Bengaluru Covid Cases: ಮುಂಬೈ ಬಳಿಕ ಭಾರತದ ಕೊವಿಡ್ ಹಾಟ್​ಸ್ಪಾಟ್​ ಆಗುತ್ತಿದೆಯಾ ಬೆಂಗಳೂರು? | Bengaluru Covid Cases: Covid 4th wave After Delhi and Mumbai is Bengaluru the next coronavirus hotspot in India?


Bengaluru Covid Cases: ಮುಂಬೈ ಬಳಿಕ ಭಾರತದ ಕೊವಿಡ್ ಹಾಟ್​ಸ್ಪಾಟ್​ ಆಗುತ್ತಿದೆಯಾ ಬೆಂಗಳೂರು?

ಸಾಂಕೇತಿಕ ಚಿತ್ರ

ಕೊವಿಡ್ 3 ಅಲೆಗಳನ್ನು ಗಮನಿಸಿದರೆ ಮುಂಬೈ ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿತ್ತು. ಆದರೆ, ಈ ಬಾರಿ ಕರ್ನಾಟಕದ ಬೆಂಗಳೂರು ಹೊಸ ಕೋವಿಡ್ -19 ಹಾಟ್‌ಸ್ಪಾಟ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಬೆಂಗಳೂರು: ಭಾರತದಲ್ಲಿ ಕೊವಿಡ್-19 ಪ್ರಕರಣಗಳ (Covid-19 Cases) ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತೀಚೆಗೆ ಕಡಿಮೆಯಾಗಿದ್ದ ಕೊರೊನಾವೈರಸ್​ (Coronavirus) ಕೇಸುಗಳ ಸಂಖ್ಯೆ ಇದೀಗ ಮತ್ತೆ ಹೆಚ್ಚಳವಾಗಿದೆ. ಕಳೆದ ವಾರದಿಂದ ಹಲವಾರು ಮೆಟ್ರೋಪಾಲಿಟನ್ ನಗರಗಳಲ್ಲಿ ಕೊರೊನಾ ಸೋಂಕುಗಳ ಉಲ್ಬಣ ವರದಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕದ ನಾಲ್ಕನೇ ಅಲೆಯ (Covid 4th Wave) ಭೀತಿಯ ನಡುವೆ ಕೊವಿಡ್ ಕೇಸುಗಳು ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕೊವಿಡ್ ಮೂರು ಅಲೆಗಳನ್ನು ಗಮನಿಸಿದರೆ ಮಹಾರಾಷ್ಟ್ರದ ಮುಂಬೈ ಮತ್ತು ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿತ್ತು. ಆದರೆ, ಈ ಬಾರಿ ಕರ್ನಾಟಕದ ಬೆಂಗಳೂರು ಭಾರತದಲ್ಲಿ ಹೊಸ ಕೋವಿಡ್ -19 ಹಾಟ್‌ಸ್ಪಾಟ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಸದ್ಯಕ್ಕೆ 600ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವೂ ಸಲಹೆಯನ್ನು ನೀಡಿದೆ.

TV9 Kannada


Leave a Reply

Your email address will not be published.