ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸ್ತಿರೋ ಬಿಟ್ ಕಾಯಿನ್ ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಷ್ಟ್ರಮಟ್ಟದಲ್ಲೂ ಬಿಟ್ ಸಖತ್ ಸದ್ದು ಮಾಡ್ತಿದೆ. ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ನ್ಯೂಸ್ಫಸ್ಟ್ ಸ್ಟುಡಿಯೋದಲ್ಲಿ ಕೂತು ಕೈ ವಿರುದ್ಧ ಪ್ರತ್ಯಾಸ್ತ್ರ ಹೂಡಿದ್ರು. ಅದೇ ಯೂತ್ ಕಾಂಗ್ರೆಸ್ ಚುನಾವಣೆಯ ಹ್ಯಾಕಿಂಗ್.
ಆರಗ ಜ್ಞಾನೇಂದ್ರ ಹೇಳಿದ್ದೇನು?
1. ಯುವ ಕಾಂಗ್ರೆಸ್ನ ಚುನಾವಣೆಯಲ್ಲಿ ಆಕ್ರಮ ನಡೆದಿದೆ
2. ಕಾಂಗ್ರೆಸ್ ನಾಯಕರೇ ಈ ಅಕ್ರಮ ಬಗ್ಗೆ ನನಗೆ ತಿಳಿಸಿದ್ದಾರೆ
3. ಆನ್ಲೈನ್ ಮುಖಾಂತರ ಯುವ ಕಾಂಗ್ರೆಸ್ ಚುನಾವಣೆ
4. ಶ್ರೀಕಿ ಬಳಸಿ ಈ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ
5. ಶ್ರೀಕಿ ಮೂಲಕ ಇಡೀ ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ
6. ಚಲಾವಣೆಯಾದ ಮತ ಒಂದೇ ಕಡೆ ಬರುವಂತೆ ತಂತ್ರ
7. ನನಗೆ ಲಿಖಿತ ದೂರು ನೀಡಿದರೆ, ತನಿಖೆ ಮಾಡಿಸುತ್ತೇನೆ
ಆರಗ ಹ್ಯಾಕಿಂಗ್ ಪ್ರತ್ಯಾಸ್ತ್ರಕ್ಕೆ ಹಸ್ತ ಪಡೆಯ ದಾಖಲೆ ಕೌಂಟರ್
ಗೃಹ ಸಚಿವರ ಯೂತ್ ಕಾಂಗ್ರೆಸ್ ಚುನಾವಣೆಯ ಹ್ಯಾಕಿಂಗ್ ವಿಚಾರಕ್ಕೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಡಪಾಲ್ ಚುನಾವಣೆ ದಿನ, ಶ್ರೀಕಿ ಬಂಧನದ ದಿನಾಂಕದ ಮೂಲಕ ಕೊಟ್ಟ ಕೌಂಟರ್.
ಪ್ರಿಯಾಂಕ್ ಖರ್ಗೆ ಕೌಂಟರ್
- ಯೂತ್ ಕಾಂಗ್ರೆಸ್ ಚುನಾವಣೆ – 2021ರ ಜನವರಿ 10, 11, 12
- ಈ ಚುನಾವಣೆಯ ಫಲಿತಾಂಶ ಬಂದಿದ್ದು -4 ಫೆಬ್ರವರಿ 2021
- ಈ ಯೂತ್ ಕಾಂಗ್ರೆಸ್ ಚುನಾವಣೆ ವೇಳೆ ಕಸ್ಟಡಿಯಲ್ಲಿದ್ದ ಶ್ರೀಕಿ
- ಶ್ರೀಕಿಗೆ ಸರ್ಕಾರ ಕಂಪ್ಯೂಟರ್ ಕೊಟ್ಟಿತ್ತೇ ಎಂದು ಖರ್ಗೆ ಪ್ರಶ್ನೆ
- ಈ ಬಗ್ಗೆ ಬಿಜೆಪಿ ಸ್ಪಷ್ಟಪಡಿಸಲಿ, ಇಲ್ಲವೇ ಸುಳ್ಳು ಹೇಳುವುದನ್ನ ಬಿಡಲಿ
- ನಲಪಾಡ್ ಮೇಲಿನ ಅರ್ಧದಷ್ಟು ಆಸಕ್ತಿ ಕಡಿಮೆ ಮಾಡಿ
- ಸರ್ಕಾರಿ ವೆಬ್ಸೈಟ್ ಹ್ಯಾಕ್ ಪ್ರಕರಣದ ತನಿಖೆಗೆ ತೋರಿಸಿ
