Bengaluru Power Cut: ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್, ಟೀಚರ್ಸ್​ ಕಾಲೋನಿ ಸೇರಿದಂತೆ ಹಲವೆಡೆ ಇಂದು ಪವರ್ ಕಟ್ | Bengaluru Power Cut: Bangalore to face power cuts from August 10 to 13 Check list of affected areas BESCOM


Bangalore News: ಇಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರು ಪಡೆದಿರುವ ಬೆಂಗಳೂರಿನ (Bangalore Power Cut) ಕೆಲವು ಭಾಗಗಳಲ್ಲಿ ಇಂದಿನಿಂದ (ಆಗಸ್ಟ್ 10) ಆಗಸ್ಟ್ 13ರವರೆಗೆ ಪವರ್ ಕಟ್ (Power Cut) ಇರಲಿದೆ. ಕೇಬಲ್​ಗಳ ಚಾರ್ಜಿಂಗ್, ಮರ ಕತ್ತರಿಸುವುದು, ಟ್ರಾನ್ಸ್​ಫಾರ್ಮರ್ ವರ್ಕ್ ಮುಂತಾದ ಬೆಸ್ಕಾಂನ (BESCOM) ನಿರ್ವಹಣಾ ಕಾಮಗಾರಿಗಳಿಂದಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಚ್​ಎಸ್​ಆರ್​ ಲೇಔಟ್, ಜಕ್ಕಸಂದ್ರ, ಸರ್ಜಾಪುರ ಮುಂತಾದ ಏರಿಯಾಗಳಲ್ಲಿ ಇಂದಿನಿಂದ 4 ದಿನ ಕರೆಂಟ್ ಇರುವುದಿಲ್ಲ.

ಇಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜಕ್ಕಸಂದ್ರ, ಎಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಲಾರ್‌ಪುರಿಯಾ ಗ್ರೀನೇಜ್ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ.

TV9 Kannada


Leave a Reply

Your email address will not be published. Required fields are marked *