ಪವರ್ ಕಟ್
ಬೆಂಗಳೂರು: ಮಳೆಯ ಕಾಟದಿಂದ ತತ್ತರಿಸಿದ್ದ ಬೆಂಗಳೂರಿನ (Bangalore) ಜನರಿಗೆ ಬೆಸ್ಕಾಂ (BESCOM) ಪವರ್ ಕಟ್ ಶಾಕ್ ನೀಡಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಕಡಿತದ (Power Cut) ಸಮಸ್ಯೆ ಇತ್ತು. ಅಂತೆಯೇ ಇಂದು ಸೋಮವಾರ (ಡಿಸೆಂಬರ್ 6) ಕೂಡ ವಿದ್ಯುತ್ ಕಡಿತವಾಗಲಿದೆ. ಯಾವ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಇಂದು ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇಂದು ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಚಿಕ್ಕಲಕ್ಷ್ಮಿ ಲೇಔಟ್, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಮಾರುತಿ ಲೇಔಟ್, ಈಶ್ವರ ಲೇಔಟ್, ಲಕ್ಷ್ಮಿ ನಗರ, ಗುರು ರಾಘವೇಂದ್ರ ಲೇಔಟ್, ಶಿವಶಕ್ತಿ ನಗರ, ಬೀರಪ್ಪ ಗಾರ್ಡನ್, ದೊಡ್ಮನೆ ಕೈಗಾರಿಕಾ ಪ್ರದೇಶ, ಚರ್ಚ್ ರಸ್ತೆ, ಚುಂಚಗಟ್ಟಾ ಮುಖ್ಯ ರಸ್ತೆ, ರಾಜೀವ್ ಗಾಂಧಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಿದೆ.