ಬಿಗ್​ ಬಾಸ್​ ಮನೆ ದಿನ ಕಳದಂತೆ ಖಾಲಿ ಆಗ್ತಿದೆ. ಉಳಿದಿರುವುದು ಕೇವಲ ಕೇಲವೇ ವಾರಗಳು. ಮನೆಯವರ ಹಾರ್ಟ್​ ಬೀಟ್​ ಜಾಸ್ತಿಯಾಗ್ತಿದೆ. ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು, ಛಲ ಬಿಡದೇ ಹೋರಾಡುವ ಅಗತ್ಯ ಎದುರಾಗಿದೆ. ಈ ನಡುವೇ ಬಾಂಧವ್ಯಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ.

ಹೌದು, ಇಷ್ಟು ದಿನ ಅರವಿಂದ್​ ಮತ್ತು ದಿವ್ಯಾ ಉರುಡುಗ ಅವರ ಬಗ್ಗೆ ಪಾಸಿಟಿವ್​ ಒಪಿನಿಯನ್​ ಇಟ್ಟುಕೊಂಡಿದ್ದ ಮನೆಯಲ್ಲಿ ಈಗ ಅಪಸ್ವರ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಟಾಸ್ಕ್​​ಗಳಲ್ಲಿ ಆಗುತ್ತಿರುವ ತಾರತಮ್ಯ ಎಂಬುವುದು ಸ್ಪರ್ಧಿಗಳ ಆರೋಪ.

ನಿನ್ನೆಯ ಎಪಿಸೋಡ್​ನಲ್ಲಿ ಬಿಗ್‌ಬಾಸ್‌ ನೀಡಿದ್ದ ಏನಾಗಲಿ ಮುಂದೆ ಓಡು ನೀ ಟಾಸ್ಕ್​ನಲ್ಲಿ ಆಟಕ್ಕಿಂತ ಕಿರಿಕ್​ಗಳೇ ಜೋರಾಗಿದ್ದವು. ಟಾಸ್ಕ್​ ನಿಯಮದ ಪ್ರಕಾರ ಥರ್​ಮಕೋಲ್ ತುಂಬಿರುವ ಗೋಣಿಚಿಲವನ್ನು ಬೆನ್ನಗೆ ಕಟ್ಟಿಕೊಂಡು ಆಕ್ಟಿವಿಟಿ ಏರಿಯಾದಲ್ಲಿ ಓಡಬೇಕು. ಅವರವರ ಚೀಲವನ್ನು ಕಾಪಾಡಿಕೊಂಡು ಮುಂದಿನ ಸದಸ್ಯರ ಚೀಲವನ್ನು ಖಾಲಿ ಮಾಡಬೇಕಿತ್ತು.​

ಇತ್ತ ತಮ್ಮ ಚೀಲವನ್ನು ಕಾಪಾಡಿಕೊಳ್ಳುವ ಟೆನ್ಷನ್​ ಒಂದೇಡೆಯಾದ್ರೇ, ಬೇರೆ ಸದಸ್ಯನನ್ನು ಹೇಗಾದ್ರೂ ಮಾಡಿ ಸೋಲಿಸಲೆಬೇಕು ಎಂಬ ಹಠ ಇನ್ನೊಂದುಕಡೆ.

ಪ್ರಶಾಂತ್​ ಅವರು ವೈಷ್ಣವಿ ಅವರನ್ನು ಪುಟ್ಟಾ ಎಂದು ಮಾತ್ನಾಡಿಸುತ್ತಿದ್ದರು. ಆದ್ರೇ ಈ ಟಾಸ್ಕ್​ನಲ್ಲಿ ಆ ಬಾಂಡಿಂಗ್​ ಒಡೆದಿದ್ದು ಸುಳ್ಳಲ್ಲ. ವೈಷ್ಣವಿ ಅವರ ಗೋಣಿ ಚೀಲವನ್ನು ಖಾಲಿ ಮಾಡಲು ಹೋದ ಪ್ರಶಾಂತ್​, ಹಗ್ಗ ಎಳದ್ರು ಎಂದು ವೈಷ್ಣವಿ ಒಂದು ಕ್ಷಣ ಉಗ್ರ ಅವತಾರ ತಾಳಿದ್ರು. ಅಷ್ಟೇಯಲ್ಲ ಪ್ರಶಾಂತ್​ ಅವರ ಮೇಲೆ ಕೈ ಮಾಡಲು ಹೋಗ್ತಾರೆ. ನಂತರ ಪ್ರಶಾಂತ್ ಇನ್ಸಲ್ಟ್​ ಆಯ್ತು ಎಂದು ವೈಷ್ಣವಿ ಅವರಿಂದ ಡಿಸ್ಟನ್ಸ್​ ಮೆಂಟೆನ್​ ಮಾಡ್ತಾರೆ. ಇದು ಚಕ್ರವರ್ತಿ ಅವರನ್ನು ಕೆರಳಿಸುತ್ತೆ.

