#BigBreaking ಹೂವಿನ ಮಾರುಕಟ್ಟೆಯಲ್ಲಿ ಬಾಂಬ್​ ಪತ್ತೆ


ನವದೆಹಲಿ: ಈಶಾನ್ಯ ದೆಹಲಿಯ ಘಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕಗಳು ಪತ್ತೆಯಾಗಿ ಸಾಕಷ್ಟು ಆತಂಕ ಸೃಷ್ಟಿಸಿದ್ದು, ಪೊಲೀಸರ ತಂಡ ಯಶಸ್ವಿಯಾಗಿ ಅದನ್ನು ನಿಷ್ಕ್ರೀಯಗೊಳಿಸಿದೆ.

ಮಾರುಕಟ್ಟೆಯಲ್ಲಿ ಈ ಸ್ಫೋಟಕಗಳನ್ನು ಚರ್ಮದ ಬ್ಯಾಗ್​ನಲ್ಲಿ ಇರಿಸಿ ಇಡಲಾಗಿತ್ತು ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಯುತ್ತಿದ್ದಂತೆ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಎನ್​ಎಸ್​ಜಿ ತಂಡ ಸ್ಫೋಟಕವಿದ್ದ ಬ್ಯಾಗ್​ನ್ನು ವಶಪಡಿಸಿಕೊಂಡು ಬಾಂಬ್​ನ್ನು ನಗರದ ಹೊರವಲಯದಲ್ಲಿ ನಿಷ್ಕ್ರೀಯಗೊಳಿಸಿದ್ದಾರೆ. ಇನ್ನು ಸ್ಥಳದಲ್ಲಿ ಬಾಂಬ್​ ಇಟ್ಟ ಆರೋಪಿಗಳಿಗಾಗಿ ಪೊಲೀರು ಶೋಧ ಮುಂದುವರೆಸಿದ್ದಾರೆ.

News First Live Kannada


Leave a Reply

Your email address will not be published. Required fields are marked *