- ಇದರಿಂದಲಾದ್ರೂ ಸರ್ಕಾರದ ಮಾನ ಉಳಿಸಬಹುದು
- ಆರಗ ಜ್ಞಾನೇಂದ್ರ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
IYC ಚುನಾವಣೆ – 2021ರ ಜನವರಿ 10,11,12,
ಫಲಿತಾಂಶ – 4/2/2021.ಈ ಅವಧಿಯಲ್ಲಿ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಸರ್ಕಾರ ಕಂಪ್ಯೂಟರ್ ಕೊಟ್ಟಿತ್ತೇ? ಬಿಜೆಪಿ ಸ್ಪಷ್ಟಪಡಿಸಲಿ, ಇಲ್ಲವೇ ಸುಳ್ಳು ಹೇಳುವುದನ್ನ ಬಿಡಲಿ.@nalapad ಮೇಲಿನ ಅರ್ಧದಷ್ಟು ಆಸಕ್ತಿ ಸರ್ಕಾರಿ ವೆಬ್ಸೈಟ್ ಹ್ಯಾಕ್ ಪ್ರಕರಣದ ತನಿಖೆಗೆ ತೋರಿದರೆ ಸರ್ಕಾರದ ಮಾನ ಉಳಿಸಬಹುದು. pic.twitter.com/SyQr6hmRy7
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 17, 2021
ಟ್ವಿಟರ್ನಲ್ಲಿ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿರುವ ವಿಚಾರ ಗೊತ್ತಾಯಿತು. ನಾವು ಪ್ರಿಯಾಂಕ ಖರ್ಗೆ ಅಥವಾ ಕಾಂಗ್ರೆಸ್ನವರ ವಿರುದ್ಧ ಮಾತನ್ನಾಡುತ್ತಿಲ್ಲ. ಅವರ ಪಕ್ಷದವರೇ ನೇರವಾಗಿ ನಮಗೆ ಕರೆ ಮಾಡಿದ್ದಾರೆ. ಐವೈಸಿ ಚುನಾವಣೆಯಲ್ಲಿ ಆಕ್ರಮ ಆಗಿರಬಹುದು ಎಂದಿದ್ದಾರೆ. ಈ ವಿಚಾರಕ್ಕಾಗಿ ನಾನು ಇಂದು ಮಾಧ್ಯಮದಲ್ಲಿ ವಿಚಾರ ಪ್ರಸ್ತಾಪಿಸಿದ್ದೇನೆ ಅಷ್ಟೇ. ಶ್ರೀಕಿಯೇ ಹ್ಯಾಕ್ ಮಾಡಿದ್ನೋ, ಬೇರೆ ಯಾರೋ ಮಾಡಿದ್ರೋ ಗೊತ್ತಿಲ್ಲ
ಆರಗ ಜ್ಞಾನೇಂದ್ರ, ಗೃಹ ಸಚಿವ
ಈ ಏಟು ತಿರುಗೇಟು ಒಂದೆಡೆಯಾದ್ರೆ, ಅಸಲಿಗೆ ಹ್ಯಾಕ್ ಆಗಿತ್ತಾ ಚುನಾವಣಾ ವೆಬ್ಸೈಟ್ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ. ಒಂದು ವೇಳೆ ಎಲೆಕ್ಷನ್ನಲ್ಲಿ ಹ್ಯಾಕಿಂಗ್ ಆಗಿದ್ದು ನಿಜವಾದರೆ, ಬಿಜೆಪಿಗೆ ಇದೇ ಅಸ್ತ್ರವಾಗಲಿದೆ ಎಂದೂ ವಿಶ್ಲೇಷಿಸಲಾಗ್ತಿದೆ. ಆದ್ರೆ ಇದನ್ನ ಕೈ ಸಾರಾಸಗಟಾಗಿ ಕೈಪಡೆ ತಳ್ಳಿಹಾಕಿದೆ. ಆದ್ರೂ ಆರಗರ ಹ್ಯಾಕಿಂಗ್ ಪ್ರತ್ಯಾಸ್ತ್ರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರೋದಂತೂ ಸುಳ್ಳಲ್ಲ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