Bihar Cabinet: ಬಿಹಾರದಲ್ಲಿ ಇಂದು ಸಂಪುಟ ವಿಸ್ತರಣೆ; ಆರ್​​ಜೆಡಿಗೆ ಸಿಂಹಪಾಲು, ಪ್ರಮುಖ ಖಾತೆಗಳು ನಿತೀಶ್ ಕುಮಾರ್ ತೆಕ್ಕೆಗೆ | Bihar Cabinet: Nitish Kumar cabinet expansion today 16 ministers from RJD 11 from JDU Kannada News


ನಿತೀಶ್ ಕುಮಾರ್ ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದರು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಆ. 10ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

Bihar Cabinet: ಬಿಹಾರದಲ್ಲಿ ಇಂದು ಸಂಪುಟ ವಿಸ್ತರಣೆ; ಆರ್​​ಜೆಡಿಗೆ ಸಿಂಹಪಾಲು, ಪ್ರಮುಖ ಖಾತೆಗಳು ನಿತೀಶ್ ಕುಮಾರ್ ತೆಕ್ಕೆಗೆ

ನಿತೀಶ್ ಕುಮಾರ್- ತೇಜಸ್ವಿ ಯಾದವ್

ಪಾಟ್ನಾ: ಬಿಹಾರದಲ್ಲಿ ಇಂದು ಸಚಿವ ಸಂಪುಟ (Bihar Cabinet Expansion) ವಿಸ್ತರಣೆಯಾಗಲಿದೆ. ಸದ್ಯಕ್ಕೆ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashvi Yadav) ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಇಂದು ತಮ್ಮ ದ್ವಿಸದಸ್ಯ ಸಚಿವ ಸಂಪುಟವನ್ನು ವಿಸ್ತರಿಸಲಿದ್ದು, ತಮ್ಮ ಮೈತ್ರಿ ಪಕ್ಷವಾದ ಆರ್‌ಜೆಡಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ. ಇಂದು ಒಟ್ಟು 31 ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಆರ್‌ಜೆಡಿ, ಕಾಂಗ್ರೆಸ್ ಮತ್ತು ಜಿತನ್ ರಾಮ್ ಮಾಂಝಿ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಸೇರಿದಂತೆ ಮಹಾಘಟಬಂಧನ್ (ಮಹಾಮೈತ್ರಿಕೂಟ) ಭಾಗವಾಗಿರುವ ವಿವಿಧ ಪಕ್ಷಗಳಿಂದ ಒಟ್ಟು 31 ಸಚಿವರು ಇಂದು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಪಾಟ್ನಾದ ರಾಜಭವನದಲ್ಲಿ ಇಂದು ಬೆಳಗ್ಗೆ 11.30ರ ಸುಮಾರಿಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಇಂದು ಸಚಿವ ಸಂಪುಟಕ್ಕೆ ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ಸಂಜಯ್ ಝಾ, ಮದನ್ ಸಾಹ್ನಿ, ಜಯಂತ್ ರಾಜ್, ಶೀಲಾ ಮಂಡಲ್, ಬಿಜೇಂದ್ರ ಯಾದವ್, ಶ್ರವಣ್ ಕುಮಾರ್, ಸುನಿಲ್ ಕುಮಾರ್ ಮತ್ತು ಜಮಾ ಖಾನ್ ಸೇರಿದಂತೆ ಜೆಡಿಯು ಪಕ್ಷದ ಎಲ್ಲಾ ಸಚಿವರನ್ನು ನಿತೀಶ್ ಕುಮಾರ್ ಸಂಪುಟದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಸುರೇಂದ್ರ ಯಾದವ್, ಲಲಿತ್ ಯಾದವ್, ಕುಮಾರ್ ಸರ್ವಜೀತ್, ಸುರೇಂದ್ರ ರಾಮ್, ಶಹನವಾಜ್ ಆಲಂ, ಸಮೀರ್ ಮಹಾಸೇತ್, ಭಾರತ್ ಮಂಡಲ್, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.

TV9 Kannada


Leave a Reply

Your email address will not be published.