ಮೊದಲೇ ಶಮಂತ್​ ಚಕ್ರವರ್ತಿ ವಿರುದ್ಧ ಕಿಡಿಕಾರಿದ್ರು. ಇದನ್ನು ಸಹಿಸದೇ ಚಕ್ರವರ್ತಿ ಅವರು ಕ್ಯಾಪ್ಟನ್​ ದಿವ್ಯಾ ಅವರಿಗೆ ಕಂಪ್ಲೇಂಟ್​ ಮೇಲೆ ಕಂಪ್ಲೇಂಟ್​ ಮಾಡ್ತಿದ್ರು. ನಂತರ ಪ್ರಶಾಂತ್ ಅವರ ನಡುವಳಿಕೆ ವಿರುದ್ಧ ಬೇಸತ್ತು, ಇಂತಹ ಆಟಕ್ಕೆ ನನ್ನ ಧಿಕ್ಕಾರ ಎಂದು ಆಟವನ್ನ ಗಿವ್​ಅಪ್​ ಮಾಡಿದ್ರು.

ಇನ್ನೂ ಲ್ಯಾಗ್​ ಮಂಜು ಆಟದ ನಡುವೆ ಸುಸ್ತಾಗಿ ನಿಲ್ಲುತ್ತಾರೆ. ಇದಕ್ಕೆ ಕೋಪಗೊಂಡ ಅರವಿಂದ್​ ನೀವು ಮಡುತ್ತಿರುವುದು ಸರಿಯಲ್ಲ ಅಂತಾರೆ. ಅದಕ್ಕೆ ಮಂಜು, ಬೇಕಾದ್ರೇ ನನ್ನ ಚೀಲವನ್ನು ತೂತು ಮಾಡಿ ಅಂತಾರೆ. ಅಷ್ಟರಲ್ಲಿ ಎಲ್ಲರೂ ಮಂಜನ ಚೀಲವನ್ನು ತೂತು ಮಾಡಲು ಮುಗಿ ಬಿಳುತ್ತಾರೆ. ಆದ್ರೇ ಸುಮ್ಮನಿರದ ಮಂಜು, ಅರವಿಂದ್​ ಅವರ ಚಿಲಕ್ಕೆ ಕೈ ಹಾಕುತ್ತಾರೆ. ಇದಕ್ಕೆ ಅರವಿಂದ್​ ನೀನು ನಿಂತದ್ದು, ಅದಕ್ಕೆ ನಿನ್ನ ಚೀಲವನ್ನು ತುತು ಮಾಡ್ತೀದ್ದಿನಿ. ಆದ್ರೇ ನೀನು ನನ್ನ ಚೀಲವನ್ನು ಮುಟ್ಟಬೇಡ ಅಂತಾರೆ. ಇದಕ್ಕೆ ಮಂಜು, ನಾನು ಕೂಡಾ ಚೀಲನ್ನು ಹರಿಯಬಹುದು ಅಂತಾರೆ. ಇಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯುತ್ತದೆ.

