ಈ ವಾರ ಬಿಗ್​ ಮನೆಯ ಸದಸ್ಯರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಕ್ಯಾಪ್ಟನ್​ಶಿಪ್​ ಆಯ್ಕೆ ಪ್ರಕ್ರಿಯೆಯಲ್ಲಿ ಗೆಲ್ಲಲೇಬೇಕಾದ ಅನಿರ್ವಾತೆ ಇದೆ. ನಿನ್ನೆಯ ಎಪಿಸೋಡ್​ನಲ್ಲಿ ಗಳಿಸಿ ಉಳಿಸಿ ಟಾಸ್ಕ್​ನಲ್ಲಿ ಬಿಗ್​ ಮನೆಯಲ್ಲಿ ಒಂದಿಷ್ಟು ಫನ್​, ಒಂದಿಷ್ಟು ಮುನಿಸು ನೋಡಲು ಸಿಕ್ತು.

ಜಲಚಕ್ರ ಟಾಸ್ಕ್​ ಅಂತೂ ನೋಡಲು ಫನ್ನಿಯಾಗಿಕಂಡರೂ, ದಿವ್ಯಾ ಉರುಡುಗ ಅವರ ಕ್ಯಾಪ್ಟನ್​ಶಿಪ್​ ಬಗ್ಗೆನೇ ಪ್ರಶ್ನೆ ಮೂಡುವಂತೆ ಮಾಡಿದ್ದು ಸುಳ್ಳಲ್ಲ. ಚಕ್ರವರ್ತಿ ಅವರ ಅಚಾತುರ್ಯನೊ ಅಥವಾ ಅರವಿಂದ ಅವರ ಎಫರ್ಟ್​ ಗೊತ್ತಿಲ್ಲ. ಚಕ್ರವರ್ತಿ ಅವರು ದಿವ್ಯಾ ಉರುಡುಗ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು.

ಮನೆಯ ಸದಸ್ಯರ ಕಣ್ಣಿಗೆ ಬಟ್ಟೆ ಕಟ್ಟಿ ಚೇರ್​ ಮೇಲೆ ರೌಂಡ್​ ಆಗಿ ಕುಳ್ಳಿರಿಸಲಾಗಿತ್ತು. ನೀರು ತುಂಬಿದ ಬಲೂನ್​ನ್ನು ಕ್ಯಾಪ್ಟನ್​ ದಿವ್ಯಾ ಯು ಒಂದು ಕಡೆಯಿಂದ ತಿರುಗಿಸಿ ಬಿಡುತ್ತಿದ್ದರು. ಬಲೂನ್​ನಿಂದ ಸದಸ್ಯರು ತಪ್ಪಿಸಿಕೊಳ್ಳಬೇಕಾಗಿತ್ತು. ಒಂದೇ ಕಡೆ ವಾಲಿ ಕೂತರೇ ಅದು ಫೌಲ್​ ಆಗುತಿತ್ತು, ಮೂರು ಸಾರಿ ಫೌಲ್​ ಮಾಡಿದ್ರೇ ಅಥವಾ ಬಲೂನ್​ ಒಡೆದರೇ ಔಟ್​ ಆಗುವುದು ಈ ಟಾಸ್ಕ್​ ನಿಯಮ. ಹಾಗೇ ಟಾಸ್ಕ್​ನ ಕೊನೆಯಲ್ಲಿ ಚಂದ್ರಚೂಡ್​ ಹಾಗೂ ಅರವಿಂದ್​ ಉಳಿದಿದ್ದರು.

ಚಂದ್ರಚೂಡ್ ಅವರು ಒಂದೇ ಕಡೆ ವಾಲಿದ್ದರಿಂದ ದಿವ್ಯಾ ಫೌಲ್​ ಎನ್ನುತ್ತಾರೆ ಅಷ್ಟರಲ್ಲಿ ಬಲೂನ್​ ಚಂದ್ರಚೂಡ್ ಅವರಿಗೆ ತಾಗಿ ಒಡೆಯುತ್ತದೆ. ಹಾಗಾಗಿ ಅರವಿಂದ್ ವಿನ್​ ಆಗಿ 10,000 ಹಣ ಪಡೆಯುತ್ತಾರೆ. ಇದು ಚಂದ್ರಚೂಡ್ ಅವರ ಬೇಸರಕ್ಕೆ ಕಾರಣವಾಗುತ್ತದೆ.

ಚಂದ್ರಚೂಡ್: ದಿವ್ಯಾ ನೀನು ಒಂದು ಸೆಕೆಂಡ್ ಗ್ಯಾಪ್​ ಕೊಟ್ಟಿದ್ದರು ನಾನು ತಿದ್ದಿಕೊಳ್ಳುತ್ತಿದ್ದೆ.

ದಿವ್ಯಾ ಯು: ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಯಾರಿಗೂ ಫೇವರ್​ ಮಾಡಿಲ್ಲ. ನನ್ನ ಕೆಲಸವನ್ನು ನಾನು ನಿಯತ್ತಾಗಿ ಮಾಡಿದ್ದೆನೆ.

ಚಂದ್ರಚೂಡ್: ನನ್ನ ಫೀಲಿಂಗ್​ ನಾನು ಹೇಳ್ತಿದಿನಿ.

ದಿವ್ಯಾ ಅವರು ಅರವಿಂದಗೆ ಫೇವರ್​ ಮಾಡಿದ್ರಾ ಎಂಬುವುದು ಅವರ ವಿಚಾರ. ಇದನ್ನು ಪ್ರಶಾಂತ್​ ಅವರ ಮುಂದೆ ಹೇಳಿಕೊಳ್ಳುತ್ತಾರೆ.

ಪ್ರಶಾಂತ್​: ಬಾಲೂನ್​ ಅರವಿಂದ ಹತ್ತಿರ ಹೆಚ್ಚಾಗಿ ಹೋಗಲೇ ಇಲ್ಲ. ಫೌಲ್​ ಒಂದು ಸೂಪರ್​ ಸ್ಟಾರ್ಟಜಿ. ನೀನು ವಾದ ಮಾಡಬೇಕಿತ್ತು.

ಚಂದ್ರಚೂಡ್​: ಅಲ್ಲಿ ಏನೂ ಅನಿಸಿತ್ತೂ ಅಷ್ಟು ಹೇಳಿದೆ. ಬಿಗ್​ ಬಾಸ್​ಯೇ ಔಟ್​ ಅಂತಾ ಅನೌನ್ಸ್​ ಮಾಡಿದ್ರಲ್ಲಾ.

ಪ್ರಶಾಂತ್​: ಕ್ಯಾಪ್ಟನ್​ ಹೇಳಿದ ಮೇಲೆ ಬಿಗ್​​ ಬಾಸ್​ ಕೂಡಾ ಏನು ಮಾಡುತ್ತಾರೆ. ನಿನ್ನೆ ಕೂಡ ಹಂಗೆ ಆಯಿತು. ಶಮಂತ್​​ಗೆ ಕಣ್ಮನಿ ಕುರಿತು ಹಾಡು ಬರೆಯಲು ಐಡಿಯಾ ನಾನೇ ಕೊಟ್ಟೆ. ಆದ್ರೇ ಅವನು ದಿವ್ಯಾ ಹಾಗೂ ಅರವಿಂದ ಜೊತೆ ಹಾಡು ಹೇಳಿದ. ಆಟಾಆಡ್ತಾ ಇದಾನೆ.
ಇನ್ನೂ ಇಲ್ಲಿ ಶುಭಾ ಅವರನ್ನು ದಿವ್ಯಾ ಅವರು ಎಲಿಮಿನೇಷನ್​​ ಪ್ರಕ್ರಿಯೇಯಲ್ಲಿ ಉಳಿಸಿರುವ ಕುರಿತು ಪ್ರಶಾಂತ್​ ಮಾತನಾಡಿ, ಅವಳು ವೀಕೇಸ್ಟ್​ ಕಂಟೆಸ್ಟಂಟ್​. ಈಗ ಉಳಿಸಿಕೊಂಡರೇ ಸುಲಭವಾಗಿ ಮುಂದೆ ಹೊಡೆದು ಹಾಕ್ಬಹುದು ಎಂದು ಉಳಿಸಿದ್ದಾರೆ ಎಂದರು.

 

The post #BiggBoss ಅರವಿಂದ್​ಗೆ ಸಹಾಯ ಮಾಡಿದ್ರಾ ದಿವ್ಯಾ? ಇದೇನಿದು ಕೆಮಿಸ್ಟ್ರಿ? appeared first on News First Kannada.

Source: newsfirstlive.com

Source link