Big News: ಸೆಂಟ್ರಲ್ ವಿಸ್ತಾ ಯೋಜನೆ; ಪ್ರಧಾನಿ ಹೊಸ ಕಚೇರಿ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ಸಮಿತಿ ಗ್ರೀನ್ ಸಿಗ್ನಲ್ | Big News: Central Vista Delhi Panel Gives Green Nod To Enclave With New Prime Minister Office


Central Vista: ಉತ್ತರ- ದಕ್ಷಿಣ ಬ್ಲಾಕ್ ಗಳನ್ನು ಒಳಗೊಂಡ ಅಸ್ತಿತ್ವದಲ್ಲಿರುವ ಆಡಳಿತ ಕೇಂದ್ರವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸೆಂಟ್ರಲ್ ವಿಸ್ತಾ ಯೋಜನೆ ಇದು.

Big News: ಸೆಂಟ್ರಲ್ ವಿಸ್ತಾ ಯೋಜನೆ; ಪ್ರಧಾನಿ ಹೊಸ ಕಚೇರಿ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ಸಮಿತಿ ಗ್ರೀನ್ ಸಿಗ್ನಲ್

ಸೆಂಟ್ರಲ್ ವಿಸ್ತಾ

ನವದೆಹಲಿ: ಪ್ರಧಾನಮಂತ್ರಿಗಳ ನೂತನ ಕಚೇರಿ ಮತ್ತು ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ ಅನ್ನು ಒಳಗೊಂಡಿರುವ ‘ಸೆಂಟ್ರಲ್ ವಿಸ್ತಾ’ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರವು ಅನುಮತಿ ನೀಡಿದೆ. ದೆಹಲಿ ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿಯು ಕಳೆದ ವಾರ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಯೋಜನೆಗೆ ಹಸಿರು ನಿಶಾನೆ ತೋರುವಂತೆ ಶಿಫಾರಸು ಮಾಡಿತ್ತು.

ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ ಬುಧವಾರ ನಡೆದ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಿ ಅನುಮೋದನೆ ನೀಡಿದೆ. ಅರಣ್ಯ ಇಲಾಖೆಯು ಆಗಸ್ಟ್ 23ರಂದು ದೆಹಲಿ ಮರಗಳ ಸಂರಕ್ಷಣೆ ಕಾಯಿದೆ, 1994ರ ಅಡಿಯಲ್ಲಿ ಆ ಸ್ಥಳದಲ್ಲಿರುವ 807 ಮರಗಳ ಪೈಕಿ 487 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಬಳಕೆದಾರರ ಸಂಸ್ಥೆಯಾದ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಅನುಮತಿ ನೀಡಿತ್ತು. ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರವು ಈ ಯೋಜನೆಯಿಂದ ಆ ಸ್ಥಳದಲ್ಲಿನ ಶೇ. 60ರಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಿತ್ತು.

TV9 Kannada


Leave a Reply

Your email address will not be published.