
ಕೊಲೆಯಾದ ಜುಗ್ಗರಾಜ್, ಮನೆಯವರ ಆಕ್ರಂದನ
ಚಾಮರಾಜಪೇಟೆ 4ನೇ ಕ್ರಾಸ್ ಬಳಿಯ ಶಾಸಕರ ಕಚೇರಿ ಸಮೀಪವಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ನಿನ್ನೆ ರಾತ್ರಿ ವೃದ್ಧರೊಬ್ಬರ ಕೊಲೆ ನಡೆದಿದ್ದು, ಶಂಕಿತ ಆರೋಪಿ ಜೈಪುರಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ವೃದ್ಧೊಬ್ಬರ ಭೀರಕ ಕೊಲೆ (Murder)ಯಾದ ಘಟನೆ ನಡೆದಿದೆ. ಚಾಮರಾಜಪೇಟೆ 4ನೇ ಕ್ರಾಸ್ ಬಳಿಯ ಶಾಸಕರ ಕಚೇರಿ ಸಮೀಪವಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ಜುಗ್ಗರಾಜ್ ಜೈನ್(77) ಎಂಬವರ ಭೀಕರ ಹತ್ಯೆ ನಡೆದಿದೆ. ದೀಪಂ ಎಲೆಕ್ಟ್ರಿಕಲ್ಸ್ ಎಂಬ ಅಂಗಡಿ ಇಟ್ಟುಕೊಂಡಿರುವ ಜುಗ್ಗರಾಜ್, ತನ್ನ ಮನೆಯಲ್ಲಿ ಅಂಗಡಿ ಕೆಲಸಗಾರನೊಂದಿಗೆ ಇದ್ದರು. ಹೀಗಾಗಿ ಕೆಲಸಗಾರನೇ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜುಗ್ಗರಾಜ್ ಜೈನ್ ತನ್ನ ಮಗನೊಂದಿಗೆ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಅಲ್ಲದೆ, ಮಗ ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ. ಮಗನ ಪತ್ನಿ ತಾಯಿ ಮನೆಗೆ ತೆರಳಿದ್ದರು. ಹೀಗಾಗಿ ಅಂಗಡಿ ಕೆಲಸಗಾರ ಹಾಗೂ ಜುಗ್ಗರಾಜ್ ಇಬ್ಬರೆ ರಾತ್ರಿ ಮನೆಯಲ್ಲಿದ್ದರು. ಇಂದು ಬೆಳಗ್ಗೆ ಸಮಯ ಕಳೆದರೂ ಯಾಕೆ ಅಂಗಡಿ ತೆರೆದಿಲ್ಲ ಎಂದು ಮೊಮ್ಮಗ ಮನೆಗೆ ತೆರಳಿದ್ದಾನೆ. ಈ ವೇಳೆ ಜುಗ್ಗರಾಜು ಅವರ ಕೊಲೆ ನಡೆದಿರುವುದು ತಿಳಿದುಬಂದಿದೆ. ಕೊಲೆ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ಅಧಿಕಾರಿಗಳೂ ಭೇಟಿ ನೀಡಿದ್ದಾರೆ.