Bigg Boss OTT: ‘ಬಿಗ್ ಬಾಸ್​ ಒಟಿಟಿ’ಗೆ ವಾಸುಕಿ ವೈಭವ್ ಎಂಟ್ರಿ; ಮಾಜಿ ಸ್ಪರ್ಧಿ ಕಂಡು ಫ್ಯಾನ್ಸ್ ಖುಷ್ | Vasuki Vaibhav Enter Bigg Boss OTT With sudeep in New promo


2019ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ 7’ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ವಾಸುಕಿ. ಅವರು ಮನೆಯಲ್ಲಿದ್ದಷ್ಟು ದಿನ ಎಲ್ಲರನ್ನೂ ರಂಜಿಸಿದ್ದರು. ಸಾಕಷ್ಟು ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದರು.

Bigg Boss OTT: ‘ಬಿಗ್ ಬಾಸ್​ ಒಟಿಟಿ’ಗೆ ವಾಸುಕಿ ವೈಭವ್ ಎಂಟ್ರಿ; ಮಾಜಿ ಸ್ಪರ್ಧಿ ಕಂಡು ಫ್ಯಾನ್ಸ್ ಖುಷ್

ವಾಸುಕಿ-ಸುದೀಪ್

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಆಗಸ್ಟ್ 6ರಿಂದ ‘ಬಿಗ್ ಬಾಸ್’ ಒಟಿಟಿ ಸೀಸನ್ ಆರಂಭ ಆಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಗೆ ಯಾರೆಲ್ಲ ಸ್ಪರ್ಧಿಗಳಾಗಿ ಬರುತ್ತಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲು ದೊಡ್ಮನೆಗೆ ಸಂಗೀತ ನಿರ್ದೇಶಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ (Vasuki Vaibhav) ಎಂಟ್ರಿ ಕೊಟ್ಟಿದ್ದಾರೆ. ಈ ಪ್ರೋಮೋವನ್ನು ವೂಟ್​ ಆ್ಯಪ್​ನಲ್ಲಿ ಹಂಚಿಕೊಳ್ಳಲಾಗಿದೆ. ಮಾಜಿ ಸ್ಪರ್ಧಿಗೆ ಇಲ್ಲೇನು ಕೆಲಸ ಎಂದು ವೀಕ್ಷಕರು ತಲೆಕೆಡಿಸಿಕೊಂಡಿದ್ದಾರೆ.

2019ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ 7’ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ವಾಸುಕಿ. ಅವರು ಮನೆಯಲ್ಲಿದ್ದಷ್ಟು ದಿನ ಎಲ್ಲರನ್ನೂ ರಂಜಿಸಿದ್ದರು. ಸಾಕಷ್ಟು ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದರು. ಅವರು ದೊಡ್ಮನೆಯಲ್ಲಿ ಬರೆದ ‘ಮನಸ್ಸಿಂದ ಯಾರೂನು ಕೆಟ್ಟವರಲ್ಲ..’ ಹಾಡು ಸಾಕಷ್ಟು ಫೇಮಸ್ ಆಯಿತು. ಆ ಸೀಸನ್​ನಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ಬಿಗ್ ಬಾಸ್​ನಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈಗ ಅವರು ಮತ್ತೆ ಮನೆ ಒಳಗೆ ಬಂದಿದ್ದಾರೆ!

‘ಬಿಗ್ ಬಾಸ್’ ಮನೆಯನ್ನು ರಿವೀಲ್ ಮಾಡುವ ಉದ್ದೇಶದಿಂದ ವೂಟ್ ಆ್ಯಪ್​ನಲ್ಲಿ ಹೊಸ ವಿಡಿಯೋ ಹಂಚಿಕೊಳ್ಳಲಾಗಿದೆ. ಕಿಚ್ಚ ಸುದೀಪ್ ಹಾಗೂ ವಾಸುಕಿ ವೈಭವ್ ಅವರು ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ಮನೆಯ ಜಾಗ ಯಾವಾಗ ಯಾವ ರೀತಿಯಲ್ಲಿ ಬಳಕೆ ಆಗುತ್ತದೆ ಎಂಬುದನ್ನು ವಾಸುಕಿ ವೈಭವ್ ಅವರು ವಿವರಿಸಿದ್ದಾರೆ. ಈ ಮೂಲಕ ಸುದೀಪ್​ಗೆ ಅವರು ಸಾತ್ ನೀಡಿದ್ದಾರೆ. ಈ ಬಾರಿ ಮನೆ ಹೇಗಿದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಇಬ್ಬರೂ ‘ಬಿಗ್ ಬಾಸ್​’ ಮನೆ ಒಳಗೆ ಬಂದಿದ್ದರು. ವಾಸುಕಿ ಅವರ ಕೆಲಸ ಇಲ್ಲಿ ಏನು ಎಂಬುದು ಅನೇಕರ ಕುತೂಹಲ.

TV9 Kannada


Leave a Reply

Your email address will not be published. Required fields are marked *