ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಭೀತಿ ಮತ್ತೆ ಎದುರಾಗಿದ್ದು, ಈ ನಡುವೆ ಸಾಲುಸಾಲು ರಜೆಗಳು ಇರುವುದರಿಂದ ನಗರದಲ್ಲಿರುವ ಹೊಟೇಲ್ಗಳಲ್ಲಿರುವ ರೂಮ್ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

Image Credit source: yatra.com
ಬೆಂಗಳೂರು: ಕ್ರಿಸ್ಮಸ್ ಹಬ್ಬ (Christmas Festival), ಹೊಸ ವರ್ಷ (New Year 2022) ಆಚರಣೆ ಸೇರಿದಂತೆ ವರ್ಷಾಂತ್ಯದಲ್ಲಿ ಸಾಲುಸಾಲು ರಜೆಗಳು ಇರುವುದರಿಂದ ನಗರದಲ್ಲಿರುವ ಹೊಟೇಲ್ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಕೊರೋನಾ ಆಂತಕ (Covid Scare in Bengaluru)ದ ನಡುವೆಯೂ ನಗರದಲ್ಲಿರುವ ಹೊಟೇಲ್ ಬುಕ್ಕಿಂಗ್ (Bengaluru hotel booking) ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ರಜೆ ಮತ್ತು ಇತರ ಕಾರಣಗಳಿಗಾಗಿ ಅನಿವಾಸಿ ಭಾರತೀಯರು ತವರಿನತ್ತ ಆಗಮಿಸುತ್ತಿದ್ದು, ತಂಗಲು ಹೊಟೇಲ್ಗಳನ್ನು ಕಾಯ್ದಿರಿಸುತ್ತಿದ್ದಾರೆ. ಬೆಂಗಳೂರಿನ ಶೇಕಡ 90ರಷ್ಟು ಹೋಟೆಲ್ಗಳು ಭರ್ತಿಗೊಂಡಿದ್ದು, ಸುಮಾರು 55 ಸಾವಿರ ರೂಮ್ಗಳು ಮುಂಚಿತವಾಗಿ ಕಾಯ್ದಿರಿಸಲಾಗಿದೆ.
ರಜೆಗಳು ಇರುವ ಹಿನ್ನಲೆ ಅನಿವಾಸಿ ಭಾರತೀಯರು ಮಾತ್ರವಲ್ಲದೆ ಹೊರ ರಾಜ್ಯದ ಜನರು ಕೂಡ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಲ್ಲಿನ ಹೋಟೆಲ್ ರೂಮ್ಗಳಲ್ಲಿ ಉಳಿದುಕೊಳ್ಳಲು ಕೊಠಡಿಗಳನ್ನು ಮುಂಚಿತವಾಗಿ ಬುಕ್ ಮಾಡುತ್ತಿದ್ದಾರೆ. ಈ ನಡುವೆ ಕೊರೋನಾ ಹೆಚ್ಚುತ್ತಿರುವುದು ಮಾಲೀಕರಿಗೆ ಆತಂಕ ಶುರುವಾಗಿದೆ.