ಬೆಂಗಳೂರು: ಹಿರಿಯ ನಟ ಶಿವರಾಂ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವ ಉಂಟಾಗಿದೆ. ಹೀಗಾಗಿ ಅವರಿರುವ ಪರಿಸ್ಥಿತಿಯಲ್ಲಿ ಅವರಿಗೆ ಆಪರೇಶನ್ ಮಾಡಲು ಸಾಧ್ಯವಾಗುವದಿಲ್ಲ ಎಂದು ಪ್ರಶಾಂತ್ ಆಸ್ಪತ್ರೆಯ ವೈದ್ಯರಾದ ಡಾ. ಮೋಹನ್ ನ್ಯೂಸ್ಫಸ್ಟ್ಗೆ ತಿಳಿಸಿದ್ದಾರೆ.
ಮೊದಲು ಸರ್ಜರಿ ಮಾಡಬೇಕು ಅಂತ ನಿರ್ಧರಿಸಲಾಗಿತ್ತು ಆದ್ರೆ ಅವರಿಗೆ ವಯಸ್ಸಾಗಿರೋದ್ರಿಂದ ಸರ್ಜರಿ ಮಾಡಲು ಸಾಧ್ಯವಾಗಿಲ್ಲ. ಅವರ ದೇಹದಲ್ಲಿನ ಎಲ್ಲ ಭಾಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಆದ್ರೆ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಸದ್ಯ ಐಸಿಯುನಲ್ಲಿ ಅವರಿಗೆ ಲೈಫ್ ಸಪೋರ್ಟ್ ನೀಡಲಾಗಿದ್ದು ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.
com/2021/12/02/veteran-actor-shivaram-admitted/” target=”_blank” rel=”noopener noreferrer”>Breaking: ಹಿರಿಯ ನಟ ಶಿವರಾಂ ತಲೆಗೆ ಬಲವಾದ ಪೆಟ್ಟು; ಐಸಿಯುಗೆ ದಾಖಲು