Bengaluru Crime: ಯುವತಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ | Bengaluru Crime News young boy murdered by his friend over girl issue

Bengaluru Crime: ಯುವತಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಪ್ರಾತಿನಿದಿಕ ಚಿತ್ರ

ಬೆಂಗಳೂರು: ಯುವತಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಗರದ ಹೆಚ್​ಎಎಲ್​ನ ಲಾಲ್​ ಬಹದ್ದೂರ್​ ಶಾಸ್ತ್ರಿ ನಗರದಲ್ಲಿ ನಡೆದಿದೆ. ಹಾಡಹಗಲೇ ನಡುರಸ್ತೆಯಲ್ಲಿ ಲಿಖಿತ್ (21) ಎಂಬಾತ ಬರ್ಬರ ಕೊಲೆಯಾಗಿದ್ದಾನೆ. ಡ್ಯಾಗರ್​​ನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ, ಮಾತಾಡುವುದಕ್ಕೆ ನಯೀದ್ ಎಂಬಾತ​​ನನ್ನು ಲಿಖಿತ್ ಕರೆಸಿಕೊಂಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ ಎಂದು ತಿಳಿದುಬಂದಿದೆ.

ಲಿಖಿತ್​ ಎಂಬಾತ ನಯೀದ್​ಗೆ ಡ್ಯಾಗರ್​​ನಿಂದ ಹಲ್ಲೆಗೆ ಮುಂದಾಗಿದ್ದ. ಆಗ ನಯೀದ್ ಡ್ಯಾಗರ್​ ಕಸಿದುಕೊಂಡು ಲಿಖಿತ್​ಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡಿದ್ದ ಲಲಿತ್ ​(21) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹೆಚ್​ಎಎಲ್​​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪಿಎಸ್​ಐ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ವಂಚನೆ
ವ್ಯಕ್ತಿಯೊಬ್ಬನಿಗೆ ಪಿಎಸ್​ಐ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ವಂಚನೆ ಮಾಡಿದ ಪ್ರಕರಣ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಶ್ರೀನಿವಾಸ ಎಂಬುವನ ವಿರುದ್ಧ ಪುಟ್ಟರಾಜುನಿಂದ ಠಾಣೆಗೆ ದೂರು ನೀಡಲಾಗಿದೆ. ಪುಟ್ಟರಾಜು ಪುತ್ರಿ ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿ ಫೇಲಾಗಿದ್ದರು. ಈ ವೇಳೆ, ಕೃಷ್ಣಪ್ಪ ಎಂಬವರು ಕೆಲಸ ಕೊಡಿಸುವುದಾಗಿ ಪುಟ್ಟರಾಜುಗೆ ಭರವಸೆ ನೀಡಿದ್ದರು.

ಬಳಿಕ, ಕೃಷ್ಣಪ್ಪ ಪರಿಚಿತ ಶ್ರೀನಿವಾಸನನ್ನು ಕರೆಸಿ ಮಾತುಕತೆ ನಡೆಸಿದ್ದರು. 55 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು 18 ಲಕ್ಷ ಮುಂಗಡ ಪಾವತಿ ಮಾಡಿಸಿಕೊಂಡಿದ್ದರು. ಕೃಷ್ಣಪ್ಪನ ಮೂಲಕ ಶ್ರೀನಿವಾಸನಿಗೆ 18 ಲಕ್ಷ ಹಣ ನೀಡಿದ್ದರು. ಪುಟ್ಟರಾಜು, ಸ್ನೇಹಿತ ಕೃಷ್ಣಪ್ಪನನ್ನ ನಂಬಿ 18 ಲಕ್ಷ ಹಣ ನೀಡಿದ್ದರು. ಹಣ ನೀಡಿದ ಬಳಿಕ ಮತ್ತೊಬ್ಬ ಸ್ನೇಹಿತನಿಂದ ವಂಚನೆ ವಿವರಿಸಲಾಗಿತ್ತು. ಪಿಎಸ್​ಐ ಆಯ್ಕೆ ಪಾರದರ್ಶಕವಾಗಿರುತ್ತದೆ ಎಂದು ಎಚ್ಚರಿಸಿದ್ದ. ಕೃಷ್ಣಪ್ಪನ ಸ್ನೇಹಿತ, ನೀವು ಮೋಸ ಹೋಗಿದ್ದೀರಿ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಪುಟ್ಟರಾಜು ತಕ್ಷಣ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಮಗಳ ಜತೆ ಸಂಬಂಧ ಹೊಂದಿದ್ದ ಯುವಕನನ್ನು ಯುವತಿಯ ಪೋಷಕರೇ ಕೊಲೆ ಮಾಡಿಸಿದ ಆರೋಪ; 10 ಜನರ ಬಂಧನ 

ಇದನ್ನೂ ಓದಿ: ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ

TV9 Kannada

Leave a comment

Your email address will not be published. Required fields are marked *