ಓರ್ವ ವ್ಯಕ್ತಿ ಎಷ್ಟೇ ಓದಿರಬಹುದು, ಎಷ್ಟೇ ಅನುಭವ ಇರಬಹುದು. ಆದ್ರೆ, ಅವನ ನಡವಳಿಕೆಗಳಿಂದ ಮಾತ್ರ ಅವನ ವ್ಯಕ್ತಿತ್ವ ಗೊತ್ತಾಗುತ್ತೆ. ಸ್ವತಃ ಕಿಚ್ಚ ಸುದೀಪ್‌ ಚಕ್ರವರ್ತಿ ಚಂದ್ರಚೂಡ್‌ರ ಜ್ಞಾನಕ್ಕೆ ಶರಣಾಗಿದ್ದರು. ಆದ್ರೆ, ನಿನ್ನೆ ಅವರು ತೋರಿದ ವರ್ತನೆ ಇದೆಯಲ್ಲಾ! ನಿಜಕ್ಕೂ ಆಕ್ಷೇಪಾರ್ಹ ಅನ್ನೋದು ವೀಕ್ಷಕರ ಅಭಿಪ್ರಾಯ.

ಈ ಹಿಂದೆ ಪ್ರಶಾಂತ್ ಸಂಬರಗಿ ಜೊತೆ ಚಕ್ರವರ್ತಿ ಚಂದ್ರಚೂಡ್‌ ತೋರಿದ ವರ್ತನೆ, ಬಳಸಿದ ಭಾಷೆಗೆ ಎಲ್ಲರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್‌ ಕೂಡ ನಿಮ್ಮಿಂದ ಇದನ್ನ ಎಕ್ಸ್‌ಪೆಕ್ಟ್ ಮಾಡಿರಲಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ, ಚಕ್ರವರ್ತಿ ಅವರ ವರ್ತನೆ ಮಾತ್ರ ಬದಲಾಗಿಲ್ಲ. ಅದಕ್ಕೆ ನಿನ್ನೆಯ ಎಪಿಸೋಡ್‌ನಲ್ಲಿ ಅವರ ವರ್ತನೆಯ ಬೆಸ್ಟ್ ಎಕ್ಸಾಂಪಲ್‌. ಬಿಗ್ಬಾಸ್‌ ಮನೆಯಲ್ಲಿ ಪ್ರತಿ ವಾರವೂ ಒಬ್ಬೊಬ್ಬರು ನಾಮಿನೇಟ್ ಆಗ್ತಾರೆ. ಆದ್ರೆ, ನಾಮಿನೇಟ್ ಆದಾಗ ಕೋಪ, ಮನಸ್ತಾಪವನ್ನೆಲ್ಲಾ ಮರೆತು ಅವ್ರಿಗೆ ಬೀಳ್ಕೊಡುಗೆ ಕೊಡ್ತಾರೆ. ಆದ್ರೆ, ಈ ರೀತಿ ಯಾವತ್ತೂ ಆಗಿರಲಿಲ್ಲ.

ಪ್ರಿಯಾಂಕ ಮನೆಯಿಂದ ಎಲಿಮಿನೇಟ್​ ಆದ್ರು ಅಂತಾ ಕೆಲವು ಮಂದಿ ಬೇಸರವಾದ್ರು. ದಿವ್ಯಾ ಸುರೇಶ್​ ಬಿಕ್ಕಿ ಬಿಕ್ಕಿ ಅತ್ತರು. ಆದ್ರೆ, ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬೈ ಅಂತಾನೂ ಹೇಳ್ಲಿಲ್ಲ. ಸೆಲ್ಫಿ ಕ್ಲಿಕ್ ಮಾಡೋವಾಗ್ಲೂ ಬರಲಿಲ್ಲ. ಸಂಪೂರ್ಣ ಅವರು ಇದರಿಂದ ದೂರ ಉಳಿದರು. ಇದು ಅವರಿಷ್ಟ ಬಿಡಿ. ಆದ್ರೆ, ಆ ಮೇಲೆ ಚಕ್ರವರ್ತಿ ನಡೆದುಕೊಂಡದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಎಲಿಮನೇಟ್ ಆದ ಪ್ರಿಯಾಂಕಾ ಚಂದ್ರಚೂಡ್‌ನ ನಾಮಿನೇಟ್ ಮಾಡ್ತಿದ್ದಂತೆ ಅವರು ಅಶ್ಲೀಲ ಸಿಂಬಲ್‌ ತೋರಿಸಿದರು.

ಕೇವಲ ಲೀವಿಂಗ್ ಏರಿಯಾದಲ್ಲಿ ಮಾತ್ರವಲ್ಲ, ಬಾತ್‌ರೂಮ್‌ಗೆ ಹೋದಾಗಲೂ ಅವ್ರು ಮಿರರ್‌ಗೆ ಅದೇ ಅಶ್ಲೀಲ ಸಿಂಬಲ್ ತೋರಿಸಿದ್ದಾರೆ. ಹೀಗಾಗಿ ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದೇನೇ ಕೋಪವಿದ್ದರೂ ಈ ರೀತಿಯ ವರ್ತನೆ ಸರಿಯಲ್ಲ ಅಂತಾ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತು ಮಾತಿಗೂ ನಾನು ಹೆಣ್ಣಿಗೆ ಗೌರವ ಕೊಡುತ್ತೇನೆ ಎಂದು ಹೇಳುವ ಚಕ್ರವರ್ತಿ, ಒಂದು ಹೆಣ್ಣಿಗೆ ದೊಡ್ಡ ವೇದಿಕೆಯಲ್ಲಿ ಅಶ್ಲೀಲ ಸಿಂಬಲ್ ತೋರಿಸೋದು ಎಷ್ಟು ಸರಿ ಅಂತಾ ಪ್ರಶ್ನಿಸಿದ್ದಾರೆ. ಜೊತೆಗೆ ಇದೇನಾ ಹೆಣ್ಣಿಗೆ ಕೊಡೋ ಗೌರವ ಅಂತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಾರ ನಾಮಿನೇಟ್ ಆಗಿರೋ ಚಂದ್ರಚೂಡ್‌ಗೆ ಈ ವರ್ತನೆ ಮುಳುವಾಗೋ ಸಾಧ್ಯತೆ ದಟ್ಟವಾಗಿದೆ.

The post #BiggBoss ಚಂದ್ರಚೂಡ್‌ ಅವರೇ ಇದೇನಾ ಹೆಣ್ಣಿಗೆ ಕೊಡೋ ಗೌರವ? appeared first on News First Kannada.

Source: newsfirstlive.com

Source link