ಅಸಲಿ ಗೆಲವು ಸೋಲಿನ ಲೆಕ್ಕಾಚಾರ ಇರೋದೇ ದಿವ್ಯಾ ಉರುಡುಗ ಹಾಗೂ ಅರವಿಂದ್​ ಅವರ ವರ್ತನೆ ಬಗ್ಗೆ ಎಂಬುವುದು ಮನೆಯ ಸದಸ್ಯರ ಅಭಿಪ್ರಾಯ. ದಿವ್ಯಾ ಅವರು ಆಟ ಮುಗಿಯುವವರೆಗೂ ಹೆಚ್ಚು ಕಡಿಮೆ ಅರವಿಂದ್​ ಅವರ ಮುಂದೆನೆ ಇರ್ತಾರೆ. ಆ ಸಮಯದಲ್ಲಿ ಅರವಿಂದ್​ ದಿವ್ಯಾ ಅವರ ಚೀಲವನ್ನು ಎಳದಂತೆ ಮಾಡಿ ಸುಮ್ಮನಾಗ್ತಿರ್ತಾರೆ ಎಂಬುವುದು ಶಮಂತ್​ ಅವರ ಪರೋಕ್ಷ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತಿತ್ತು. ಯಾರು ಕೊನೆಯಲ್ಲಿ ಯಾರಿಗೆ ಫೇವರ್​ ಮಾಡಿದ್ರು ಗೊತ್ತಾಗುತ್ತಿತ್ತು ಎಂದು ಟಾಸ್ಕ್​ ಮುಗಿದ ಬಳಿಕ ದಿವ್ಯಾ ಸುರೇಶ್​ ಬಳಿ ಶಮಂತ್​ ಸೂಕ್ಷ್ಮವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡೆಸುತ್ತಾರೆ.

ಇನ್ನೊಂದು ಇಂಟ್ರಸ್ಟಿಂಗ್​ ವಿಷಯ ಅಂದ್ರೇ ಟಾಸ್ಕ್​ಗೂ ಮೊದಲು ಪ್ರಶಾಂತ್​ ಅವರು ಚಕ್ರವರ್ತಿ ಅವರ ಮುಂದೆ ದಿವ್ಯಾ ಯು ಮತ್ತು ಅರವಿಂದ ಅವರ ಬಗ್ಗೆ ಬೇಸರ ವ್ಯಕ್ತಪಡೆಸುತ್ತಾರೆ. ದಿವ್ಯಾ ಉರುಡುಗ ಅವರನ್ನು ಬಿಟ್ಟರೇ ಅರಿವಿಂದ್​ ಕಣ್ಣಿಗೆ ಬೇರೆ ಯಾರು ಕಾಣಿಸಲ್ಲಾ. ಕುಂತರು ನಿಂತರು ದಿವ್ಯಾ ಜಪಾ ಮಾಡ್ತಿರ್ತಾನೆ. ಟಾಸ್ಕ್​ನಲ್ಲಿ ಬಿಟ್ಟರೇ ಮನೆಯಲ್ಲಿ ಇನ್ವಾಲ್​ಮೆಂಟ್​ ಇಲ್ಲ. ಏನ್​ ಮನರಂಜನೆ ನೀಡ್ತಾನೆ ಅರವಿಂದ್​. ದಿವ್ಯಾ ಅವನ ಶ್ಯಾಡೋ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಸಂಬಂಧಗಳ ಕೊಂಡಿಗಳು ಒಂದೊಂದಾಗಿ ಕಳಚುತ್ತಿದ್ದು, ಈ ವಾರ ಕಳೆಯುವುದರೊಳಗೆ ಇನ್ನೂ ಯಾರ್ ಯಾರಿಗೆ ವೈಮನಸ್ಸು ಮೂಡತ್ತದೆಯೋ, ವೈಯಕ್ತಿಕ ಆಟಗಳು ವೈಯಕ್ತಿಕ ಜಗಳಗಳಿಗೆ ದಾರಿ ಮಾಡಿ ಕೊಡತ್ತದೆಯೊ ಗೊತ್ತಿಲ್ಲ.

The post Bigg Boss.. ದಿವ್ಯಾ ಉರುಡುಗ, ಅರವಿಂದ್ ಅಡ್ಜಸ್ಟ್​ಮೆಂಟ್ ಆಟ ಆಡಿದ್ರಾ..? appeared first on News First Kannada.

Source: newsfirstlive.com

Source link