BIG BREAKING; ಟಿವಿ ಚಾನೆಲ್​​​​ಗಳಿಗೆ ಗುಡ್​​​ನ್ಯೂಸ್​​ -TRP ರಿಲೀಸ್​​ ಡೇಟ್​ ಫಿಕ್ಸ್​​


ನವದೆಹಲಿ: ಇದು ಬಹುತೇಕರಿಗೆ ಗೊತ್ತಿಲ್ಲ.. ಸುಮಾರು 18 ತಿಂಗಳಿಂದ ಭಾರತದ ಯಾವ ಸುದ್ದಿ ವಾಹಿನಿಗಳಿಗೂ ಟಿಆರ್​ಪಿ ರೇಟಿಂಗೇ ಸಿಕ್ಕಿರಲಿಲ್ಲ. ಸದ್ಯ ಟಿಆರ್​ಪಿಗೆ ಹಿಡಿದಿದ್ದ ಗ್ರಹಣ ಕಳೆದಿದ್ದು, ರೇಟಿಂಗ್ ಡೇಟ್ ಫಿಕ್ಸ್ ಆಗಿದೆ. ಹೌದು, ಮಾರ್ಚ್​​​ 17ರಿಂದ ಸುದ್ದಿ ವಾಹಿನಿಗಳ ರೇಟಿಂಗ್​​​​ಅನ್ನು ಬಿಡುಗಡೆ ಮಾಡೋದಾಗಿ ಬಾರ್ಕ್ (BARC) ಇಂಡಿಯಾ ಹೇಳಿದೆ.

ಬಾರ್ಕ್​ ಇಂಡಿಯಾ ಸದ್ಯ ಸುದ್ದಿ ವಾಹಿನಿಗಳ ರೇಟಿಂಗ್​ ನೀಡುವ ಬಗ್ಗೆ ಕೆಲಸ ಆರಂಭಿಸಿದೆ. 2022ರ 10ನೇ ವಾರದಿಂದ ಜಾರಿಗೆ ಬರುವಂತೆ ರೇಟಿಂಗ್​​ಅನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ನಿಯಮಗಳಂತೆ ರೇಟಿಂಗ್​​ ಮಾರ್ಚ್​​ 17ರ ಗುರುವಾರ ಬಿಡುಗಡೆ ಆಗಲಿದ್ದು, ಈ ಬಗ್ಗೆ ನಮ್ಮ ಗ್ರಾಹಕರು ಹಾಗೂ ಸ್ಟಾಕ್​ ಹೋಲ್ಡರ್​​ಗೆ ಮಾಹಿತಿ ನೀಡಿದ್ದೇವೆ ಎಂದು ಬಾರ್ಕ್​ ತಿಳಿಸಿದೆ.

ಬಾರ್ಕ್​ ಚಂದಾದರು ಬಳಕೆ ಮಾಡುವ YUMI ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲಾ ವೀಕ್ಷಕರಿಗೆ ಡೇಟಾವನ್ನು ಪ್ರಕಟಿಸಲಾಗುತ್ತದೆ. ತಾಂತ್ರಿಕ ಸಮಿತಿಯ ಸದಸ್ಯರು, ತಜ್ಞರ ಬೆಂಬಲದೊಂದಿಗೆ ರೇಟಿಂಗ್​ ನೀಡಲಾಗುತ್ತದೆ. ಪರಿಣಾಮ ಜಾಹೀರಾತುದಾರರು ಮತ್ತು ಮಾಧ್ಯಮ ಸಂಸ್ಥೆಗಳು ಉತ್ತಮ ಕರೆನ್ಸಿಯನ್ನು ಪಡೆದುಕೊಳ್ಳಲು ಬಾರ್ಕ್​ ಇಂಡಿಯಾದ ಮಹತ್ವ ಹೆಜ್ಜೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಕಳೆದ ಜನವರಿಯಲ್ಲಿ ತುರ್ತಾಗಿ ಸುದ್ದಿ ವಾಹಿನಿಗಳ ರೇಟಿಂಗ್‌ನ ಬಿಡುಗಡೆ ಮಾಡಬೇಕು ಅಂತ BARCಗೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಆದರೂ ರೇಟಿಂಗ್​ ಬಿಡುಗಡೆ ಆಗದ ಹಿನ್ನೆಲೆಯಲ್ಲಿ, NBF, ಸುದ್ದಿ ಪ್ರಸಾರಕರ ಫೆಡರೇಶನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಪತ್ರ ಬರೆದು, ಸರ್ಕಾರದ ಆದೇಶ ಅನುಷ್ಠಾನಕ್ಕೆ ನಿರ್ದೇಶನ ನೀಡುವಂತೆ ಕೋರಿ, ತಕ್ಷಣಕ್ಕೆ ಕ್ರಮ ಜರುಗಿಸುವಂತೆ ಮನವಿ ಮಾಡಿತ್ತು.

News First Live Kannada


Leave a Reply

Your email address will not be published.