ಮುತ್ಯಾಲಪ್ಪ ಎಂಬಾತನನ್ನು ಪುಸಲಾಯಿಸಿ ಆಂಧ್ರಪ್ರದೇಶದ ಅನಂತಪುರಕ್ಕೆ ಕರೆದೊಯ್ದ ಆರೋಪಿಗಳು ರಾಡ್ನಿಂದ ಹೊಡೆದು ಕೊಲೆ ಮಾಡಿ ಬಳಿಕ ಶವ ತಂದು ವಿಜಯಪುರದ ಬುಲ್ಲಹಳ್ಳಿ ಬಳಿ ಎಸೆದಿದ್ದರು.

ಸಾಂದರ್ಭಿಕ ಚಿತ್ರ
ದೇವನಹಳ್ಳಿ: ಅರ್ಧ ಶತಕದಷ್ಟು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮುತ್ಯಾಲಪ್ಪನ ಬರ್ಬರ ಕೊಲೆ (Murder Case) ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಠಾಣಾ ಪೊಲೀಸರು ವಕೀಲ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಬಾಲಪರಾಧಿಯನ್ನು ವಶಕ್ಕೆ ಪಡೆದ್ದಿದ್ದಾರೆ. ಆರೋಪಿ ನಾಗೇಶ್ ಮತ್ತು ಸೋಮಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ಬಾಲಾಪರಾಧಿಯನ್ನು ಪೊಲೀಸರು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರದ ಹಲವೆಡೆ ಕಳ್ಳತನ, ದರೋಡೆ ಮಾಡುತ್ತಿದ್ದ ಕೊಲೆಯಾದ ಮುತ್ಯಾಲಪ್ಪನ ಮೇಲೆ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಿವೆ. ಅಷ್ಟೇ ಅಲ್ಲದೆ ವೃತ್ತಿಯಲ್ಲಿ ವಕೀಲನಾಗಿರುವ ನಾಗೇಶ್ ಮತ್ತು ಮುತ್ಯಾಲಪ್ಪನ ನಡುವೆ ಗಲಾಟೆಯೂ ನಡೆಯುತ್ತಿತ್ತು. ಇವರಿಬ್ಬರ ನಡುವಿನ ದ್ವೇಷ 10 ವರ್ಷಗಳದ್ದಾಗಿವೆ. ಹಳೇ ದ್ವೇಷ ಹಿನ್ನಲೆ ಮುತ್ಯಾಲಪ್ಪನನ್ನು ಮುಗಿಸಲು ನಾಗೇಶ್ ಅಪ್ರಾಪ್ತನಿಗೆ ಕೇವಲ ಎರಡೂವರೆ ಸಾವಿರ ರೂಪಾಯಿಗೆ ಸುಪಾರಿ ಕೊಟ್ಟಿದ್ದನು.
ತಾಜಾ ಸುದ್ದಿ