Bharat Jodo Yatra: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕೇರಳದಲ್ಲಿ ಅಕ್ರಮ ಬ್ಯಾನರ್​, ಕಾಂಗ್ರೆಸ್ ಧ್ವಜ ಅಳವಡಿಕೆ; ಹೈಕೋರ್ಟ್​ ಅಸಮಾಧಾನ | Bharat Jodo Yatra: Illegal Installations; Kerala Court On Congress Bharat Jodo Yatra Flags and Banners


ತಿರುವನಂತಪುರದಿಂದ ತ್ರಿಶೂರ್ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿಯೊಂದು ಬದಿಯಲ್ಲಿ ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಧ್ವಜ ಮತ್ತು ಬೋರ್ಡ್​ಗಳನ್ನು ಹಾಕಿದೆ.

Bharat Jodo Yatra: ಭಾರತ್ ಜೋಡೋ ಯಾತ್ರೆ ಪ್ರಯುಕ್ತ ಕೇರಳದಲ್ಲಿ ಅಕ್ರಮ ಬ್ಯಾನರ್​, ಕಾಂಗ್ರೆಸ್ ಧ್ವಜ ಅಳವಡಿಕೆ; ಹೈಕೋರ್ಟ್​ ಅಸಮಾಧಾನ

ಸಾಂದರ್ಭಿಕ ಚಿತ್ರ

ಕೊಚ್ಚಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಈಗಾಗಲೇ ‘ಭಾರತ್ ಜೊಡೋ ಯಾತ್ರೆ’ (Bharat Jodo Yatra) ಆರಂಭವಾಗಿದೆ. ಕೇರಳದಲ್ಲಿರುವ ಭಾರತ್ ಜೋಡೋ ಯಾತ್ರೆ ಮುಂದಿನ ದಿನಗಳಲ್ಲಿ ನಾನಾ ರಾಜ್ಯಗಳಲ್ಲಿ ಮುಂದುವರೆಯಲಿದೆ. ಈ ಯಾತ್ರೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ನಾಯಕರ ಸ್ವಾಗತಕ್ಕೆ ಕೇರಳದ ರಸ್ತೆಗಳಲ್ಲಿ ಬೃಹತ್ ಬ್ಯಾನರ್​, ಬೋರ್ಡ್​ ಮತ್ತು ಸಾಲು ಸಾಲು ಧ್ವಜಗಳನ್ನು ಹಾಕಲಾಗಿದೆ. ಆದರೆ, ಕೇರಳದ ಹೆದ್ದಾರಿಗಳಲ್ಲಿನ ಬೋರ್ಡ್​ಗಳು ಮತ್ತು ಧ್ವಜಗಳ ಬಗ್ಗೆ ಕೇರಳ ಹೈಕೋರ್ಟ್ (Kerala High Court) ಅಸಮಾಧಾನ ವ್ಯಕ್ತಪಡಿಸಿದೆ.

ತಿರುವನಂತಪುರದಿಂದ ತ್ರಿಶೂರ್ ಮತ್ತು ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿಯ ಪ್ರತಿಯೊಂದು ಬದಿಯಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಧ್ವಜ ಮತ್ತು ಬೋರ್ಡ್​ಗಳನ್ನು ಹಾಕಿದೆ. ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

TV9 Kannada


Leave a Reply

Your email address will not be published.