BharOS Madras IIT Developed Made In India Operating System indigenously built operating system tested by Dharmendra Pradhan and Ashwini Vaishnaw | BharOS: ಬಂದಿದೆ ದೇಶೀಯ ಆಪರೇಟಿಂಗ್ ಸಿಸ್ಟಂ; ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಭಾರ್​ಒಎಸ್ ಪರಿಶೀಲಿಸಿದ ಧರ್ಮೇಂದ್ರ ಪ್ರಧಾನ್


BharOS ಎಂಬುದು ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಖಾಸಗೀತನ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಒತ್ತು ನೀಡುವುದು ಇದರ ವಿಶೇಷ. ಗೂಗಲ್​​ನ ಆ್ಯಂಡ್ರಾಯ್ಡ್​ ಹಾಗೂ ಐಒಎಸ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

BharOS: ಬಂದಿದೆ ದೇಶೀಯ ಆಪರೇಟಿಂಗ್ ಸಿಸ್ಟಂ; ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಭಾರ್​ಒಎಸ್ ಪರಿಶೀಲಿಸಿದ ಧರ್ಮೇಂದ್ರ ಪ್ರಧಾನ್

ಸಂಪೂರ್ಣ ಸ್ವದೇಶಿ ಆಪರೇಟಿಂಗ್ ಸಿಸ್ಟಂ BharOS ಅನ್ನು ಮದ್ರಾಸ್ ಐಐಟಿ (Madras IIT) ಅಭಿವೃದ್ಧಿಪಡಿಸಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪರಿಶೀಲನೆ ನಡೆಸಿದರು. ಸಚಿವ ಅಶ್ವಿನಿ ವೈಷ್ಣವ್ ಕೂಡ ಹಾಜರಿದ್ದರು.

ನವದೆಹಲಿ: ಆ್ಯಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳಂತೆಯೇ (Operating System) ಭಾರತಕ್ಕೆ ಶೀಘ್ರದಲ್ಲೇ ದೇಶೀಯ ಆಪರೇಟಿಂಗ್ ಸಿಸ್ಟಂ ದೊರೆಯಲಿದೆ. ಸಂಪೂರ್ಣ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಭಾರ್​ಒಎಸ್ (BharOS) ಅನ್ನು ಮದ್ರಾಸ್ ಐಐಟಿ (Madras IIT) ಅಭಿವೃದ್ಧಿಪಡಿಸಿದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪರಿಶೀಲನೆ ನಡೆಸಿದರು. ದೇಶೀಯ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಎಂಟು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡಿದ್ದಾಗ ಕೆಲವರು ಅವರನ್ನು ಹಾಸ್ಯ ಮಾಡಿದ್ದರು. ಆದರೆ ತಂತ್ರಜ್ಞರು, ಅನ್ವೇಷಕರು, ಕೈಗಾರಿಕೆಗಳು ಹಾಗೂ ಸಂಸ್ಥೆಗಳು ಅವರ ದೃಷ್ಟಿಕೋನವನ್ನು ಒಪ್ಪಿಕೊಂಡು ಇಂದು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಆಪರೇಟಿಂಗ್ ಸಿಸ್ಟಂ ಪರಿಶೀಲನೆ ವೇಳೆ ಮತ್ತೊಬ್ಬರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಹಾಜರಿದ್ದರು.

ಈ ಸಾಧನೆಯ ಹಿಂದೆ ಅನೇಕ ಅಡೆತಡೆಗಳಿರುತ್ತವೆ. ಅನೇಕರು ಇಂಥ ಪ್ರಯತ್ನಗಳು ಯಶಸ್ವಿಯಾಗಬೇಕೆಂದು ಬಯಸುವುದಿಲ್ಲ ಮತ್ತು ಅಡೆತಡೆಗಳನ್ನು ಒಡ್ಡುತ್ತಿರುತ್ತಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ತಾಜಾ ಸುದ್ದಿ

ಏನಿದು ಭಾರ್​ಒಎಸ್ (BharOS)

ಭಾರ್​ಒಎಸ್ ಎಂಬುದು ಹೊಸ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಖಾಸಗೀತನ ಮತ್ತು ಸುರಕ್ಷತೆಯ ಮೇಲೆ ಹೆಚ್ಚು ಒತ್ತು ನೀಡುವುದು ಇದರ ವಿಶೇಷ. ಗೂಗಲ್​​ನ ಆ್ಯಂಡ್ರಾಯ್ಡ್​ ಹಾಗೂ ಐಒಎಸ್ ಮಾದರಿಯಲ್ಲಿಯೇ ಇರಲಿದೆ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

TV9 Kannada


Leave a Reply

Your email address will not be published. Required fields are marked *