Bengaluru K.R. Market Flyover money threw to get publicity on social media says Arun bengaluru news in kannada | Bengaluru: ಪ್ರಚಾರದ ಹುಚ್ಚಿಗಾಗಿ ಅರುಣ್ ಕೆ.ಆರ್.ಮಾರ್ಕೆಟ್ ಫ್ಲೈಓವರ್​ನಿಂದ 10ಸಾವಿರ ರೂಪಾಯಿ ಎಸೆದಿದ್ದಾನಂತೆ ಮಾರಾಯ್ರೆ!


ಬೆಂಗಳೂರಿನ ಮಾರ್ಕೆಟ್ ಫ್ಲೈಓವರ್​ನಲ್ಲಿ ಹಣ ಎಸೆದ ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ನಡೆಯುತ್ತಿದ್ದ ಅರುಣ್‌ ವಿಚಾರಣೆ ಮುಕ್ತಾಯಗೊಂಡಿದ್ದು, ಸಾಮಾಜಿ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯಲು ಹಣ ಎಸೆದಿರುವುದಾಗಿ ತಿಳಿದುಬಂದಿದೆ.

Bengaluru: ಪ್ರಚಾರದ ಹುಚ್ಚಿಗಾಗಿ ಅರುಣ್ ಕೆ.ಆರ್.ಮಾರ್ಕೆಟ್ ಫ್ಲೈಓವರ್​ನಿಂದ 10ಸಾವಿರ ರೂಪಾಯಿ ಎಸೆದಿದ್ದಾನಂತೆ ಮಾರಾಯ್ರೆ!

ಕೆ.ಆರ್​.ಮಾರ್ಕೆಟ್ ಫ್ಲೈಓವರ್​ ಮೇಲಿಂದ ಹಣ ಎಸೆಯುತ್ತಿರುವ ಅರುಣ್ (ಎಡ ಚಿತ್ರ) ಮತ್ತು ಹಣ ಎಸೆದ ಅರುಣ್ (ಬಲ ಚಿತ್ರ)

ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್​ನಲ್ಲಿ (K.R.Market Flyover) ಹಣ ಎಸೆದ ಪ್ರಕರಣ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ನಡೆಯುತ್ತಿದ್ದ ಅರುಣ್‌ ವಿಚಾರಣೆ ಮುಕ್ತಾಯಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಹುಚ್ಚಿಗಾಗಿ ಹಣ ಎಸೆದಿರುವುದು ತಿಳಿದುಬಂದಿದೆ. ರೀಲ್ಸ್​ಗಾಗಿ ಮಾಡಿದ್ದಲ್ಲ, ನನಗೆ ಸ್ವಲ್ಪ ಸಮಯ ಕೊಡಿ ಎಲ್ಲವೂ ಹೇಳುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದ ಅರುಣ್, ಪೊಲೀಸರ ಮುಂದೆ, “ತಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಹಣ ಎಸೆದಿದ್ದೆ, ಹೆಚ್ಚು ಲೈಕ್ಸ್‌ ಹಾಗೂ ಪ್ರಚಾರ ಸಿಗಬೇಕು ಎಂದು ಈ ರೀತಿ ಮಾಡಿದ್ದೇನೆ” ಎಂದು ಬಾಯಿಬಿಟ್ಟಿದ್ದಾನೆ.

ಚಿಕ್ಕಪೇಟೆ ಎಸಿಪಿ ನೇತೃತ್ವದಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಅರುಣ್ ವಿಚಾರಣೆ ನಡೆದಿದೆ. ಚೀಲದಲ್ಲಿ ನೋಟುಗಳನ್ನು ತುಂಬಿಸಿಕೊಂಡು ಬಂದ ಅರುಣ್ ಮಾರ್ಕೆಟ್ ಫ್ಲೈಓವರ್ ಮೇಲೆ ನಿಂತು ಹಣವನ್ನು ಕೆಳಭಾಗದಲ್ಲಿ ಜನರು ಓಡಾಡುವ ಸ್ಥಳಗಳಿಗೆ ಎಸೆದಿದ್ದಾನೆ. ಸುಮಾರು 4,500 ರೂ. ಹಣವನ್ನು ತೆಗೆದುಕೊಂಡು ಬಂದು ಎಸೆದಿದ್ದ ಅರುಣ್, ಪೊಲೀಸರ ಮುಂದೆ 10 ಸಾವಿರ ತಂದಿದ್ದಾಗಿ ಹೇಳಿಕೆ ನೀಡಿದ್ದಾನೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *