Bima Sugam: ನಿಮ್ಮ ವಾಹನ, ಆರೋಗ್ಯ, ಜೀವ ವಿಮಾ ಪಾಲಿಸಿಗಳನ್ನು ರಕ್ಷಿಸುವುದು ಮತ್ತು ವೀಕ್ಷಿಸುವುದು ಇನ್ನಷ್ಟು ಸುಲಭ | IRDAI approves Bima Sugam insurance exchange platform benefits of Bima Sugam


ಬಿಮಾ ಸುಗಮ್ ಹೆಸರಿನ ವಿಮಾ ವಿನಿಮಯ ವೇದಿಕೆಗೆ ಐಆರ್‌ಡಿಎಐ ಅನುಮೋದನೆಯನ್ನು ನೀಡಿದೆ. ಇದರ ಅಡಿಯಲ್ಲಿ ಅನೇಕ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಜನರಿಗೆ ಪಾಲಿಸಿ ಖರೀದಿಯಿಂದ ಕ್ಲೈಮ್ ಸೆಟಲ್‌ಮೆಂಟ್‌ಗೆ ಅನುಕೂಲವನ್ನು ಒದಗಿಸುತ್ತದೆ.

Bima Sugam: ನಿಮ್ಮ ವಾಹನ, ಆರೋಗ್ಯ, ಜೀವ ವಿಮಾ ಪಾಲಿಸಿಗಳನ್ನು ರಕ್ಷಿಸುವುದು ಮತ್ತು ವೀಕ್ಷಿಸುವುದು ಇನ್ನಷ್ಟು ಸುಲಭ

ಬಿಮಾ ಸುಗಮ್ ಹೆಸರಿನ ವಿಮಾ ವಿನಿಮಯ ವೇದಿಕೆಗೆ ಐಆರ್‌ಡಿಎಐ ಅನುಮೋದನೆ

ದೇಶದ ಎಲ್ಲಾ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವಿಮೆಯನ್ನು ಒದಗಿಸಲು ಪ್ರಯತ್ನಿಸುತ್ತಿರುವ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ‘ಬಿಮಾ ಸುಗಮ್’ ಹೆಸರಿನ ವಿಮಾ ವಿನಿಮಯ ವೇದಿಕೆ (Bima Sugam Insurance Exchange Platform)ಗೆ ತನ್ನ ಅನುಮೋದನೆಯನ್ನು ನೀಡಿದೆ. ಬಿಮಾ ಸುಗಮ್ ವಿನಿಮಯವು ಜನರಿಗೆ ಪಾಲಿಸಿ ಖರೀದಿಯಿಂದ ಕ್ಲೈಮ್ ಸೆಟಲ್‌ಮೆಂಟ್‌ಗೆ ಅನುಕೂಲವನ್ನು ಒದಗಿಸಲಿದ್ದು, ಇದರೊಂದಿಗೆ ಪಾಲಿಸಿದಾರರು ಅನೇಕ ಸೌಲಭ್ಯಗಳ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ವಿಮಾ ವಿನಿಮಯವನ್ನು ಖರೀದಿಸುವುದರಿಂದ ಕ್ಲೈಮ್ ಇತ್ಯರ್ಥ, ವಿಮೆ ಮತ್ತು ಏಜೆಂಟ್ ಪೋರ್ಟೆಬಿಲಿಟಿ ಮುಂತಾದ ವಿಮಾ ಸೌಲಭ್ಯಗಳನ್ನು ಪಡೆಯಬಹುದು. ಎಲ್ಲಾ ವಿಮಾ ಕಂಪನಿಗಳ ಉತ್ಪನ್ನಗಳು ಬಿಮಾ ಸುಗಮ ವಿನಿಮಯ ವೇದಿಕೆಯಲ್ಲಿಯೇ ಲಭ್ಯವಿರುತ್ತವೆ. ಬಿಮಾ ಸುಗಮ್‌ನಲ್ಲಿನ ಪಾಲಿಸಿಯನ್ನು ಮಾರಾಟ ಮಾಡಲು ಏಜೆಂಟ್‌ಗೆ ಒಂದು ಆಯ್ಕೆಯೂ ಇರುತ್ತದೆ. ವಿಮಾ ವೇದಿಕೆಯ ಮೇಲ್ವಿಚಾರಣೆಯನ್ನು IRDA ಮಾಡುತ್ತದೆ. ಜೀವ ವಿಮಾ ಮಂಡಳಿಯು ಬಿಮಾ ಸುಗಮ್ (Bima Sugam) ಎಕ್ಸ್‌ಚೇಂಜ್‌ನಲ್ಲಿ ಶೇಕಡಾ 30 ರಷ್ಟು ಪಾಲನ್ನು ಹೊಂದಿದ್ದು, ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಶೇಕಡಾ 30 ರಷ್ಟು ಪಾಲನ್ನು ಹೊಂದಿದೆ. ಅದೇ ರೀತಿ ಆನ್‌ಲೈನ್ ಪಿಎಸ್‌ಬಿಯ ಪಾಲು ಶೇಕಡಾ 35 ಮತ್ತು ಬ್ರೋಕರ್ಸ್ ಅಸೋಸಿಯೇಶನ್‌ನ ಪಾಲು ಶೇಕಡಾ 5 ರಷ್ಟಿದೆ.

ಡಿಮ್ಯಾಟ್ ಖಾತೆಯಂತೆ ಇ-ವಿಮಾ ಖಾತೆಯನ್ನು ಹೊಂದಲಿರುವ ಪಾಲಿಸಿದಾರರು

ವೇದಿಕೆ ಅಡಿಯಲ್ಲಿ ಪಾಲಿಸಿದಾರರು ಡಿಮ್ಯಾಟ್ ಖಾತೆಯಂತಹ ಇ-ವಿಮಾ ಖಾತೆಯನ್ನು ಹೊಂದಿರುತ್ತಾರೆ. ಇದರಲ್ಲಿ ಅವರು ತಮ್ಮ ಮತ್ತು ಅವರ ಕುಟುಂಬದ ಸದಸ್ಯರ ಎಲ್ಲಾ ವಿಮಾ ಪಾಲಿಸಿಗಳನ್ನು ತಮ್ಮ ಆಯ್ಕೆಯ ವಿಮಾ ಭಂಡಾರದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿಮಾದಾರರು ತಮ್ಮ ಆರೋಗ್ಯ ವಿಮೆ, ವಾಹನ ವಿಮೆ, ಜೀವ ವಿಮೆಯನ್ನು ಇದರಲ್ಲಿ ಸುರಕ್ಷಿತವಾಗಿಡಲು ಸಾಧ್ಯವಾಗುತ್ತದೆ. ವಿಮಾ ಪಾಲಿಸಿ ವಿವರಗಳ ಡಿಜಿಟಲೀಕರಣದೊಂದಿಗೆ ವಿಮಾ ಪಾಲಿಸಿಯ ಆಧಾರದ ಮೇಲೆ ಬ್ಯಾಂಕುಗಳು ಸುಲಭವಾಗಿ ಸಾಲವನ್ನು ನೀಡಲು ಸಾಧ್ಯವಾಗುತ್ತದೆ. ವಿಮಾ ಹಕ್ಕುಗಳು ಮತ್ತು ಇತರ ಸೇವೆಗಳಿಗಾಗಿ IRDA ಬಿಮಾ ಸುಗಮ್ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಅನುಮೋದಿಸಿದೆ.

ಒಂದೇ ಸ್ಥಳದಲ್ಲಿ ಎಲ್ಲಾ ಕಂಪನಿಗಳ ವಿಮಾ ಉತ್ಪನ್ನಗಳು ಲಭ್ಯ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೊಸ ವಿಮಾ ವೇದಿಕೆ ಬಿಮಾ ಸುಗಮ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜನರು ಒಂದೇ ಸ್ಥಳದಿಂದ ಎಲ್ಲಾ ಕಂಪನಿಗಳ ವಿಮಾ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಸ್ಯಾಂಡ್‌ಬಾಕ್ಸ್‌ನಲ್ಲಿ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಲು ಈಗಾಗಲೇ ಪ್ರಾರಂಭಿಸಲಾಗಿದೆ. ಇದು ಹೊಸ ಪರಿಹಾರಗಳೊಂದಿಗೆ ಬರುವ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುತ್ತದೆ. ಐಆರ್‌ಡಿಎಐ ಅಧ್ಯಕ್ಷ ದೇಬಾಶಿಶ್ ಪಾಂಡಾ ಅವರು ಪ್ಯಾರಾಮೆಟ್ರಿಕ್ ವಿಮಾ ಉತ್ಪನ್ನಗಳನ್ನು ತರಲು ಮತ್ತು ಒಪಿಡಿ ಸೇವೆಗಳನ್ನು ಒಳಗೊಳ್ಳುವ ಅವಶ್ಯಕತೆಯಿದೆ ಎಂದು ನಂಬುತ್ತಾರೆ. ಪ್ರಸ್ತುತ, ದೇಶದಲ್ಲಿ ಆರೋಗ್ಯ ವಿಮಾ ಮಾರುಕಟ್ಟೆಯು ಸುಮಾರು 60,000 ಕೋಟಿ ರೂ.ಗಳಷ್ಟಿದೆ. ಮುಂಬರುವ ಕೆಲವು ವರ್ಷಗಳಲ್ಲಿ ಇದು ವಾರ್ಷಿಕವಾಗಿ 30-35 ಪ್ರತಿಶತದಷ್ಟು ದರದಲ್ಲಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಇದು ಕಳೆದ ಐದು ವರ್ಷಗಳಲ್ಲಿ ವಾರ್ಷಿಕವಾಗಿ 19 ಪ್ರತಿಶತದಷ್ಟಿತ್ತು.

ಡಿಮ್ಯಾಟ್ ರೂಪದಲ್ಲಿ ವಿಮೆಯ ಪ್ರಯೋಜನಗಳು

ಇ-ವಿಮಾ ಖಾತೆಯಲ್ಲಿ ಪಾಲಿಸಿದಾರನು ತನ್ನ ಎಲ್ಲಾ ಜೀವನ, ವಾಹನ, ಆರೋಗ್ಯ ವಿಮಾ ಪಾಲಿಸಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಹೊಂದಿರುತ್ತಾನೆ. ಇ-ವಿಮಾ ಖಾತೆಯಲ್ಲಿ ವಹಿವಾಟುಗಳು ಮತ್ತು ದಾಖಲೆಗಳು ಸೇರಿದಂತೆ ಎಲ್ಲಾ ರೀತಿಯ ವಿಮಾ ಪಾಲಿಸಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುತ್ತವೆ. ಇದರೊಂದಿಗೆ ಪಾಲಿಸಿದಾರರು ಪಾಲಿಸಿ ಪ್ರಾರಂಭ ದಿನಾಂಕ, ಮುಕ್ತಾಯ ಸ್ಥಿತಿ, ದಾಖಲಾತಿ, ವಿಳಾಸ, ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ವಿಮಾ ಪಾಲಿಸಿ ಬಾಂಡ್‌ನ ಭೌತಿಕ ಪ್ರತಿಯನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ವಿಮೆಯ ಪ್ರೀಮಿಯಂ ಪಾವತಿಯನ್ನು ನೇರವಾಗಿ ವಿಮಾ ಕಂಪನಿಗೆ ವರ್ಗಾಯಿಸಲಾಗುತ್ತದೆ ಮತ್ತು ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.