ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಗೆ ರೂಪಾಂತರಿ ವೈರಸ್ ಇರೋ ವಿಚಾರಕ್ಕೆ ಸಂಬಂಧಿಸಿ ಇನ್ನು ಅಧಿಕೃತವಾಗಿ ಹೇಳೋಕೆ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ. ಡಾ. ಕೆ. ಸುಧಾಕರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ 9 ತಿಂಗಳಿನಿಂದ ಡೆಲ್ಟಾ ವೈರಸ್ ಇದೆ. ಆದ್ರೆ ಸದ್ಯ ಅವರಿಗೆ ಕಾಣಿಸಿಕೊಂಡಿರುವುದು ಡೆಲ್ಟಾ ಅಲ್ಲ. ಒಮಿಕ್ರಾನ್ ಇರಬಹುದು ಎಂಬುದಾಗಿ ಅನುಮಾನ ಇದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ಅವರ ರಿಪೋರ್ಟ್ನ್ನ ICMR ಜೊತೆಗೆ ಚರ್ಚೆ ಮಾಡುತ್ತೇವೆ ಎಂದರು.
ತಾಂತ್ರಿಕ ಸಲಹಾ ಸಮಿತಿ ಜೊತೆ ನಾಳೆ ಸಭೆ ನಡೆಸಲಿದ್ದೇನೆ. ಅಲ್ಲಿ ಅವರ ಸಲಹೆ ಪಡೆದು ಹೊಸ ತಳಿ ಹೇಗೆ ಕೆಲಸ ಮಾಡುತ್ತೆ ಅಂತ ವರದಿ ಪಡೆಯಲು ಸೂಚಿಸುತ್ತೇನೆ. ಸದ್ಯದ ಮಾಹಿತಿ ಪ್ರಕಾರ 12 ದೇಶಗಳಲ್ಲಿ ಈ ತಳಿ ಕಂಡು ಬಂದಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಬಹಳ ಎಚ್ಚರಿಕೆಯನ್ನ ವಹಿಸಿದ್ದೇವೆ. ಸೌಥ್ ಆಫ್ರಿಕಾದಿಂದ ಈ ಹಿಂದೆ ಬಂದವರನ್ನ ತಪಾಸಣೆ ಮಾಡುತ್ತಿದ್ದೇವೆ ಮತ್ತು ದಕ್ಷಿಣ ಆಫ್ರಿಕಾದ ವೈದರ ಜೊತೆ ಮಾತನಾಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:BREAKING ಲಾಕ್ಡೌನ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ -ಡಾ.ಸುಧಾಕರ್ ಸ್ಪಷ್ಟನೆ