BIG BREAKING ಪ್ರತಿಷ್ಠಿತ ‘ಮಂತ್ರಿಮಾಲ್’​ಗೆ ಮತ್ತೆ ಬೀಗ ಜಡಿದ BBMP


ಬೆಂಗಳೂರು: ತೆರಿಗೆ ಕಟ್ಟದ ಆರೋಪ ಎದುರಿಸುತ್ತಿರುವ ನಗರದ ಪ್ರತಿಷ್ಠಿತ ಮಂತ್ರಿಮಾಲ್​ಗೆ ಮತ್ತೆ ಬಿಬಿಎಂಪಿ ಬೀಗ ಜಡಿದಿದೆ. 27 ಕೋಟಿ ರೂಪಾಯಿ ತೆರಿಗೆಯನ್ನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳಿಂದ ಮಂತ್ರಿಮಾಲ್​ಗೆ ಬೀಗ ಹಾಕಿದ್ದಾರೆ.

 

ಮೂರು ವರ್ಷಗಳ ಅವಧಿಯಲ್ಲಿ ಮಂತ್ರಿಮಾಲ್​ 36 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನ ಕಟ್ಟಬೇಕಿತ್ತು. ಹೀಗಾಗಿ ಕಳೆದ ಅಕ್ಟೋಬರ್​ನಲ್ಲಿ ಬೀಗ ಕೂಡ ಜಡಿಯಲಾಗಿತ್ತು. ಈ ಸಂದರ್ಭದಲ್ಲಿ 5 ಕೋಟಿ ಹಣವನ್ನ ಮಂತ್ರಿಮಾಲ್ ನೀಡಿತ್ತು. ಅಕ್ಟೋಬರ್ 31ರ ಬಳಿಕ ಹಲವು ಬಾರಿ ನೋಟಿಸ್ ನೀಡಿದ್ದರೂ ಉಳಿದ ಹಣವನ್ನ ಮಂತ್ರಿಮಾಲ್ ನೀಡಿರಲಿಲ್ಲ ಎನ್ನಲಾಗಿದೆ.

ಅಕ್ಟೋಬರ್ ಮುಗಿದರೂ ತೆರಿಗೆ ಕಟ್ಟದಿದ್ದರಿಂದ ನವೆಂಬರ್ 15ರಂದು ಮತ್ತೆ ಬೀಗ ಹಾಕಲು ಮುಂದಾಗಿತ್ತು. ನವೆಂಬರ್ 15ರಂದು ಮಂತ್ರಿಮಾಲ್​ಗೆ 15 ದಿನಗಳ ಕಾಲಾವಕಾಶವನ್ನ ಪಾಲಿಕೆ ಕೊಟ್ಟಿತ್ತು.

ಯಾವ ವರ್ಷದಲ್ಲಿ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ..?

  • 2018-19 ರಲ್ಲಿ ಬಾಕಿ 6ಕೋಟಿ 77 ಲಕ್ಷ ರೂಪಾಯಿ
  • 2019-20 ರಲ್ಲಿ ಬಾಕಿ 6ಕೋಟಿ 77 ಲಕ್ಷ ರೂಪಾಯಿ
  • 2020-21 ರಲ್ಲಿ ಬಾಕಿ 6ಕೋಟಿ 77 ಲಕ್ಷ ರೂಪಾಯಿ
  • 2021-22 ರಲ್ಲಿ ಬಾಕಿ 6 ಕೋಟಿ 88 ಲಕ್ಷ ರೂಪಾಯಿ
  • ಒಟ್ಟು ತೆರಿಗೆ ಬಾಕಿ 27 ಕೋಟಿ 77 ಲಕ್ಷ ರೂಪಾಯಿ

News First Live Kannada


Leave a Reply

Your email address will not be published. Required fields are marked *