
ಸಾಂಕೇತಿಕ ಚಿತ್ರ
ಗದಗದ ಬಾದಾಮಿ ರಸ್ತೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಬೆಟಗೇರಿ ಠಾಣೆ ಕಾನ್ಸ್ಟೇಬಲ್ ಅಶೋಕ್ ದಾನಿ ಮೇಲೆ ಹಲ್ಲೆ ನಡೆದಿದೆ.
ಗದಗ: ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿದವರಿಗೆ ಬುದ್ಧಿ ಹೇಳಿದ್ದಕ್ಕೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗದಗದ ಬಾದಾಮಿ ರಸ್ತೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಬೆಟಗೇರಿ ಠಾಣೆ ಕಾನ್ಸ್ಟೇಬಲ್ ಅಶೋಕ್ ದಾನಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೈದಿದ್ದ ಮಾರುತಿ ಮುತಗಾರ (65) ಮತ್ತು ಪ್ರಭಾಕರ್ ಶೇಷಪ್ಪನವರ್ (24) ಪೊಲೀಸರು ಬಂಧಿಸಿದ್ದು, ಪರಾರಿಯಾದ ಕಿಶೋರ್ ಕುಮಾರ್ ಕದಂ (22) ಎಂಬುವವನಿಗಾಗಿ ಹುಡುಕಾಟ ನಡೆಸಿದ್ದಾರೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಾಮಣಗಿ ಬಳಿ ಕಾರು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಪಲ್ಟಿಯಾಗಿ ತುಳಸಿದಾಸ್(32) ಎಂಬುವವರು ಸ್ಥಳದಲ್ಲೇ ಕೊನೆಯಿಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಮೃತರ ಪತ್ನಿ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಂಡೇಲಿಯಿಂದ ಜೋಯಿಡಾ ತಾಲೂಕಿನ ಕಡೆ ಬರುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ. ತುಳಸಿದಾಸ್ ತಮ್ಮ ಪತ್ನಿ ಸುಲೋಚನ ಅವರನ್ನ ತವರು ಮನೆಯಿಂದ ವಾಪಾಸ್ ಕರೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.