Bengaluru filing of false case Santro Ravi’s wife appears at CCB office in Bengaluru news in kannada | Santro Ravi: ಪತಿಯಿಂದ ಸುಳ್ಳು ಕೇಸ್ ದಾಖಲು ಪ್ರಕರಣ: ಸಿಸಿಬಿ ಕಚೇರಿಗೆ ಹಾಜರಾದ ಸ್ಯಾಂಟ್ರೋ ರವಿ ಪತ್ನಿ


ಲ್ಯಾಪ್​ಟಾಪ್​ಗಾಗಿ ತನ್ನ ಪತ್ನಿ ವಿರುದ್ಧವೇ ಸುಳ್ಳು ಕೇಸ್ ದಾಖಲಿದ್ದ ಸ್ಯಾಂಟ್ರೋ ರವಿ ವಿರುದ್ಧ ಪತ್ನಿಯೇ ದೂರು ದಾಖಲಿಸಿದ್ದರು. ಸದ್ಯ ಸುಳ್ಳು ಕೇಸ್ ದಾಖಲು ವಿಚಾರವಾಗಿ ಸ್ಯಾಂಟ್ರೋ ರವಿ ಪತ್ನಿ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

Santro Ravi: ಪತಿಯಿಂದ ಸುಳ್ಳು ಕೇಸ್ ದಾಖಲು ಪ್ರಕರಣ: ಸಿಸಿಬಿ ಕಚೇರಿಗೆ ಹಾಜರಾದ ಸ್ಯಾಂಟ್ರೋ ರವಿ ಪತ್ನಿ

ಸ್ಯಾಂಟ್ರೋ ರವಿ (ಎಡ ಚಿತ್ರ)

ಬೆಂಗಳೂರು: ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ ವಿಚಾರವಾಗಿ ಇಂದು ಸ್ಯಾಂಟ್ರೋ ರವಿ ಪತ್ನಿ ನಗರದಲ್ಲಿರುವ ಸಿಸಿಬಿ ಪೊಲೀಸ್ ಕಚೇರಿಗೆ (CCB Police Bengaluru) ಹಾಜರಾಗಿದ್ದು, ಪೊಲೀಸರು ಸ್ಯಾಂಟ್ರೋ ರವಿ ಪತ್ನಿ ಹೇಳಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಭಾರೀ ಸುದ್ದು ಮಾಡುತ್ತಿರುವ ಉದ್ಯಮಿ ಸ್ಯಾಂಟ್ರೋ ರವಿ (Santro Ravi) ಪ್ರಕರಣದಲ್ಲಿ ಬಗೆದಷ್ಟು ಮಾಹಿತಿ ಹೊರಬೀಳುತ್ತಿದೆ. ತನ್ನ ಪತ್ನಿ ಬಳಿ ಇದ್ದ ಲ್ಯಾಪ್​ಟಾಪ್ ತನ್ನ ಕೈ ಸೇರಲು ಸ್ಯಾಂಟ್ರೋ ರವಿ ಪತ್ನಿ ವಿರುದ್ಧವೇ ಷಡ್ಯಂತರ ರೂಪಿಸುತ್ತಾನೆ. ಇದಕ್ಕಾಗಿ ವರ್ಗಾವಣೆಯಾಗುವ ತಲೆಬಿಸಿಯಲ್ಲಿದ್ದ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್​ ಅವರನ್ನು ಬಳಕೆ ಮಾಡಿಕೊಳ್ಳುತ್ತಾನೆ. ವರ್ಗಾವಣೆ ತಡೆ ಆಮಿಷವೊಡ್ಡಿ ಇನ್ಸ್​​ಪೆಕ್ಟರ್ ಮೂಲಕ ಫೇಕ್ ಪ್ರಕರಣ ದಾಖಲಿಸಿಕೊಳ್ಳುತ್ತಾನೆ. ಅದರಂತೆ ಇನ್ಸ್​ಪೆಕ್ಟರ್ ಮೂವರು ಅಮಾಯಕರನ್ನು ಬಂಧಿಸುತ್ತಾರೆ. ಇವರು ಜೈಲುವಾಸ ಅನುಭವಿಸಿ ಹೊರಬಂದ ನಂತರ ಅಸಲಿ ದೂರನ್ನು ದಾಖಲಿಸುತ್ತಾರೆ. ಇದು ಸ್ಯಾಂಟ್ರೋ ರವಿಗೆ ತಿರುಗುಬಾಣವಾಗಿ ಪರಿಣಮಿಸಿದೆ.

ಲ್ಯಾಪ್​ಟಾಪ್​ಗಾಗಿ ಪತ್ನಿ ವಿರುದ್ಧ ಷಡ್ಯಂತರ ರೂಪಿಸಿದ ರವಿ ವಂಚನೆ ಪ್ರಕರಣದಲ್ಲಿ ಸಿಲುಕಿಸಿಹಾಕಲು ಯತ್ನಿಸುತ್ತಾನೆ. ಇದೇ ಸಂದರ್ಭದಲ್ಲಿ ಕಾಟನ್​ಪೇಟೆ ಠಾಣಾ ಇನ್ಸ್​ಪೆಕ್ಟರ್​ ಪ್ರವೀಣ್ ವರ್ಗಾವಣೆ ತಲೆಬಿಸಿಯಲ್ಲಿ ಇರುತ್ತಾರೆ. ಈ ವಿಚಾರ ತಿಳಿದ ಸ್ಯಾಂಟ್ರೋ ರವಿ, ತಾನು ಹೇಳಿದಂತೆ ಪ್ರಕರಣ ದಾಖಲಿಸಿದರೆ ವರ್ಗಾವಣೆ ತಡೆ ಮಾವುದಾಗಿ ಆಮಿಷವೊಡ್ಡುತ್ತಾನೆ. ತಾನು ಕಾಟನ್​ಪೇಟೆ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿಯೇ ಮುಂದುವರಿಯಬೇಕು ಎನ್ನುವ ಆಸೆಯಿಂದ ಪ್ರವೀಣ್, ಸ್ಯಾಂಟ್ರೋ ರವಿ ಹೇಳಿದಂತೆ ನಕಲಿ ವಂಚನೆ ಪ್ರಕರಣ ದಾಖಲಿಸುತ್ತಾರೆ. ತನ್ನ ಸ್ನೇಹಿತ ಶ್ರೀಪ್ರಕಾಶ್ ಎಂಬಾತನಿಂದ ಸ್ಯಾಂಟ್ರೋ ರವಿ ದೂರು ದಾಖಲಿಸಿದ್ದನು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *