Big Billion Days Sale: ಹಿಂದೆಂದೂ ಇರದ ಆಫರ್: ಕೇವಲ 999 ರೂ. ಗೆ ಈ ಟಾಪ್ ಬ್ರಾಂಡ್ ಸ್ಮಾರ್ಟ್​ ಟಿವಿ ನಿಮ್ಮದಾಗಿಸಿ | Flipkart Big Billion Days Sale 2022 you can get bumper discount new smart TV check list


Best Smart TV: ನೀವು ಹೊಸ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಉತ್ತಮ ಅವಕಾಶ. ಟಾಪ್ ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ಬಂಪರ್ ಡಿಸ್ಕೌಂಟ್​ ಮೂಲಕ ಖರೀದಿಸಬಹುದು.

Big Billion Days Sale: ಹಿಂದೆಂದೂ ಇರದ ಆಫರ್: ಕೇವಲ 999 ರೂ. ಗೆ ಈ ಟಾಪ್ ಬ್ರಾಂಡ್ ಸ್ಮಾರ್ಟ್​ ಟಿವಿ ನಿಮ್ಮದಾಗಿಸಿ

Flipkart Big Billion Days Sale

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days Sale 2022) ಮತ್ತು ಅಮೆಜಾನ್ ಇಂಡಿಯಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon India’s Great Indian Festival sale) ಶುಕ್ರವಾರದಿಂದ ಎಲ್ಲರಿಗೂ ಲೈವ್ ಆಗಿದೆ. ವಿಶೇಷವೆಂದರೆ ಈ ಸೇಲ್ ಅಡಿಯಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಟಿವಿಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಸಾಧನಗಳು ಶೇಕಡಾ 80 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಫ್ಲಿಪ್‌ಕಾರ್ಟ್​ನಲ್ಲಿ ಅನೇಕ ಆಫರ್​ಗಳನ್ನು ನೀಡಲಾಗಿದ್ದು ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮ ಖರೀದಿಗಳ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಸಂದರ್ಭ ನೀವು ಹೊಸ ಸ್ಮಾರ್ಟ್ ಟಿವಿಯನ್ನು (Smart TV) ಖರೀದಿಸಲು ಯೋಚಿಸುತ್ತಿದ್ದರೆ ಉತ್ತಮ ಅವಕಾಶವಾಗಿದೆ. ಟಾಪ್ ಬ್ರಾಂಡ್‌ಗಳ ಸ್ಮಾರ್ಟ್ ಟಿವಿಗಳು ಬಂಪರ್ ಡಿಸ್ಕೌಂಟ್​ನಲ್ಲಿ ಖರೀದಿಸಬಹುದು.

Kodak 7XPRO Series HD Ready LED ಸ್ಮಾರ್ಟ್​ ಆಂಡ್ರಾಯ್ಡ್ ಟಿವಿ: KODAK 7XPRO ಸರಣಿ 80 cm (32 ಇಂಚು) HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಇದೀಗ ಕೇವಲ 8,999 ರೂ. ಗೆ ಮಾರಾಟ ಆಗುತ್ತಿದೆ. ಇದರ ಮೂಲ ಬೆಲೆ 18,499 ರೂ. ಆಗಿದೆ. ಜೊತೆಗೆ 8,000 ರೂ. ಗಳ ಎಕ್ಸ್​ಚೇಂಜ್ ಆಫರ್ ನೀಡಲಾಗಿದ್ದು, ಅಷ್ಟೂ ಮೊತ್ತದ ವಿನಿಮಯ ಕೊಡುಗೆಯನ್ನು ಬಳಸಿದರೆ, ನೀವು 999 ರೂ. ಗೆ ಈ ಟಿವಿಯನ್ನು ಖರೀದಿಸಬಹುದು.

ಸ್ಯಾಮ್‌ಸಂಗ್‌ HD ರೆಡಿ LED ಸ್ಮಾರ್ಟ್ ಟೈಜೆನ್ ಟಿವಿ: ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ ಕಂಪನಿಯ ಸ್ಯಾಮ್‌ಸಂಗ್‌ ಹೆಚ್‌ಡಿ ಎಲ್‌ಇಡಿ ಸ್ಮಾರ್ಟ್‌ ಟೈಜೆನ್‌ ಟಿವಿ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಕೇವಲ 15,490 ರೂ. ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಸಿದರೆ 5% ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ. ನೋ ಕಾಸ್ಟ್‌ EMI ಆಯ್ಕೆ ಕೂಡ ಲಭ್ಯವಿದೆ.

Motorola Reveau 2 HD Ready LED ಸ್ಮಾರ್ಟ್​ ಆಂಡ್ರಾಯ್ಡ್ ಟಿವಿ: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ, ಈ ಟಿವಿ ಕೇವಲ 10,999 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದರ ಮೂಲಬೆಲೆ 20,000 ರೂ. ಆಗಿದೆ. ನೀವು ಆಕ್ಸಿಸ್ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಲ್ಲಿ ಪಾವತಿಸುವ ಮೂಲಕ 1,100 ರೂ. ಗಳ ಡಿಸ್ಕೌಂಟ್ ಕೂಡ ಪಡೆಯಬಹುದು. ಅಲ್ಲದೆ, ಹಳೆಯ ಟಿವಿಯ ಬದಲಿಗೆ ಖರೀದಿಸುವ ಮೂಲಕ ನೀವು 9 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

ರಿಯಲ್‌ಮಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಈ ಸ್ಮಾರ್ಟ್​ಟಿವಿ ಶೇ. 47 ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಟಿವಿಯನ್ನು ನೀವು ಕೇವಲ 18,999 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಕ್ಯಾಶ್‌ಬ್ಯಾಕ್‌, ಕೂಪನ್‌ ಆಫರ್‌ಗಳು ಕೂಡ ಲಭ್ಯವಾಗಲಿದೆ. ಇನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ 5% ರಿಯಾಯಿತಿಯನ್ನು ಕೂಡ ನೀಡಲಿದೆ. ಈ ಸ್ಮಾರ್ಟ್‌ಟಿವಿ ಕ್ರೋಮಾ ಬೂಸ್ಟ್ ಪಿಕ್ಚರ್ ಎಂಜಿನ್‌ನಿಂದ ಚಾಲಿತವಾಗಿದೆ.

TV9 Kannada


Leave a Reply

Your email address will not be published.