ಎರಡು ವಿಮಾನಗಳು ಮತ್ತು ಅಮೇರಿಕನ್ ಏರ್‌ಲೈನ್ಸ್‌ನಿಂದ ಸಿಯಾಟಲ್‌ಗೆ ದೈನಂದಿನ ವಿಮಾನಗಳನ್ನು ಸಹ ಪ್ಲಾನ್ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದ್ದಾರೆ.

TV9 Kannada


Leave a Reply

Your email address will not be published.