#BitCoin ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ -ಸುರ್ಜೇವಾಲ ಗಂಭೀರ ಆರೋಪ


ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿರುವ ಬಿಟ್​​ ಕಾಯಿನ್​ ಪ್ರಕರಣ ಇದೀಗ ರಾಷ್ಟ್ರ ರಾಜಕಾರಣದಲ್ಲೂ ಚರ್ಚೆ ಆಗ್ತಿದೆ. ಅಂತೆಯೇ ಇಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ.. ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ವಿಲನ್ ಅಂಡ್ ಹೀರೋ
ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನಡೆದ ಅತಿ ದೊಡ್ಡ ಹಗರಣವೇ ಬಿಟ್ ಕಾಯಿನ್ ಕೇಸ್​​. ಇದರಲ್ಲಿ ಬಿಜೆಪಿ ಹಿರೋ ಮತ್ತು ವಿಲನ್ ಆಗಿದೆ. ಕರ್ನಾಟಕದ ಬಿಟ್ ಕಾಯಿನ್ ಹಗರಣ ಅತಿದೊಡ್ಡ ಹಗರಣ. ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ ಇದೆ. ಕರ್ನಾಟಕದ ಬಿಜೆಪಿ ಸರ್ಕಾರ ಸಾಕ್ಷಿಗಳನ್ನ ಮುಚ್ಚುತ್ತಿದೆ, ಪ್ರಕರಣ ಹೊರಬರದಂತೆ ತಡೆಯುತ್ತಿದೆ ಎಂದು ಆರೋಪಿಸಿದರು.

ಅಂತಾರಾಷ್ಟ್ರೀಯ ಹಗರಣವನ್ನ ತನಿಖೆ ಮಾಡೋದು ಬಿಟ್ಟು ಮುಚ್ಚಿಹಾಕುತ್ತಿದೆ. ಇದು 12 ರಿಂದ 15 ದೇಶಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಷ್ಟಾದರೂ ಇಡಿ ಅಥವಾ ಐಟಿಗೆ ಪ್ರಕರಣವನ್ನ ವರ್ಗಾಯಿಸಿಲ್ಲ. ಹ್ಯಾಕರ್ ಶ್ರೀಕಿಷ್ಣನನ್ನ ನಾಲೈದು ಪ್ರಕರಣದಲ್ಲಿ 100 ದಿನ ಜೈಲಲ್ಲಿ ಇಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.

News First Live Kannada


Leave a Reply

Your email address will not be published.