#BiggBoss ಸೆಕೆಂಡ್ ಇನ್ನಿಂಗ್ಸ್‌ ಸಂಬರಗಿ, ಚಂದ್ರಚೂಡ್‌ಗೆ ಈಸಿ ಅಲ್ಲವೇ ಅಲ್ಲ

#BiggBoss ಸೆಕೆಂಡ್ ಇನ್ನಿಂಗ್ಸ್‌ ಸಂಬರಗಿ, ಚಂದ್ರಚೂಡ್‌ಗೆ ಈಸಿ ಅಲ್ಲವೇ ಅಲ್ಲ

ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಂದ್ರಚೂಡ್ ಟಾರ್ಗೆಟ್ ಆಗ್ತಿದ್ರು. ಸೆಕೆಂಡ್‌ ಇನ್ನಿಂಗ್ಸ್‌ನಲ್ಲೂ ಅವರೇ ಗುರಿಯಾಗಿದ್ದಾರೆ. ಆಗ್ತಾರೆ ಅಂತಾ ಗೊತ್ತಿತ್ತು. ಆದ್ರೆ, ಈ ಇನ್ನಿಂಗ್ಸ್ ಪೂರ ಇವ್ರಿಗೆ ಟಫ್ ಆಗೋ ಚಾನ್ಸಸ್ ಪಕ್ಕಾ ಇದೆ. ಇವ್ರಿಗೆ ಸೂಪರ್ ಓವರ್‌ ಅಂಡ್ ಫ್ರೀ ಹಿಟ್ ಸಿಗೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಬಹುತೇಕ ಸದಸ್ಯರು ಇವ್ರು ಮನೆ ಹೊರಗಡೆ ಆಡಿರೋ ಮಾತಿಗೆ ಧಗಧಗ ಅಂತಾ ಉರಿಯುತ್ತಿದ್ದಾರೆ. ಅದೇ ಕಾರಣಕ್ಕೆನೇ ಇವರಿಬ್ಬರಿಗೂ ಐದು ವೋಟ್‌ಗಳು ಬಿದ್ದಿವೆ. ಅಂದ್ರೆ, ಐವರು ಇವರನ್ನ ನಾಮಿನೇಟ್ ಮಾಡಿದ್ದಾರೆ.

ಇನ್ನೊಂದ್‌ ಇಂಟರೆಸ್ಟಿಂಗ್ ಅಂದ್ರೆ… ಅರವಿಂದ್ ವರ್ಸಸ್‌ ಲ್ಯಾಗ್ ಮಂಜು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಅರವಿಂದ್ ಹಾಗೂ ಲ್ಯಾಗ್ ಮಂಜು ನಡುವೆ ದೊಡ್ಡ ಮಾತುಕತೆಯೇ ನಡೆಯಿತು. ಅರವಿಂದ್‌ ಲ್ಯಾಗ್ ಮಂಜುನಾ ನಾಮಿನೇಟ್ ಮಾಡಿದರು. ಮೊದಲ ಕಾರಣ ಕೊಟ್ಟಿದ್ದು, ಟಫ್ ಕಾಂಪಿಟೇಟರ್ ಅಂತಾ. ಇನ್ನೊಂದು, ಅರವಿಂದ್ ಬಗ್ಗೆ ಮಂಜು ಹೇಳಿದ ಮಾತು. ಹೌದು, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅರವಿಂದ್‌ಗೆ ಹುಡುಗಿಯರೇ ಇರ್ತಿದ್ರು. ಹಾಗಾಗಿ ಅವರು ಎರಡು ಬಾರಿ ಕ್ಯಾಪ್ಟನ್ ಆಗಿದ್ದರು ಅನ್ನೋ ಮಂಜು ಮಾತನ್ನ ಅರವಿಂದ್ ತುಂಬಾ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣಿಸ್ತಿದೆ. ನೀನು ಫೈನಲ್‌ ರೌಂಡ್‌ಗೆ ಬಂದಿಲ್ಲ ಅಂದ್ರೆ ಅದು ನಿಮ್ಮ ಅಸಾಮರ್ಥ್ಯ. ನನ್ನ ಸಮಸ್ಯೆಯಲ್ಲ. ನಾನು ನಿನ್ನನ್ನ ಎಷ್ಟು ಎತ್ತರದಲ್ಲಿ ಇಟ್ಟಿದ್ದಾನೋ ನೀನು ಅಷ್ಟೇ ಎತ್ತರದಲ್ಲಿ ಇಡಬೇಕು ಎಂದು ಅರವಿಂದ್‌ ನೇರವಾಗಿಯೇ ಲ್ಯಾಗ್ ಮಂಜುಗೆ ಹೇಳಿದರು. ಮಂಜು ಈ ವೇಳೆ ಸ್ವಲ್ಪ ಕಸಿವಿಸಿಯಾಗಿದ್ದು ನಿಜ. ತಪ್ಪಾಗಿದೆ ಸರಿಪಡಿಸಿ ಕೊಳ್ಳಬಹುದು ಅಂತಾ ಹೇಳೋದನ್ನ ಅರವಿಂದ್ ಮರೆಯಲಿಲ್ಲ.

ಇನ್ನೊಂದ್‌ ಇಂಪಾರ್ಟ್‌ಟೆಂಟ್ ವಿಚಾರ ಏನಂದ್ರೆ, ಲ್ಯಾಗ್ ಮಂಜು ನಾಲ್ಕು ವೋಟುಗಳು ಬಿದ್ದವು. ಟಫ್ ಕಾಂಪಿಟೇಟರ್ ಅನ್ನೋ ಕಾರಣಕ್ಕೆ. ಹೀಗಾಗಿ ಸೆಕಂಡ್ ಇನ್ನಿಂಗ್ಸ್‌ನಲ್ಲಿ ಮಂಜು ಕೂಡ ಟಾರ್ಗೆಟ್ ಆಗೋ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ದಿವ್ಯಾ ಉರುಡುಗ, ಅರವಿಂದ್‌,ವೈಷ್ಣವಿ ಹಾಗೂ ಶಮಂತ್‌ ಲ್ಯಾಗ್ ಮಂಜುನಾ ನಾಮಿನೇಟ್ ಮಾಡಿದರು. ಆದ್ರೆ, ಯಾರು ಕೂಡ ಅರವಿಂದ್‌ನ ನಾಮಿನೇಟ್ ಮಾಡಿಲ್ಲ. ಈ ವಾರ ಪ್ರಶಾಂತ್ ಸಂಬರಗಿ, ಚಂದ್ರಚೂಡ್‌, ಲ್ಯಾಗ್ ಮಂಜು, ರಘು, ನಿಧಿ ಸುಬ್ಬಯ್ಯ ಮತ್ತು ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ.

The post #BiggBoss ಸೆಕೆಂಡ್ ಇನ್ನಿಂಗ್ಸ್‌ ಸಂಬರಗಿ, ಚಂದ್ರಚೂಡ್‌ಗೆ ಈಸಿ ಅಲ್ಲವೇ ಅಲ್ಲ appeared first on News First Kannada.

Source: newsfirstlive.com

Source link