Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್ – Bharti Airtel acquires stake in Bengaluru start up Lemnisk Latest business news in Kannada


ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್

ಭಾರ್ತಿ ಏರ್​ಟೆಲ್

ನವದೆಹಲಿ: ಬೆಂಗಳೂರಿನ ಸ್ಟಾರ್ಟಪ್ ಕಂಪನಿ ಲೆಮ್​ನಿಸ್ಕ್ (Lemnisk) ಶೇಕಡಾ 8ರಷ್ಟು ಷೇರುಗಳನ್ನು ದೇಶದ ಅತಿದೊಡ್ಡ ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ (Bharti Airtel) ಖರೀದಿಸಿದೆ. ಸ್ಟಾರ್ಟಪ್ ಉತ್ತೇಜನ ಯೋಜನೆಯ ಅಂಗವಾಗಿ ಈ ಷೇರು ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಏರ್​​ಟೆಲ್ ತಿಳಿಸಿದೆ. ಬೆಂಗಳೂರಿನ ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಮತ್ತು ಸೆಕ್ಯೂರ್ ಕಸ್ಟಮರ್ ಡಾಟಾ ಪ್ಲಾಟ್​ಫಾರ್ಮ್ (ಸಿಡಿಪಿ) ಅನ್ನು ಒದಗಿಸುತ್ತದೆ.

‘ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ. ಈ ಮೈತ್ರಿಯಿಂದ ಅನೇಕ ಸಾಧ್ಯತೆಗಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಜಗತ್ತಿನ ಅತಿದೊಡ್ಡ ಸಿಡಿಪಿ ತಾಣವನ್ನು ಸೃಷ್ಟಿಸಬಹುದಾಗಿದೆ. ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಪ್ರತಿ ದಿನ ಸುಮಾರು 350 ದಶಲಕ್ಷ ಗ್ರಾಹಕರನ್ನು ಹೊಂದಿರುವ ನಮಗೆ ಚೆನ್ನಾಗಿ ಹೊಂದಾಣಿಕೆಯಾಗಲಿದೆ’ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *