Big News: ದೇಶದ 80 ಕೋಟಿ ಬಡವರಿಗೆ ಮತ್ತೆ 3 ತಿಂಗಳು ಉಚಿತ ರೇಷನ್; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ | Pradhan Mantri Garib Kalyan Anna Yojana: Union Government Extended Free ration scheme by 3 months


ಭಾರತದ 80 ಕೋಟಿ ಬಡವರಿಗೆ ಇನ್ನೂ 3 ತಿಂಗಳು ಉಚಿತ ಪಡಿತರ ಸಿಗಲಿದೆ. ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Big News: ದೇಶದ 80 ಕೋಟಿ ಬಡವರಿಗೆ ಮತ್ತೆ 3 ತಿಂಗಳು ಉಚಿತ ರೇಷನ್; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY)ಯನ್ನು 3 ತಿಂಗಳು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಬಡವರಿಗೆ ಮತ್ತೆ 3 ತಿಂಗಳ ಕಾಲ ಉಚಿತ ರೇಷನ್ (Free Ration) ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ 80 ಕೋಟಿ ಬಡವರಿಗೆ ಇನ್ನೂ 3 ತಿಂಗಳು ಉಚಿತ ಪಡಿತರ ಸಿಗಲಿದೆ. ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

PMGKAY ಯೋಜನೆಯಡಿ ಕೇಂದ್ರ ಸರ್ಕಾರವು ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಬಡವರ ಕಷ್ಟವನ್ನು ಕಡಿಮೆ ಮಾಡಲು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಸುಮಾರು 80 ಕೋಟಿ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ಈ ಯೋಜನೆಯನ್ನು ಮಾರ್ಚ್ 2020ರಲ್ಲಿ ಪ್ರಾರಂಭಿಸಲಾಗಿತ್ತು. ಅಂದಿನಿಂದ ಈ ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿದ್ದ ಈ ಯೋಜನೆಯನ್ನು ಇನ್ನೂ 3 ತಿಂಗಳು ವಿಸ್ತರಿಸಲಾಗಿದೆ.

TV9 Kannada


Leave a Reply

Your email address will not be published.