Big Breaking; SR ವಿಶ್ವನಾಥ್​ ಕೇಸ್- ಆರೋಪಿ ಕುಳ್ಳ ದೇವರಾಜ್ ಅರೆಸ್ಟ್​


ಬೆಂಗಳೂರು:  ಯಲಹಂಕ ಶಾಸಕ ಎಸ್​​.ಆರ್​ ವಿಶ್ವನಾಥ್​​ ಹತ್ಯೆ ಕೇಸ್​​ನ ಆರೋಪಿ ಕುಳ್ಳ ದೇವರಾಜ್​ನನ್ನು ರಾಜಾನುಕುಂಟೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಬಂಧನ ಕುರಿತು ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್​​ಪಿ ವಂಶಿಕೃಷ್ಣ  ಪ್ರಕರಣ ಕುರಿತು  ಇವತ್ತು ದೂರುದಾರರಿಗೆ ನೋಟಿಸ್ ನೀಡಿದ್ವಿ ಆ ಪ್ರಕಾರ ಅವರು ಠಾಣೆಗೆ ಬಂದು ಸಾಕ್ಷಿಗಳನ್ನು ಹಾಜರು ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಸದ್ಯ ಸಾಕ್ಷ್ಯಗಳ ಪರಿಶೀಲನೆ ನಡೆಸಲಾಗ್ತಿದ್ದು ಕುಳ್ಳ ದೇವರಾಜ್​ನ್ನು ಬಂಧನ ಮಾಡಿದ್ದೇವೆ.  ಈ ಕೇಸ್​ನಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಹೊರಗೆಳೆಯಲಿದ್ದೇವೆ ಎಂದಿದ್ದಾರೆ.

ಇನ್ನು ಅರೆಸ್ಟ್​ ಬಳಿಕ ರಾಜನಕುಂಟೆ ಪೊಲೀಸ್ ಕುಳ್ಳ ದೇವರಾಜ್ ನನ್ನ ಸ್ಪಾಟ್ ಮಹಜರಿಗೆ ಕರೆದೊಯ್ದಿದ್ದಾರೆ ಆರ್. ಟಿ ನಗರ , ಗೋಪಾಲಕೃಷ್ಣ ಮನೆ ಹೀಗೆ ವೀಡಿಯೊ ಮಾಡಿದ್ದ ಸ್ಥಳಗಳಿಗೆ ಕರೆದೊಯ್ದ ಪೊಲೀಸ್ರು ಮಹಜರ್​ ನಂತರ ಸ್ಟೇಷನ್​ ಬೇಲ್ ಮೇಲೆ ಕುಳ್ಳ ದೇವರಾಜ್ ನನ್ನ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

News First Live Kannada


Leave a Reply

Your email address will not be published. Required fields are marked *