Big News: ಮೊದಲ ಬಾರಿಗೆ ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ಭೇಟಿಯಾದ ಗೂಗಲ್ ಸಿಇಒ ಸುಂದರ್ ಪಿಚೈ | Google CEO Sundar Pichai visits Indian Embassy in US for the First Time


ಭಾರತೀಯ ರಾಯಭಾರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ಭಾರತ ಕೈಗೊಂಡಿರುವ ಹಲವು ಡಿಜಿಟಲೀಕರಣದ ಇನಿಷಿಯೇಟಿವ್ ಬಗ್ಗೆ ಬಹಳ ಶ್ಲಾಘಿಸಿದ್ದಾರೆ.

Big News: ಮೊದಲ ಬಾರಿಗೆ ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ಭೇಟಿಯಾದ ಗೂಗಲ್ ಸಿಇಒ ಸುಂದರ್ ಪಿಚೈ

ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯನ್ನು ಭೇಟಿಯಾದ ಗೂಗಲ್ ಸಿಇಓ ಸುಂದರ್ ಪಿಚ್ಚೈ

ವಾಷಿಂಗ್ಟನ್: ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ (Washington DC) ಭಾರತದ ರಾಯಭಾರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್​ಜಿತ್ ಸಿಂಗ್ ಸಂಧು (India’s Ambassador Taranjit Singh Sandhu) ಅವರೊಂದಿಗೆ ದೇಶದಲ್ಲಿ ಟೆಕ್ ಕಂಪನಿಯ ಚಟುವಟಿಕೆಗಳ ವಿವಿಧ ಅಂಶಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಡಿಜಿಟಲೀಕರಣದ ಪ್ರಯತ್ನಗಳ ಕುರಿತು ಚರ್ಚೆ ನಡೆಸಿದ್ದಾರೆ.

ಭಾರತೀಯ ರಾಯಭಾರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ಭಾರತ ಕೈಗೊಂಡಿರುವ ಹಲವು ಡಿಜಿಟಲೀಕರಣದ ಇನಿಷಿಯೇಟಿವ್ ಬಗ್ಗೆ ಬಹಳ ಶ್ಲಾಘಿಸಿದ್ದಾರೆ. ಹಾಗೇ, ಗೂಗಲ್ ಭಾರತವನ್ನು ಸಕಾರಾತ್ಮಕ ಚೌಕಟ್ಟಿನಲ್ಲಿ ನೋಡುತ್ತಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾರತದೊಂದಿಗೆ ಗೂಗಲ್​ನ ಪಾಲುದಾರಿಕೆಯನ್ನು ಮುಂದುವರಿಸುವ ವಿವಿಧ ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಿಜಿಟಲ್ ಪಾವತಿಗಳು ಮತ್ತು ಮೂಲಸೌಕರ್ಯ ಡಿಜಿಟಲೈಸೇಶನ್ ಸೇರಿದಂತೆ ಗೂಗಲ್ ತೊಡಗಿಸಿಕೊಂಡಿರುವ ಹಲವು ವಿಭಾಗಗಳಲ್ಲಿ ಭಾರತದ ಡಿಜಿಟಲೀಕರಣದ ಪ್ರಯತ್ನಗಳನ್ನು ಕೂಡ ಚರ್ಚಿಸಿದ್ದಾರೆ.

TV9 Kannada


Leave a Reply

Your email address will not be published.